ಓಟು ಕೇಳಲು ಬಂದಾಗ ರಾಜಕಾರಣಿಗಳ
ಮೊಗ ಚಂದವೇ ಚಂದ
ಬೇಡುವರು ಓಟಿನ ಬಿಕ್ಷೆಗಾಗಿ
ಚಂದಾ ಚಂದಾ
ತುಂಬಿ ತುಳುಕುವುದು ಮೊಗದಲ್ಲಿ
ಆನಂದವೇ ಆನಂದ
ಗೆದ್ದರವರ ಹಿಡಿಯುವರಿಲ್ಲ
ತಲೆತಿರುಗುವುದು ಮದದಿಂದ
ಸೋತರೆ ಹಿಡಿಯುವರು ತಿಮ್ಮಪ್ಪನ
ಪಾದಾರವಿಂದ
ಹಾಡುವರು ಗೋವಿಂದಾ ಗೋವಿಂದ
*****