ತಡೆಯುವ ಬನ್ನಿ ಸೋದರರೆ
ಕನ್ನಡ ತಾಯಿಯ ಕಣ್ಣೀರ
ಬಾಡಿದ ಆ ಕಣ್ಣುಗಳಲ್ಲಿ
ಹರಿಸಲು ಇಂದೇ ಪನ್ನೀರ

ಬೆಳಗಾವಿಯನು ಉಳಿಸುತಲಿ
ಸ್ವಾಭಿಮಾನವ ಮೆರೆಸೋಣ
ಪರಭಾಷಾ ಕಳೆ ಕೀಳುತಲಿ
ನಮ್ಮತನವನು ಬೆಳೆಸೋಣ

ಕನ್ನಡ ನಾಡನು ಕಾಯುತಲಿ
ಕನ್ನಡ ತಾಯಿಯ ಉಳಿಸೋಣ
ನಲುಗಿದ ಆ ಕಣ್ಣುಗಳಲ್ಲಿ
ನಲ್ಮೆಯ ಧಾರೆ ಹರಿಸೋಣ

ಕಾವೇರಿಯನು ತಡೆಯುತಲಿ
ನಮ್ಮಯ ನ್ಯಾಯವ ಗಳಿಸೋಣ
ಧ್ವನಿ ಎತ್ತುತ ಆ ಕೇಂದ್ರದಲಿ
ಕರ್ನಾಟಕವ ಕಾಯೋಣ

ಕನ್ನಡ ಶಕ್ತಿಯ ತೋರುತಲಿ
ಅನ್ಯಾಯಗಳ ಮೆಟ್ಟೋಣ
ಸೊರಗಿದ ತಾಯಿಯ ಕಂಗಳಲಿ
ಆಶಾ ಜ್ಯೋತಿಯ ಬೆಳಗೋಣ
*****