ಸತ್ಮೇಲ್ ಏನೈತಣ್ಣ?

ಬೆಳದಿಂಗಳ ರಾತ್ರೇಲಿ ಈಚೋರಿ ಬತ್ತಂದ್ರೆ
ಈಚೆಂಡ ಚೆಲ್ಲಂಗೆ ನೆಪ್ಪಾಯ್ತದೆ.
ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ
ವೋಲೀಸ್ದೆ ವೋಯ್ತಂದ್ರೆ ತಪ್ಪಾಯ್ತದೆ. ೧

ಕುಡದೋರು ಮತ್ಬಂದು ಬೀಳೋಹಂಗ್ ಬಿದ್ರೋವೆ
ಮನೆಗೋಳು ಮರಗೋಳು ಬೀದೀಲೆಲ್ಲಾ.
ಪಡಕಾನೆ ಜನದಂಗೆ ಬಡದಾಡ್ತ ಕಾಯ್ತಾವೆ
ಕಾಗೇಗಳ್ಗ್ ಒಸ್ಸೀನ ಬುದ್ದೀನಿಲ್ಲ. ೨

ಇದ್ ಕಂಡ್ರೆ ಪಡಕಾನೆ ಕಣ್ಗ್ ಕಟ್ದಂಗಾಯ್ತದೆ
ತೊಟ್ಟ್ ಯೆಂಡ ಬೇಕಂದ್ರೆ ಬುಂಡೇಲಿಲ್ಲ.
ಯೆಂಡ್ ಇಲ್ಲಾಂತ್ ಅಲದಾಡೊ ನನ್ನಂತ ಪಾಪೀನ
ಇದುವರೆಗೆ ಬೂಂತಾಯಿ ಕಂಡೋಳಲ್ಲ. ೩

ಸುಂಕ್ ಅತ್ಕೊಂಡ್ ಏನ್ಬತ್ತು? ಇಲ್ಲದ್ ಅತ್ತ್ ಏನ್ಬತ್ತು?
ಕಟ್ಟೈತೆ ಕಸ್ಟ್ ಸುಕ ವುಟ್ದೇಟ್ಗೇನೆ!
ಕಟ್ಟಿದ್ದನ್ ಅಟ್ಟ್ ಉಂಡು ಅನಬೌಸೋಕ್ ಆಗದಿದ್ರೆ
ಪ್ರಾಣಾನ ಕಳಕೋಬೇಕ್ ಒಂದೇಟ್ಗೇನೆ! ೪

ಅಳಗೀಳೋದ್ ಎಲ್ಲಾನ ಯೆಂಗಿಸ್ಗೆ ವೊಪ್ತಾದೆ-
ನೆಗತಿರಬೇಕ್ ಗಂಡಸ್ರು ಪ್ರಾಣ್ ಓದ್ರೂನೆ!
ಬದಕಿದ್ರೆ ಯೆವ್ತಾರ ಪಡಕಾನೇಗ್ ಓಗ್ ಬೌದು!
ಸತ್ಮೇಲ್ ಏನೈತಣ್ಣ? ದೊಡ್ ಸೊನ್ನೇನೆ! ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಖಸ್ಪರ್‍ಶ
Next post ಗಾಂಧಿ-ಡಿಮಿಥಿಫೈಡ್

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…