ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು? ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ ಇ...

ತುಂಬುಪೆರೆಯನು ಕಂಡು ಕಡಲುಬ್ಬಿ ಹರಿವಂತೆ ದೇಗುಲದೊಳುಬ್ಬುವೀ ಜನವ ಕಂಡು ಉಬ್ಬುವುದು ನನ್ನ ಮನ ಮತ್ತೆಲ್ಲು ತಾಳದಿರು- ವುಬ್ಬಿನೊಳು ಹಬ್ಬುಗೆಯ ರಸವ ಕೊಂಡು ದಿವ್ಯ ನೀಲದ್ಯುತಿಯ ಹನಿಯನುಣಿಸುವ ಹೀರ- ಮಕುಟದೆಳೆನಗೆಯ ಸುಂದರಮೂರ್ತಿಯ ಕಂಡು ತರ್ಕದ ಬಿ...

“ಶಾಲೆಗೆ ಹೋಗುವುದು ಬೇಡ ಖುರಾನ್ ಓದು ಅಷ್ಟೇ ಸಾಕು. ಹೊರಗೆ ಹೋದಿಯಾ ಜೋಕೆ ಬುರ್ಖಾ ಧರಿಸು” ಇದು ಅಪ್ಪನ ಕಟ್ಟಾಜ್ಞೆ ಬಕ್ರೀದ್ ಹಬ್ಬ ಬಂದಿತು ಅಪ್ಪ ತಂದರು ಝುಮುಕಿ, ಬೆಂಡೋಲೆ ಸುರ್ಮಾ, ಬಟ್ಟೆ, ಚಪ್ಪಲಿ, ಅತ್ತರು, ಮೆಹಂದಿ, ಎಲ್ಲವು ಖುಶಿಪ...

ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಮನಗಳು ತೆರೆದಿವೆ ಗಾಳಿ ಕೊಳಲ ನೂರು ಸ್ವರಕೆ ಅಬ್ಬರದ ಮನ ಜಾ...

ಮೂಲ: ಪಿಗಟ್ (Tortoise ಎಂಬ ಇಂಗ್ಲಿಷ್ ಕವಿತೆಯ ಛಾಯಾನುವಾದ) ಎಷ್ಟೋ ಸಾವಿರ ವರ್ಷ ಮಣ್ಣಲ್ಲಿ ಹೂತು ಹೊಳಪು ಕಂದಿದ್ದ ರೂಪ ಕುಂದಿದ್ದ ಕೊಳಕು ಹೆಂಚಿನ ನೂರು ಚೂರನ್ನು ಅದರೊಳಗೆ ಸೆರೆಯಾದ ಎಷ್ಟೋ ಯುಗಯುಗವನ್ನೆ ಕಂಡವನು, ಸತ್ತ ಬದುಕನ್ನೆತ್ತಿ ಬೆಳಕ...

ತೆರೆಗಳ ಕದನವೇಕಯ್ಯ,-ತೆರೆಗಳ ದೊರೆಯೆ! ಹೂಂಕರಿಸುವ ನೀಲಾಶ್ವಗಳಂತೆ, ಅರುಣನ ಕುದುರೆಗಳಂತೆ, ಕಾಲದಂತೆ,- ತಾಕಲಾಡುತಿಹವು ತೆರೆಗಳು. ಪೀಕಲಾಡುತಿಹವು ನೊರೆಗಳು. ಈ ತೆರೆಗಳಲ್ಲಿ ಯಾವುದನ್ನೇರಿದೆ ಹಯವದನ? ಏರಿ ಎಲ್ಲಿಗೆ ನಡೆದೆ? ತೆರೆಗಳ ತುಮುಲ ಯುದ್...

ಕಡಲು ಕುಣಿಯಿತು ಒಡಲು ಮಣಿಯಿತು ವಿಶ್ವರ೦ಭಾ ಪೀಠಕೆ ಸೂರ್ಯ ಜಾಗಟೆ ಚಂದ್ರ ತಮ್ಮಟೆ ವೀರ ಗುರುವಿನ ಕ್ಷೇತ್ರಕೆ ಬಾನು ಬಯಲು ಭೂಮಿ ಆಷ್ಟಿತು ಇಗೋ ಗುರುಮಠ ಗೋಪುರಾ ಅವರು ಹಾಗೆ ಇವರು ಹೀಗೆ ಪೀಠ ಮರೆಯಿತು ಅಂತರಾ ಕುಲವ ದಾಟಿತು ಕಲಹ ದಾಟಿತು ಪ್ರೇಮಗ೦ಗ...

ದೇವ ಹೃದಯದ ನೀಲದಾಳದಿ ಮೊರೆವ ಸ್ನೇಹದ ಸಿಂಧುವೆ! ಬೆಂದ ಬಾಳಿಗೆ ನೊಂದ ಜೀವಿಗೆ ನೀನೆ ಸರುವರ ಬಂಧುವೆ! ಇಳೆಯ ಕುದಿಯನು ಕಳೆಯಲೋಸುಗ ಹಸಿರ ಸಿರಿಯನು ಹೊದಿಸಿದೆ ಏಳು ಕಡಲುಗಳನ್ನೆ ಹರಿಯಿಸಿ ಪ್ರಾಣಪವನವ ಸುತ್ತಿದೆ. ಹಗಲಿನುರಿ ನಂದಿಸಲು ಸಂಧ್ಯಾ- ಮೋಹ...

ಸ್ವಾಮಿ ನಮ್ಮಪ್ಪಾ-ಮಾಡಪ್ಪಾ! ಮೂಡಣಕೆ ಮೂಡಿದ ಹೊತ್ತಿಗೆ-ಹಗಲಿನ ಬೆಳಕಿಗೆ. ಸ್ವಾಮಿ ನಮ್ಮಪ್ಪಾ-ಮಾಡಪ್ಪಾ! ಮುಗಿಲಲ್ಲಿ ನೆರೆದ ಚಿಕ್ಕೆಯ ಜಾತ್ರೆಗೆ-ಇರುಳ ತಳಕಿಗೆ. ಸ್ವಾಮೀ ನಮ್ಮಪ್ಪಾ-ಮಾಡಪ್ಪಾ! ಬೆಳತಿಗೆಯ ತಿಂಗಳನಿಗೆ-ಹಾಲಗೋಪಾಲನಿಗೆ. ಸ್ವಾಮಿ ನಮ...

1...1920212223...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...