ಕಡಲು ಕುಣಿಯಿತು ಒಡಲು ಮಣಿಯಿತು
ವಿಶ್ವರ೦ಭಾ ಪೀಠಕೆ
ಸೂರ್ಯ ಜಾಗಟೆ ಚಂದ್ರ ತಮ್ಮಟೆ
ವೀರ ಗುರುವಿನ ಕ್ಷೇತ್ರಕೆ
ಬಾನು ಬಯಲು ಭೂಮಿ ಆಷ್ಟಿತು
ಇಗೋ ಗುರುಮಠ ಗೋಪುರಾ
ಅವರು ಹಾಗೆ ಇವರು ಹೀಗೆ
ಪೀಠ ಮರೆಯಿತು ಅಂತರಾ
ಕುಲವ ದಾಟಿತು ಕಲಹ ದಾಟಿತು
ಪ್ರೇಮಗ೦ಗಾ ನದಿಯಿತು
ಬಣ್ಣ ಬೆಡಗು ಒಡಕು ಒಡೆಯಿತು
ಗೌರಿಶಂಕರ ಗಿರಿಯಿದು
ಕೋಟಿ ಗ೦ಗಾಸ್ನಾನ ಪುಣ್ಯಾ
ಪೀಠ ನೀಡಿದ ರಕ್ಷಣೆ
ಮನುಜ ಧರ್ಮವೆ ಶಿವನ ಧರ್ಮವು
ಪೀಠ ಸಾರಿದ ಘೋಷಣೆ
*****



















