ಕನಸುಗಳು ಒಡೆಯುತ್ತವೆ ಕೈ
ಜಾರಿ ಕೆಳಬಿದ್ದು ಚೂರಾಗುತ್ತವೆ.
ಹೊಸ ಕನಸುಗಳು ಹುಟ್ಟುತ್ತವೆ
ಅಸ್ಪಷ್ಟ ಆಕಾರ ಕಣ್ಣು ಮೂಗು
ಮೂಡಿ ರಾಗ ತಾಳ ಲಯಗಳೇ
ಕಾಣದಂತೆ ಹಾಡಿ ಕೊನೆಗೊಮ್ಮೆ
ಆಕಾರ ಪಡಕೊಳ್ಳುತ್ತವೆ. ಮತ್ತೆ
ಜಾರಿ ಬಿದ್ದು ಒಡೆಯುವ ಭಯದಲ್ಲೇ
ಬೆಳೆಯುತ್ತವೆ ಹೆಮ್ಮರವಾಗಿ
ಎಲೆಯುದುರಿಸಿ ಬೋಳಾಗಿ
ಕಳಚಿಕೊಳ್ಳುತ್ತವೆ. ಮತ್ತೆ ತುಂಬಿ
ತೊನೆಯಲೆಂದೇ ಬರಿದಾಗುತ್ತವೆ.
*****