ಓ! ವಾಣಿ! ಸರಸಕವಿತಾಶ್ರೇಣಿ, ಅಜನ ಸ- ಟ್ಟದ ರಾಣಿ, ರಸಿಕ ಜನ ಹೃದ್ವಲ್ಲಕಿಯ ತಂತ್ರಿ- ಯಂ ಮಿಡಿಸಿ ಮಂದಹಾಸಂಗೈವ ದಿವ್ಯ ವೀ- ಣಾಪಾಣಿ, ಫಣಿವೇಣಿ, ಶುಭವಾಣಿ ನಮಿಸುವೆಂ ಭಯ ಭಕ್ತಿಯಿಂದೆಲೌ, ತಾಯೆ, ಶಾರದೆಯೆ, ನೀ- ನೆನ್ನ ನಾಲಗೆದುದಿಯೊಳಾವಗಂ ಲೀಲೆಯ...

ಏಳು ಮಗಳುದಿರು ಚೋಳರಾಯನಿಗೆ, ಒಬ್ಬ ತಾಯ ಸಿರಿಮಕ್ಕಳು; ಸಾಲದೊಂದು ದಿನ ಹೇಳಿ ಮುಗಿಸುವರೆ ಹಬ್ಬಿಹೆಣೆದವರ ಹಿತುವನು. ಏಳು ನೈದಿಲೆಗಳಕ್ಕತಂಗಿಯರು, ಮಾಲೆಯೊಂದರಲ್ಲಿ ಹೊಂದಿಕೆ, ಅವರ ತಂದೆಯೋ, ಧೀರ ಕಾಳಗದೊ ಇವರ ಚಿಂತೆಯನೆ ಕೊಳ್ಳನೆಣಿಕೆಯಲಿ- ಅವನಿಗ...

ಚೆಲುವಿಗಿಲ್ಲವು ಬಡವ-ಬಲ್ಲಿದ- ರೆಂಬ ಭೇದದ ಭಾವವು!- ನುಡಿಯಿದನು ಪರಿಕಿಸಲು ಈ ದಿನ ಕಂಡ ಮಗುವೇ ಸಾಕ್ಷ್ಯವು! ನಡೆದರೂ ಸಹ ತೇಲುವಂತಿಹ ನನೆಗೆ ಮಿಂಚನು ಪೂಸುತ ಮುಗ್ಧತೆಯೊಳದನದ್ದಿ ತೆಗೆದೊಲು ಹಸುಳೆಯಿದೆ ನಗೆ ಸೂಸುತ! “ಹೂವಿದಕೆ ಮತ್ತಾವ ದುಂಬಿಗ- ...

ಎನ್ನ ಮನವದು ಅಹುದು ರನ್ನ ಗನ್ನಡಿ ಗೆಳತಿ ಬಂದೊಮ್ಮೆ ನೋಡು ನಿನ್ನಯ ರೂಪವನ್ನಿಲ್ಲಿ ಏನಿಹುದು? ಏನಿಲ್ಲವೆಂದು ದೂರದಿ ನಿಂದು ಹಿಂದಿರುಗಿ ಹೋಗದಿರು ಸಾಶಂಕಳಾಗಿ ನೀ. ಹಿಂದೊಮ್ಮೆ ಕೇಳಿದೆನು ಕೆಳೆತನದ ಗುರುಮಂತ್ರ ಅ೦ದಿನಿಂದದನು ಜಪಿಸುವೆನು ಒಮ್ಮನದಿ...

ಇದು ಮೀಸಲೇ ನನಗೆ, ಈ ಬೆಳ್ಳಿ ಬಟ್ಟಲೊಳು ರತ್ನಕಾಂತಿಯ ಚೆಲ್ಲಿ ಕಳಕಳಿಪ ದಾಳಿಂಬೆ? ನೂತ್ನ ಋದ್ಧಿಯ ಪಡೆದ ಮೋದದೊಳಗೀ ಜಿಹ್ವೆ ಇದುವರೆಗು ಕಾರ್ಪಣ್ಯದೊಳಗಿದ್ದೆನೆನುತಿಹುದು ಬಿತ್ತಬಿತ್ತದ ರಸವ ಸವಿದು ಸವಿದಾಕ್ಷಣದಿ ಆಯುಷ್ಯ ಸಾರವನು ಬಟ್ಟಿಯಿಳಿಸುವ ...

೧ ಇಳೆಯಿದೆ ನಿನ್ನಯ ಕೊಳಲಿದೆ ಗೆಳೆಯನೆ ನೀ ಬೆಳೆವ ಕಳೆಯ ಕೊಳಲನ್ನಿನ್ನು ಘಳಿಲನೆ ತಳೆದೂದುತ್ತಲೆ, ಕಳೆಗೊಳಿಸೈ ಇಳೆಯ ಮಕ್ಕಳನು ಮತ್ತೊಮ್ಮೆ! ೨ ಎಸಕದ ನಿನ್ನಾ ಕೊಳಲಿನ ಹೆಸರಿನ ಹೂಬಿಸಿಲಿನಿಂದ ಹಸನಿಸು ಮುಖವ! ಹೊಸಹೊಸದಿಹ ಕೊಳಲೊಳಗಿನ ನಸು ಬಿಳೆ ಬೆ...

ಜಯಮದಿರೆ, ಜಯಮದಿರೆ, ಜಯಮದಿರಾದೇವಿ ಜಯಮದಿರಾದೇವಿ ಆರುತಿಬೆಳಗುವೆ ಆನಂದೇಶ್ವರೀ, ಆನಂದೇಶ್ವರೀ || ಪಲ್ಲ || ನಿನ್ನಯ ಬಲಿಯೊಳು ನರನೊಮ್ಮೆ ಸಿಗಲೂ, ನರನೊಮ್ಮೆ ಸಿಗಲೂ | ನಿನ್ನಯ ಶೆರೆಯೊಳಮಾಡುವಿಯವನಾ, ಮಾಡುನಿಯವನಾ || ೧ || ಹೆಂಡರು ಮಕ್ಕಳ ದೂರುತ...

ಶಾಂತಿ ಸೌರಭ ಮಿಲಿತ, ಲಲಿತ ಹರ್ಷೊತ್ಕಲಿತ, ಮುದಿತ ಶುಕ-ಪಿಕ-ಶಾರಿಕಾದಿ ಪಕ್ಷಿಸ್ತೋಮ ಕಲಕಲ ನಿನಾದಯುತ, ವಿವಿಧ ಪುಷ್ಪಿತ ಕುಸುಮ ನಿಚಯ ಮಧು ಸಂಗ್ರಹೋದ್ಯುಕ್ತ ಷಟ್ಪದ ನದಿತ, ಶುದ್ಧ ಪುಣ್ಯಾರಣ್ಯ ಭೂಮಿಯೆಸೆವುದದೊಂದು ಅಲ್ಲಿ ಕುಲಪತಿಯೋರ್ವನಿರುವ ಸಾ...

1...2627282930...933

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...