ನನಗೂ ಸ್ವಲ್ಪ ಕಾಲಾವಕಾಶ ಕೊಡು ನಿನ್ನ ಪರೀಧಿಯಿಂದ| ಪ್ರೇಮಾನುಬಂಧನದಿಂದ ಸ್ವಲ್ಪ ಹೊರಗೆ ಹೋಗಿ ಜಗವ ಸುತ್ತಿ ನೋಡುವೆ| ಹಾಗೆ ವಿಹರಿಸಿ ಸಲ್ಪ ಮಜವ ತಂದುಕೊಳ್ಳುವೆ ನವನಾಗರೀಕರಂತೆ ನಾನು ನಟಿಸಲು ಪ್ರಯತ್ನಿಸುವೆನು|| ಗೆಳೆಯರೊಡನೆ ಸೇರಿ ಹರಟೆ ಹೊಡೆದ...

ಒಪ್ಪೊತ್ತಿನ ಊಟದಲ್ಲಿ ಹರಕು ಬಟ್ಟೆ ಬೆಳಕಿನಲ್ಲಿ ಅಳುವಿನಲ್ಲಿ ನಗುತ ನಾನು ಸೆಳವಿನಲ್ಲಿ ತೇಲುತ- ನೆಲವ ನೆಚ್ಚಿ ಇದ್ದೆನು ಬೆವರಿನಲ್ಲಿ ಬಾಳುತ ಒಡಲ ಸುಖ, ಪ್ರೀತಿ ಮಾತು ಬರುವುದೆಂದು ಕಾಯುತ. ಮಹಲಿನಿಂದ ಕುರ್ಚಿಯಿಂದ ಭೂಮಿಯೊಡಲ ಬಿರುಕಿನಿಂದ ಎದ್ದ...

ಆಕಾಶದಿಂದ ಜಾರಿ ನಕ್ಷತ್ರ ಗುಂಪಿನಿಂದ ಕಳಚಿ ಬಿದ್ದ ಒಂಟಿ ನಕ್ಷತ್ರ, ರಾತ್ರಿ ಕತ್ತಲಲಿ ಉದುರುವ ಮಿಂಚು, ಹಗಲಿನಲ್ಲೇಕೆ ಹುಡುಕುವಿರಿ? ನೋವಿನ ಸುರಂಗದಿಂದ ಕಣ್ಣುಗಳ ಆಳಕ್ಕಿಳಿದು ಝಲ್ಲೆಂದು ಉದುರುವ, ಗಾಢ ಕತ್ತಲೆಯಲಿ ಜಾರುವ ಬೆಳಕಿನಕಿಡಿ ಮಿಂಚಿನ ...

ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ...

ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ| ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ| ಹ್ವಾರ್ಯಾನಿಲ್ಲೇನೊ || ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ| ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ| ನಾರ್ಯಾರಿಲ್ಲೇನೊ |೧| ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ|...

ಗೂಡು ಕಟ್ಟಿದ ಹಕ್ಕಿ ತೊರೆದು ಹೋಯಿತಲ್ಲೊ ಹಾಡು ಮಾಡಿದ ಕೊಳಲ ಮುರಿದು ಹೋಯಿತಲ್ಲೊ || ಪ || ಬಿರುಬಿಸಿಲಿನ ಬನಕೆ ಹಸಿರಾಗುವೆನೆಂದು ಬಿರಿದು ನಿಂತ ನೆಲಕೆ ಮಳೆಯಾಗಿ ಬರುವೆನೆಂದು ನುಡಿದು ಹೋದ ಮಾತು ಅದರೊಡನೆ ಹೋಯಿತಲ್ಲೊ ಬಳಲಿ ಬೆಂದ ಬದುಕು ಮುಂಗಾ...

ತೌರಿಗೆ ಹೋದವಳು ಬರಲು ತಡವಾದಲ್ಲಿ ತಳಮಳ ಕಳವಳ ಹೇಳೋಕೆ ತೀರದು. ಅಂಗಳದಿ ಪ್ರಿಯವಾದ ರಂಗೋಲಿ ನಗುವಿಲ್ಲ ಹೂಬಳ್ಳಿ ಗಿಡಗಳಿಗೆ ನೀರಿಲ್ಲ ದೇವರ ಮುಂದಿನ ದೀಪಿಲ್ಲ. ಒಳಗೂ ಬಣ ಬಣ ಹೊರಗೂ ಬಣ ಬಣ ಲಲ್ಲೆ ಹೊಡೆಯಲು ಲಲಿತೆ ಅವಳಿಲ್ಲ ತಿನ್ನಲು, ಕುಡಿಯಲು ಸ...

ಒಕ್ಕಲೆಬ್ಬಿಸದಿರಿ ನನ್ನ ಈ ತುಂಡು ನೆಲವೆ ನನಗೆ ಅನ್ನ ಚಿನ್ನ ಅಗೋ…ಅದೇ ನಾ ಕೈಯಾರೆ ಬೆಳೆದ ನಿಂಬೆ ದಾಳಿಂಬೆ ಹೇಗೆ ತೂಗಿದೆ ನೋಡಿ ಚಾಚಿ ರೆಂಬೆ ಕೊಂಬೆ ಇಗೋ… ಇದೇ ಬಾಳೆ…. ಹೊಂಬಾಳೆ ಇನ್ನೇನು ಹಣ್ಣಾಗಲಿದೆ ನಾಳೆ ಇನ್ನೀ&#8230...

ಹಕ್ಕಿ-ಪಕ್ಕಿ ಮೂಕವಾಗಿ ಗಿರಿ-ಶಿಖರ ಮೌನತಾಳಿ ಗಿಡ-ಮರ ಆಗೊಮ್ಮೆ ಈಗೊಮ್ಮೆ ಸುಯ್ಯೆಂದು ಉಸಿರು ಬಿಡುತಿವೆ ಎಲ್ಲೋ ನರಿಯ ಕೂಗೊಂದು ಕೇಳುತಿದೆ ಜಿರ್ರೋ ಎನ್ನುತಿದೆ ಜೀರುಂಡೆ ಖಗ-ಮೃಗ ಬರುತಿಹವು ಬಾಯಾರಿಸಲು ನದಿ-ಸಾಗರದೊಡಲು ಸೇರಲು ಬಯಸುತಿವೆ ಹಳ್ಳ-ಕ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...