Home / ಬಾಲ ಚಿಲುಮೆ / ಕಥೆ / ಶಿಲಾದಿತ್ಯ

ಶಿಲಾದಿತ್ಯ

ಶಿಲಾದಿತ್ಯ ವಲ್ಲಭಿಯ ದೊರೆಯು. ಆತನ ಅರಮನೆಯಲ್ಲಿ ಒಂದು ಸರೋವರವಿತ್ತು. ಆತನು ಯುದ್ಧಕ್ಕೆ ಯೋಗಬೇಕಾದರೆ ತಾನು ಮಿಂದು ಮಡಿಯುಟ್ಟು ಶುಚಿಯಾಗಿ ಬಂದು ಆ ಕೊಳವನ್ನು ಪೂಜಿಸುವನು. ಆಗ ಅಲ್ಲಿಂದ ಏಳುಬಣ್ಣದ ಕುದುರೆಯು ಎದ್ದು ಮೇಲಕ್ಕೆ ಬರುವದು. ಆತನು ಅದನ್ನು ಹತ್ತಿ ಯುದ್ಧಕ್ಕೆ ಹೋಗುವನು. ಅಲ್ಲಿ ಯಾರ ಆಯುಧವೂ ಆತನನ್ನು ಗಾಯ ಪಡಿಸಲಾರದು. ಆತನು ಎಲ್ಲರನ್ನೂ ಗೆದ್ದು ಬಿಡುವನು. ಹೀಗೆಯೇ ಆತನು ಎಷ್ಟೋ ಯುದ್ಧಗಳನ್ನು ಗೆದ್ದು ಚಕ್ರವರ್‍ತಿಯಾಗಿದ್ದನು.

ಒಂದು ಸಲ ಅರಸನು ಅಲ್ಲಿ ಪೂಜೆಗೆ ಹೋಗುವಾಗ ಹಗೆಯವನು ಒಬ್ಬನು ಬಂದು ಕೊಳಕು ಬಟ್ಟೆಯ ಚೂರು ಒಂದನ್ನು ಇಟ್ಟುಕೊಂಡಿದ್ದು, ಅದನ್ನು ಆತನಿಗೆ ಕಾಣದಂತೆ ಉಡಿಯಲ್ಲಿ ಹಾಕಿಬಿಟ್ಟನು. ಅರಸನು ಎಂದಿನಂತೆ ಭಕ್ತಿಯಿಂದ ಪೂಜೆ ಮಾಡಿದರೂ ಏಳು ಬಣ್ಣದ ಕುದುರೆಯು ಬರಲಿಲ್ಲ. ಓಹೋ! ಏನೋ ಮೈಲಿಗೆಯಾಗಿರಬಹುದೆಂದು ನೋಡಲು, ಆತನು ಆರಿಯದಂತೆಯೇ ಆತನ ಉಡಿಯಲ್ಲಿ ಒಂದು ಚೂರು ಮೈಲಿಗೆ ಬಟ್ಟೆಯಿತ್ತು. ಅರಸನಿಗೆ ಆಗ ಕೊಳದಿಂದ ಕುದುರೆಯು ಬರದೆ ಇರಲು ಕಾರಣವೇನು ಎಂಬುದು ತಿಳಿಯಿತು. ಮತ್ತೆ ಮಿಂದು ಮಡಿಯುಟ್ಟು ಪೂಜಿಸಿದನು. ಆದರೂ ಕುದುರೆಯು ಬರಲಿಲ್ಲ. ಒಂದು ಸಲ ಮೈಲಿಗೆ ಸೋಕಿ, ಕೊಳದ ಮಹಿಮೆಯೇ ಹೋಗಿಬಿಟ್ಟಿತು.

ಅಂದಿನ ದಿನವೂ ಯುದ್ಧವಿತ್ತು. ಶಿಲಾದಿತ್ಯನೂ ಹೋದನು. ಆದರೆ ಆತನಿಗೆ ಅಂದಿನ ಯುದ್ಧವೇ ಕೊನೆಯಾಯಿತು. ಆತನು ಅಂದಿನ ರಣರಂಗದಿಂದ ಹಿಂತಿರುಗಲೇ ಇಲ್ಲ. ಆತನು ಅಲ್ಲಿಯೇ ಮಡಿದು ಹೋದನು.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...