ಮರೆಯ ಬೇಡ ಮನುಜ ನೀನು ಮಾನವೀಯತೆ| ಮೆರೆಯಬೇಡ ಮನುಜ ನೀನು ಮದವೇರಿದ ಪ್ರಾಣಿಯಂತೆ| ಮನುಷ್ಯಗಲ್ಲದೆ ಮಾನವತೆಯಮೌಲ್ಯ ಪ್ರಾಣಿಗಳಿಗೆ ಶೋಭೆ ತರುವುದೇ|| ಅಧಿಕಾರ ದರ್ಪ ಯಾರ ಬಳಿ ಶಾಶ್ವತವಾಗಿ ನಿಂತಿದೆ| ಯಾರಬಳಿ ಲಕ್ಷ್ಮಿ ಸದಾ ಇರುವಳೆಂದು ಭ್ರಮಿಸುವೆ|...

ಗಾಯಗೊಂಡು ಚೀರುವೆದೆಗೆ ಗುಟುಕು ಕೊಟ್ಟೆ ಮುಖವಾಡಗಳ ಗೂಢದಲ್ಲಿ ಬುದ್ಧಿಬುರಖಾಗಳ ಬಡಿವಾರದಲ್ಲಿ ಗಾಢವಾಗದೆ ಗಡಿದಾಟಿ ದೋಣಿ ಮೀಟಿ ಏಕಾಂತ ಏದುಸಿರಿಡುವಾಗ ಕಾಂತಾಸಮ್ಮಿತವಾದೆ. ಕೆಣಕುವ ಬೆಡಗು ಗುಟರುವ ಗುಡುಗು ಚಳಿಯ ನಡುಗು- ಗಳ ಉಜ್ಜುವಿಕೆಯಲ್ಲಿ ಕಿ...

ಏನು ಪೇಳಿದನಮ್ಮ ನನ್ನಯ ಪ್ರಿಯನು ಏನು ಸಂದೇಶವ ನೀ ತಂದೆ ಸಖಿಯೆ || ಪ || ಏತಕೆ ಬಾರನೋ ಪ್ರಾಣಪ್ರಿಯನಮ್ಮ ಕಾತರಿಸಿದೆ ಜೀವಾ ತಾಳಲಾರೆನಮ್ಮ ಯಾತನೆ ತಾಳೆನು ಮುಳ್ಳ ಮೇಲಿನ ಬಾಳು ಆತನ ಮಾತೇನು ಪೇಳೆ ಸಖಿ || ೧ || ಕಣ್ಣಲಿ ಅವನದೆ ರೂಪವು ಕುಣಿದಿದೆ ...

ಈ ಗತಿಶೀಲ ಜಗದಲ್ಲಿ ಅತಿಯಾಗದೆ ಇರು ಇತಿಯಾಗದೆ ಇರು ಶ್ರುತಿ ಮಾಡಿದ ವೀಣೆಯ ಹಾಗಿರು ನುಡಿಸುವ ಗಾಯಕ ನುಡಿಸುವ ವೇಳೆಗೆ ನಡೆಸುವ ಗುರು ನಡೆಸುವ ವೇಳೆಗೆ ತಡವರಿಸುವ ಭಯ ಯಾತಕೆ ಹೇಳು ಮಗುವಿನ ಸೋಜಿಗ ಅಂತೆಯೆ ಇರಲಿ ನಗುವಿನ ಚೆಲುವು ಮಾಯದೆ ಇರಲಿ ಮುಗಿ...

ಪ್ರೇಮಕೂ ಸುಳ್ಳಿಗೂ ಎಂತಹ ನಂಟು ಕವಿಯ ಕೇಳಬೇಕು ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಹೇಳಬೇಕು //ಪ// ಇವಳಿಗೆ ಅವನು ಹುಣ್ಣಿಮೆ ಚಂದ್ರ ಅವನಿಗೆ ಇವಳು ನೈದಿಲೆಯು ಇವರ ಮಿಲನವೆ ಮಧುಮಹೋತ್ಸವ ಇದಕೆ ಯಾವುದು ಎಣೆಯು! ಜಗತ್ತು ಎಂದರೆ ಅವನಿಗೆ ಇವಳು ಇವ...

ಓಟು ಕೇಳಲು ಬಂದಾಗ ರಾಜಕಾರಣಿಗಳ ಮೊಗ ಚಂದವೇ ಚಂದ ಬೇಡುವರು ಓಟಿನ ಬಿಕ್ಷೆಗಾಗಿ ಚಂದಾ ಚಂದಾ ತುಂಬಿ ತುಳುಕುವುದು ಮೊಗದಲ್ಲಿ ಆನಂದವೇ ಆನಂದ ಗೆದ್ದರವರ ಹಿಡಿಯುವರಿಲ್ಲ ತಲೆತಿರುಗುವುದು ಮದದಿಂದ ಸೋತರೆ ಹಿಡಿಯುವರು ತಿಮ್ಮಪ್ಪನ ಪಾದಾರವಿಂದ ಹಾಡುವರು ...

ಕನಸುಗಳು ಒಡೆಯುತ್ತವೆ ಕೈ ಜಾರಿ ಕೆಳಬಿದ್ದು ಚೂರಾಗುತ್ತವೆ. ಹೊಸ ಕನಸುಗಳು ಹುಟ್ಟುತ್ತವೆ ಅಸ್ಪಷ್ಟ ಆಕಾರ ಕಣ್ಣು ಮೂಗು ಮೂಡಿ ರಾಗ ತಾಳ ಲಯಗಳೇ ಕಾಣದಂತೆ ಹಾಡಿ ಕೊನೆಗೊಮ್ಮೆ ಆಕಾರ ಪಡಕೊಳ್ಳುತ್ತವೆ. ಮತ್ತೆ ಜಾರಿ ಬಿದ್ದು ಒಡೆಯುವ ಭಯದಲ್ಲೇ ಬೆಳೆಯು...

ವಿಧಿಯ ದುರ್ಲಕ್ಷ್ಯಕ್ಕೆ ಜನದ ನಿರ್ಲಕ್ಷ್ಯಕ್ಕೆ ತುತ್ತಾಗಿ ಕುಳಿತು ನಾನೊಬ್ಬನೇ ದುಃಖಿಸುವೆ ನನ್ನೀ ಅನಾಥತೆಗೆ. ಕಿವಿಸತ್ತ ಸ್ವರ್ಗಕ್ಕೆ ಮೊರೆಯಿಡುವೆ ಒಂದೆ ಸಮ. ಬರಿವ್ಯರ್ಥ ಚೀರಿಡುವೆ ನನ್ನ ಬಾಳನು ನಾನೆ ಶಪಿಸಿ, ಭರವಸೆ ಸುರಿವ ಯಾರ ಬಾಳನೊ ಬಯಸಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...