ಮೂಲ: ಕಾಳೀಕೃಷ್ಣ ಗುಹ
ಕತ್ತಲಲ್ಲಿ ನಾನು ನಡೆಯುತ್ತಿದ್ದಾಗ
ನಡೆದದ್ದು ಏನು?
ಕತ್ತಲಿನ ಬಗ್ಗೆ
ಮುಖವಾಡಗಳ ಬಗ್ಗೆ
ಮಾತಾಡಿದ್ದು ಯಾರು?
ಯಾರು ಮಾತಾಡಿದ್ದು ಹುಟ್ಟನ್ನು ಕುರಿತು,
ಸೂರ್ಯನ್ನ ಕುರಿತು,
ಸಂಗೀತ ಕುರಿತು?
ಯಾರೆಂದು ಗುರುತಿಸಲು ಆಗಲೇ ಇಲ್ಲ.
ಕತ್ತಲ ಹಾದಿ ಮುಗಿಸಿ
ಹೊರಬಂದ ಮೇಲೆ
ನನ್ನ ಹಣೆ ರಕ್ತವನ್ನು
ನಾನೇ ಒರೆಸಿಕೊಂಡೆ
ಯಾರಾದರೇನು?
ನಾನಾಗಬೇಕು ನಾನು
ಮುಖವೆತ್ತಿ ಆಕಾಶದತ್ತ ದಿಟ್ಟಿಸಿದೆ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.