ಇನ್ನಿಸ್ ಫ್ರೀ ದ್ವೀಪ

ಇದೋ ಎದ್ದೆ ನಾನೀಗಲೆ ಹೋಗುವೆ ಇನ್ನಿಸ್ ಫ್ರೀ ದ್ವೀಪಕ್ಕೆ
ಕಟ್ಟುವೆನಲ್ಲಿ ಮಣ್ಣಿನದೊಂದು ಪುಟ್ಟ ಮನೆಯನ್ನು ವಾಸಕ್ಕೆ;
ಚಪ್ಪರದವರೆಯ ಬಳ್ಳಿಮಾಡಗಳ, ಜೇನುಗೂಡಗಳ ಹಬ್ಬಿಸುವೆ
ತುಂಬಿಯ ಗುಂಜಾರವದಲಿ ತುಂಬಿದ ಬಯಲಲ್ಲೊಬ್ಬನೆ ವಾಸಿಸುವೆ.

ಶಾಂತಿ ಸಿಕ್ಕುವುದು ಅಂಥಲ್ಲೇ, ಅದು ತುಂತುರು ಹನಿಯುವ ಬಾಳಿನಲೇ
ನಸುಕನು ಕವಿದ ಮುಸುಕಿನಿಂದ ಜೀರುಂಡೆಯ ಜಿರ್ರನೆ ದನಿವರೆಗೆ;
ಮಬ್ಬು ಮಿನುಗುವುದು ನಟ್ಟಿರುಳು ಮಧ್ಯಾಹ್ನಕೆ ನೇರಳೆ ಹೊಳಪಲ್ಲಿ
ತುಂಬಿ ನಿಲ್ಲುವುವು ಸಂಜೆಗಳು ಕೋಗಿಲೆಗಳ ರೆಕ್ಕೆಯ ಬಡಿತದಲಿ.

ಹೋಗುವೆನೀಗಲೆ ಅಲ್ಲಿಗೆಂದು, ಯಾಕೆಂದರೆ ಹಗಲಿರುಳೂ ಅಲ್ಲಿ
ಸರೋವರದ ತೆರೆ ಗುಣುಗುಣಿಸುವುವು ಸವರುತ ದಡವನು ಅಂಚಿನಲಿ;
ನಿಲ್ಲುವೆ ದಾರಿಯ ನಡುವೆಯೆ, ಇಲ್ಲವೆ ಪಾದಚಾರಿಗಳ ಹಾದಿಯಲಿ,
ಹೃದಯದಿಂದಲೇ ಎದ್ದು ಬರುವ ಆ ಸದ್ದನು ಆಲಿಸಿ ಕೇಳುತಲಿ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಟಿಪ್ಪಣಿ:
ಏಟ್ಸ್ ತನ್ನ ಕಾವ್ಯಜೀವನದ ಆರಂಭದ ದಿನಗಳಲ್ಲಿ ಬರೆದ ಭಾವಗೀತಾತ್ಮಕವಾದ ಕವಿತೆ. ರೊಮ್ಯಾಂಟಿಕ್ ಮನೋಧರ್‍ಮವನ್ನು ಬಿಂಬಿಸುವ ಈ ಕವನ ಏಟ್ಸ್ ಮುಂದೆ ಬರೆದ ಪ್ರಸಿದ್ಧ ಕವನಗಳ ಶೈಲಿ ರುಚಿಗಳಿಗೆ ಹೊರತಾದದ್ದು. ಆದರೂ ಕವಿಗೆ ಮುಜುಗರ ತರುವಷ್ಟು ಜನಪ್ರಿಯವಾದದ್ದು. ‘ನನ್ನದೇ ಆದ ಗೀತಲಯ ಕೊಂಚವಾದರೂ ಇರುವ ನನ್ನ ಮೊದಲ ಭಾವಗೀತೆ’ ಎಂದು ಏಟ್ಸ್ ಅದರ ಬಗ್ಗೆ ಹೇಳುತ್ತಾನೆ. ಕವಿಯ ಸ್ವಂತ ಪದ್ಯಗಳ ವಾಚನದ ಧ್ವನಿಸುರುಳಿಯೊಂದರಲ್ಲಿ ಈ ಪದ್ಯವೂ ಸೇರಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಲಾದಿತ್ಯ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೦

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…