ಇದೋ ಎದ್ದೆ ನಾನೀಗಲೆ ಹೋಗುವೆ ಇನ್ನಿಸ್ ಫ್ರೀ ದ್ವೀಪಕ್ಕೆ ಕಟ್ಟುವೆನಲ್ಲಿ ಮಣ್ಣಿನದೊಂದು ಪುಟ್ಟ ಮನೆಯನ್ನು ವಾಸಕ್ಕೆ; ಚಪ್ಪರದವರೆಯ ಬಳ್ಳಿಮಾಡಗಳ, ಜೇನುಗೂಡಗಳ ಹಬ್ಬಿಸುವೆ ತುಂಬಿಯ ಗುಂಜಾರವದಲಿ ತುಂಬಿದ ಬಯಲಲ್ಲೊಬ್ಬನೆ ವಾಸಿಸುವೆ. ಶಾಂತಿ ಸಿಕ್ಕು...

ಮುತ್ತುಗಳ ಕಾವಣದಿ ಮುತ್ತಜ್ಜ ಕುಳಿತಿದ್ದ ಬೇಡಿದೆನು ಮುತ್ತನೊಂದು. ‘ಹೋದ ಮುತ್ತುಗಳೆಂತು ತಿರುಗಿ ಬರುವವು, ರಸಿಕ! ಅವು ನನ್ನ ಪ್ರಾಣಬಿಂದು!’ ಹೂವರಳ್ದ ತೋಟದಲ್ಲಿ ಹೂವರಸ ಕುಳಿತಿದ್ದ. ಹಾತೊರೆದೆ ಹೂವಿಗೆಂದು, ‘ಶೋಭೆಯಳಿಯದೆ ಹೇಳು, ಹೂವೆದೆಯ ಹಾದ...

– ಪಲ್ಲವಿ – ಇದೋ ಬಂದ ಭಾನು ತಂದ ಸ್ವಾತಂತ್ರ್ಯದ ಕಾಂತಿಯ, ಅದೋ ಓಡಿ ಹೋಯ್ತು ನೋಡಿ ಬಲಿದ ನಿಶಾಭ್ರಾಂತಿಯ ! ೧ ಓ!-ಮೂಡಣದೀ ನಭದಿ ಹೊನ್ನ ಯುಗದ ಮೊಳಕೆ ಮೂಡಿತೋ ? ಆ-ಮೊಳಕೆಯದೇ ಬಳೆದು ನಿಶೆಯ ಜತೆಗೆ ಕದನ ಹೂಡಿತೋ ! ಮಂಗಲಮಯಿ ಉಷಾಸರಸ...

ಬೆಳದಿಂಗಳ ರಾತ್ರೇಲಿ ಈಚೋರಿ ಬತ್ತಂದ್ರೆ ಈಚೆಂಡ ಚೆಲ್ಲಂಗೆ ನೆಪ್ಪಾಯ್ತದೆ. ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ ವೋಲೀಸ್ದೆ ವೋಯ್ತಂದ್ರೆ ತಪ್ಪಾಯ್ತದೆ. ೧ ಕುಡದೋರು ಮತ್ಬಂದು ಬೀಳೋಹಂಗ್ ಬಿದ್ರೋವೆ ಮನೆಗೋಳು ಮರಗೋಳು ಬೀದೀಲೆಲ್ಲಾ. ಪಡಕಾನೆ ಜನದಂಗ...

ನೊಸಲು ನೊಸಲಿನಲಿರಿಸಿ ಸುಸಿಲಾಡುವವು ಹೂವು ಹೊಳೆ ನೀರ ಬಳಿಗೆ; ಪಡಿನೆಳಲನೆದೆಯೊಳಗಿರಿಸಿ ಮಧುರ ಸಲಿಲ ಸಲೀಲ ನಲಿದಾಡುವದು; ಚಿತ್ರ ರತಿಯ ನೋಡುತ ಚಿಕ್ಕೆ ಕಣ್ಚಿವುಟುವವು; ಮಂದ ಮಾರುತನು ಪಿಸುಗುಡುತಲಿಹನದರ ಸೌಸವದ ಸವಿಮಾತ; ಸಂಜೆ ಬಾಸಣಿಸಲಿದೆ ತಿಮಿ...

ಅನುಭವದಡುಗೆಗೆ ಮೂಲವದೇನು? ಅದು ಬರಿ ಮಣ್ಣು. ಮಣ್ಣಿಂದಲಾಗಿರಲೀ ಅಂದದಾ ತನುವಿದಕೆ ಮಣ್ಣಿನಾಧಾರದೊಳೆಲ್ಲ ಅನ್ನವಿರುತಿರಲು ಅನುಭವದನ್ನಕ್ಕೆ ಆ ಬೆವರಿನಾರ್‍ದ್ರತೆಯೆ ಮೂಲವಲಾ -ವಿಜ್ಞಾನೇಶ್ವರಾ *****...

(ಜನನಿ ನಿನ್ನ ಸ್ಮರಣೆಯನ್ನು) ಜನನಿ ನಿನ್ನ ಸ್ಮರಣೆಯನ್ನು ಮರೆಯಲಾರೆ ಕರುಣಾನಿಧಿಗೆ ಕಯ ಮುಗಿದೆ ಹೇಳುವೆ || ೧ || ಕರುಣಾನಿಧಿಗೆ ಸ್ವಾಮಿ ದೇವನಿಗೆ ಕಾಲು ಕವನ ದಾನ ಧರ್ಮ ಸೋ ಲು ಸುಂಗರವೋ || ೨ || ಕಾಲು ಕವನ ದಾನಧರ್ಮ ಸೋಲು ಸುಂಗರವೋ ಮಂಗಲಾ ಜಯ ...

ರಾಮಾ ನನ್ನ ಬಾಳಿಗೆ ನೀನಾಸರೆ ನಿನ್ನ ಸಾನಿಧ್ಯವೇ ಪರಮ ಸುಖ ಆಸೆಗಳು ಏಕೆ ಮತ್ತು ನಿರಾಸೆಗಳೇಕೆ ನೀನಿರುವಾಗ ನನ್ನ ಹಗಲಿರುಳ ಸಖ ಭವದ ಮೋಹ ಎನಗೆ ಕಾಡಿದೆ ಹೆಜ್ಜೆಗೊಮ್ಮೆ ತನುವಿನ ಸೌಖ್ಯ ಬೇಡಿದೆ ನನ್ನೊಳಗಿನ ಆತ್ಮನ ಮರೆತು ವಿಷಯ ಸುಖಗಳತ್ತ ಮನ ಓಡಿದ...

ಹೊಸ ವರುಷವೀಗ ಹಳೆಯಾಸೆಗಳ ಬಲಿಸುತಿದೆ; ಜಾನಿಗಳ ಜೀವವೇಕಾಂತವೆಳಸುತಿದೆ; ಕೊಳದ ಕೆಲದಲಿ ತಳಿರ ಮರಲ ಸೊಂಪನರುತಿದೆ; ದ್ರಾಕ್ಷಿಯಲಿ ಮಾಣಿಕ್ಯ ರಸವು ಹೊಮ್ಮುತಿದೆ. *****...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...