ಸ್ವಾಮಿ ನಮ್ಮಪ್ಪಾ-ಮಾಡಪ್ಪಾ!
ಮೂಡಣಕೆ ಮೂಡಿದ ಹೊತ್ತಿಗೆ-ಹಗಲಿನ ಬೆಳಕಿಗೆ.
ಸ್ವಾಮಿ ನಮ್ಮಪ್ಪಾ-ಮಾಡಪ್ಪಾ!
ಮುಗಿಲಲ್ಲಿ ನೆರೆದ ಚಿಕ್ಕೆಯ ಜಾತ್ರೆಗೆ-ಇರುಳ ತಳಕಿಗೆ.
ಸ್ವಾಮೀ ನಮ್ಮಪ್ಪಾ-ಮಾಡಪ್ಪಾ!
ಬೆಳತಿಗೆಯ ತಿಂಗಳನಿಗೆ-ಹಾಲಗೋಪಾಲನಿಗೆ.
ಸ್ವಾಮಿ ನಮ್ಮಪ್ಪಾ-ಮಾಡಪ್ಪಾ!
ಮನೆಯ ದೀವಿಗೆಗೆ-ಬಡವರ ಭಾಗ್ಯಕ್ಕೆ.
ಸ್ವಾಮಿ ನಮ್ಮಪ್ಪಾ-ಮಾಡಪ್ಪಾ!
ಒಳಗಿನ ಜೀವರತ್ನಕ್ಕೆ-ಮೂಲೋಕದ ಕುಡಿವೆಳಗಿಗೆ
*****


















