ಮರೆಯ ಬೇಡ ಮನುಜ

ಮರೆಯ ಬೇಡ ಮನುಜ ನೀನು
ಮಾನವೀಯತೆ|
ಮೆರೆಯಬೇಡ ಮನುಜ ನೀನು
ಮದವೇರಿದ ಪ್ರಾಣಿಯಂತೆ|
ಮನುಷ್ಯಗಲ್ಲದೆ ಮಾನವತೆಯಮೌಲ್ಯ
ಪ್ರಾಣಿಗಳಿಗೆ ಶೋಭೆ ತರುವುದೇ||

ಅಧಿಕಾರ ದರ್ಪ ಯಾರ ಬಳಿ
ಶಾಶ್ವತವಾಗಿ ನಿಂತಿದೆ|
ಯಾರಬಳಿ ಲಕ್ಷ್ಮಿ ಸದಾ
ಇರುವಳೆಂದು ಭ್ರಮಿಸುವೆ|
ಯಾರ ಬಳಿ ಯೌವನ
ಸೌಂದರ್ಯ ಸ್ಥಿರವಾಗಿ ನೆಲೆಸಿದೆ|
ಯಾವುದು ಇಲ್ಲಿ ಶಾಶ್ವತವಲ್ಲ
ಎಲ್ಲವೂ ಕಲಾತೀತ, ಎಲ್ಲವೂ ಅಶಾಶ್ವತ||

ಮಾನವತೆಯಿಂದ ನೋಡಲದುವೆ
ಜಗವೇ ಸುಂದರ|
ಮಾನವತೆಯಿಂದ ಬದುಕಲದುವೆ
ಸಮಾಜ ದೇವಮಂದಿರ|
ಮಾನವತೆಯೆಂಬ ವರವ
ಆ ದೇವನಿತ್ತಿಹನು ಮಾನವ|
ಅದನೆ ಮರೆತು ಆಗಬೇಡ
ಮನುಜ ನೀನು ದಾನವ||

ದಯೆಯು ತುಂಬಿ
ದಾನ ಧರ್ಮ ಮೇಳೈಸಲಿ|
ಕರುಣೆಯ ಕಡಲು ಉಕ್ಕಿ
ಶಾಂತಿ ಸಮಾನತೆಯು ಎಲ್ಲೆಡೆ ನೆಲಸಲಿ|
ಸರ್ವೋಜನ ಸುಖಿನೋಭವಂತು ಎಂಬ
ಶಾಂತಿ ಮಂತ್ರ ನಮ್ಮಲಿ ಪ್ರತಿಬಿಂಬಿಸಲಿ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಗ್ಯ ಕೆಟ್ಟಿದ್ದು ಹೇಗೆ?
Next post ಬದುಕು ಭವ್ಯವಾಗಲಿ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…