ಬೇಡ ಅನ್ನುವುದು ತುಂಬಾ ಸುಲಭ
ಬೇಕು ಅನ್ನುವುದು ಕಷ್ಟ
ಸಂಕೋಚ ಕಾಡುತ್ತದೆ.
ಸೌಜನ್ಯ ತಡೆಯುತ್ತದೆ
ಆದರೂ ನದಿ ಹರಿಯುತ್ತದೆ
ಅಂದೆನಲ್ಲ ಅದು ತನ್ನ
ಪಾತ್ರ ಧಾಟಿ ಹಾವ ಭಾವಗಳಲ್ಲೇ
ತನಗೆ ಬೇಕಾದ್ದನ್ನು ಸೂಚಿಸುತ್ತದೆ
ಸಮುದ್ರ ಸೇರುತ್ತದೆ ಅವರಿವರು
ಅಣೆ ಕಟ್ಟೆ ಕಟ್ಟುತ್ತಾರೆ.
ನೀರಾವರಿ ಮಾಡುತ್ತಾರೆ
ಬೆಳೆ ತೆಗೆಯುತ್ತಾರೆ.
ಮಾಡಲಿ ಬಿಡಿ ಅದರಿಂದೇನು
ಕೊನೆಗೆ ಸಮುದ್ರ ಇದ್ದೇ ಇದೆಯಲ್ಲ
*****