ಅನುಭವದಡುಗೆಗೆ ಮೂಲವದೇನು?
ಅದು ಬರಿ ಮಣ್ಣು. ಮಣ್ಣಿಂದಲಾಗಿರಲೀ
ಅಂದದಾ ತನುವಿದಕೆ ಮಣ್ಣಿನಾಧಾರದೊಳೆಲ್ಲ
ಅನ್ನವಿರುತಿರಲು ಅನುಭವದನ್ನಕ್ಕೆ
ಆ ಬೆವರಿನಾರ್‍ದ್ರತೆಯೆ ಮೂಲವಲಾ -ವಿಜ್ಞಾನೇಶ್ವರಾ
*****