ಅಭಯವಿನಯಗಳೆಂಬ ಷಡ್ಜಪಂಚಮದೊಳಗೆ
ಸದ್ಗುಣಸ್ವರಮೇಳ ಮೂಡುತಿಹುದು
ಬಗೆಬಗೆಯ ಬೆರೆತದೊಳು ತೆರತೆರದ ರಂಜನೆಯ
ಧೀರಾನುಭೂತಿಗಳ ರಸವ ತಳೆದು
ಅಂಥಾತ್ಮಶೀಧುಗಳ ಸಿಂಧುವೆನಲೆಸೆವುದೀ
ದೈವಸುಂದರಭಾವ ಜಾನಪದಿಕ
ಅದರುತ್ಸವಂಗಳೇ ನಮ್ಮ ಹೃದಯೋತ್ಸವಗ-
ಳದರೆಡೆಯೊಳೇ ಶಾಂತ ಭವದ ಪಥಿಕ.
ಶಿವದ ನೆಲೆಯನು ಬಲ್ಲ ವಿಪುಲಮತಿಗಳ ತಡೆದ ಧ್ಯಾನಬಿಂಬ,
ನೆನೆದೊಡನೆ ಕೊಳೆತೊಳೆದು ನಲವೆರೆದು ನಿಲ್ಲೆನ್ನ ಮನದ ತುಂಬ.
*****


















