ಬನ್ನಿ ಯಾತ್ರಿಕರೇ ನೀವೆಲ್ಲಾ ಕೈ ಮುಗಿದು ಕರುನಾಡ ಮಣ್ಣಲೆಜ್ಜೆಯಿಡುವಾಗ | ಇದು ಶಾಂತಿಯ ತವರಿದು ಸ್ನೇಹ ಕರುಣೆಯ ಬೀಡಿದು || ಸರ್‍ವಧರ್‍ಮ ಸಂಗಮದ ನಾಡಿದು ಸಕಲ ಕುಲ ಮನುಜರ ಕಾಶಿಯಿದು ಕೋಟೆ ಕೊತ್ತಲ ಗಿರಿಶಿಖರಗಳ ರಾಜಧೀರಾಜರು ಕಟ್ಟಿದ ನಾಡಿದು ||...

ರಸ್ತೆ ಮಧ್ಯದಲಿ ರಾಶಿ ಹೆಣಗಳು ರಕ್ತ ರಾಜ್ಯದಲಿ ಸತ್ತ ಜನಗಳು ಅಳುತ್ತ ಕೂತಿದೆ ಮಗುವೊಂದು ಸಂಕಟಶಾಲೆಯ ಸುಳಿಯೊಂದು. ಮತ ಯಾಚಿಸುವ ಮತಧರ್‍ಮಗಳು ಲೆಕ್ಕಾಚಾರದ ಬೆತ್ತಲೆರೂಪ ಬರೆಯುವ ಚೆಕ್ಕುಗಳು ಅಳುತ್ತ ಕೂತಿದೆ ಬೆಳಕಿನ ರೂಪ ನೆತ್ತರ ಬಳ್ಳಿಯ ನಡುವಿ...

ಮಣ್ಣು ಹೊನ್ನಹುದೆಂದು ಅರಿಯರೇಕೋ ಜನರು ಕೊಟ್ಟ ಕಾಳನು ನುಂಗಿ ಫಲವೃಂದಮೀವುದಲ ಒಂದು ಬೀಜವ ಕೊಂಡು ಜನಜಗಕೆ ಜೀವಮಂ ಹರ್ಷದಿಂದೀವುದೀ ಮಣ್ಣೆ ಮಗ ಕಾರ್ಯಸಿದ್ದಿ. ಆವ ಕಾಲದೊಳಾವ ದೇಶದಲಿ ಆವ ಜನ- ಕಾವ ಫಲ ಸವಿಯೊಗರು ಕಹಿ ಸಪ್ಪೆ ಹುಳಿಯೆನಿಸಿ ಫಲಧಾನ್ಯಮ...

ಸಿಗುತ್ತದೆ ಈ ಪುಣ್ಯಭೂಮಿಯಲಿ ತಾಯಂದಿರ ಗರ್ಭಗಳು ಬಾಡಿಗೆಗೆ ತಾಯ್ತನದ ಬಯಕೆಗಳ ಅದುಮಿಟ್ಟು ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು ಇಲ್ಲಿ ಬಾಡಿಗೆ ತಾಯಂದಿರು ಬಸಿರಲಿ ಮೂಡಿದ ಮಗು ಒದ್ದು ಮೈ ಬದಲಿಸುವ ಚಲನೆ ತಾಯ್ತನದ ಖುಷಿಯ ಘಳಿಗೆಯಲಿ ಕಲ್ಲಾಗಿ ...

ನನ್ನೆಚ್ಚರದಲು ನಿದ್ದೆಯಲು ಓ ಕನ್ನಡ ತಾಯೆ ಕಾಪಾಡುತಿರಲಿ ನಿನ್ನ ಶ್ರೀಯೆ ಸ್ಮೃತಿಯಾಗಿ ಬಂದು ಕನಸಾಗಿ ಕಂಡು ನನ್ನನಾವರಿಸಲಿ ಸದಾ ನಿನ್ನ ಮಾಯೆ ಮುಗಿಲು ನೀನೆ ಮುಗಿಲ ತುಂಬ ಮಳೆಯು ನೀನೆ ಸೋನೆ ಹನಿ ನೀನೆ ಮಣ್ಣ ಶ್ರೀಗಂಧ ನೀನೆ ಅದರ ತಂಪು ನೀನೆ ನಳನ...

ವರಸೀಗಿ ಬರವೂದು| ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧|| ಏಳ ಮಂದಿ ನೆಗೇಣಿ ಮಕ್ಳು | ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨|| ಬೆಳ್ಳೆ ಬೆಳಗಾಽನ ಏಳ್ರೆ| ಮನಮಾರ ಸಾರಿಸರೆವ್ವಾ| ಕೋ ||೩|| ಮನಮಾರ ಸಾರಿಸರೆವ್ವಾ | ತಲಿಯಾರೆ ಎರಕೋರೆವ್ವಾ| ಕೋ ||೪...

ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್‍ತಮಾನವು ಯಾಕೆ ಸನಾತನ ಇರುವಾಗ ಸಂವಿಧಾನವು ಯಾಕೆ ಇರುವಾಗ ಮ...

ಬೇಡ ಅನ್ನುವುದು ತುಂಬಾ ಸುಲಭ ಬೇಕು ಅನ್ನುವುದು ಕಷ್ಟ ಸಂಕೋಚ ಕಾಡುತ್ತದೆ. ಸೌಜನ್ಯ ತಡೆಯುತ್ತದೆ ಆದರೂ ನದಿ ಹರಿಯುತ್ತದೆ ಅಂದೆನಲ್ಲ ಅದು ತನ್ನ ಪಾತ್ರ ಧಾಟಿ ಹಾವ ಭಾವಗಳಲ್ಲೇ ತನಗೆ ಬೇಕಾದ್ದನ್ನು ಸೂಚಿಸುತ್ತದೆ ಸಮುದ್ರ ಸೇರುತ್ತದೆ ಅವರಿವರು ಅಣೆ...

ಶ್ರಾವಣ ಮಾಸ ಬಂತೆಂದರೆ ಸಿಗದು ಉಪಾಹಾರ ಜಳಕವಿಲ್ಲದೆ ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ ನೀರಿಲ್ಲದಿದ್ದರೂ ಈಗ ದಿನವೂ ಜಳಕ ದೇವರ ಪೂಜೆ ಮಾಡದಿದ್ದ ನಾನು ಅವರ ಮೈ ತೊಳೆಯುವುದೀಗ ನನ್ನ ಸರದಿ ಶ್ರಾವಣ ನೆಪದಲ್ಲಾದರೂ ಎಚ್ಚರಿಸುವಳು ಮಾಡದ ತಪ್ಪಿಗ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...