ಶಬ್ದ ಸಾಗರವುಕ್ಕಿಬರುತಲಿದೆ, ಓ, ತಮ್ಮ, ನಿನ್ನತುಲ ಕೀರ್ತಿಯನು ವರ್ಣಿಸಲು ಮುನ್ನುಗ್ಗಿ! ಮುನ್ನಗೈದಾ ಸುಕೃತಕಿಂದು ಫಲ ದೊರಕಿದುದು ಕನ್ನಡದ ನಾಡಗುಡಿ ತಲೆಯೆತ್ತಿ ಮೆರೆವಂತೆ ಚೆನ್ನ, ನಿನ್ನಾತಪದ ಸಿದ್ಧಿ ಸಾಧಿಸುವಂತೆ ವರ್ಣನಾತೀತ ಯಶ ಪಾದ ರೇಣುವಿನಂತೆ ಪೂರ್ಣ ಪಾವನ ಪ್ರೇಮದಾವರಣವನು ಹೊತ್ತು ಪುಣ್ಯ ಪುರುಷನ ...

ಹಿಂದೆ ನಮ್ಮ ಮುತ್ತಾತನವರ ಕಾಲಕ್ಕೆ ಈ ರಸ್ತೆಗಳು ಕಾಡಿನಲ್ಲಿ ಕಳೆದು ಹೋಗುತ್ತಿದ್ದವು ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು ನಡೆವವರ ಎಡ ಬಲಕು ಹಸಿರು, ಹೂವು ಗರಿಕೆ ಹುಲ್ಲು ಮಾತನಾಡುತ್ತಿದ್ದವು ದಣಿವು ನೀಗುತ್ತ...

ಮೈಯೊಳಗಿನ ಮಣ್ಣು ಆಡಿಸುವುದು ನನ್ನ ಮೈಯೊಳಗಿನ ಗಾಳಿ ಹಾಡಿಸುವುದು ನನ್ನ ಜಲ ಆಗಸ ಬೆಂಕಿ, ಸಂಚು ಹೂಡಿ ಮಿಂಚಿ ಕೂರಿಸುವುದು ಏಳಿಸುವುದು ಓಡಿಸುವುದು ನನ್ನ! ಪೃಥ್ವಿ ಅಪ್ ತೇಜ ವಾಯು ಆಕಾಶವೆ, ತಾಳಿ ಹದ ಮೀರದೆ ಕುದಿಕಾರದೆ ಪ್ರೀತಿಯಿಟ್ಟು ಆಳಿ; ನೀವ...

ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ… ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ… ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು ನಿಂದಿರಿಸಿ ಬಾಳೇ ಹಣ್ಣು ತಗೊಂತಿದ್ದ ನನಗೆ ಅವಳನ್ನ...

ಹೇಳಿರಲಿಲ್ಲಿವೆ ನಾನು ನಿಮಗೆ ಅವನಿರುವುದೆ ಹಾಗೆ ಅವನ ಕೆಣಕಬೇಡಿರಿ ಎಂದು ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ ಪ್ರೀತಿಯ ನೆಪದಲ್ಲಿ ತಲೆ ಸಡಿಲಾದವನಲ್ಲ ವಂಶಪಾರಂಪರ್ಯವಲ್ಲ ಅವನ ಪೂರ್ವಜರಲ್ಲಿ ಹೀಗೆ ಯಾರಿಗೂ ಇದ್ದಿರಲಿಲ್ಲ ಅವನಷ್ಟಕ್ಕೆ ಬಿಟ್ಟರೆ ಅ...

ನಿನ್ನೊಳಗಿರುವುದೆ ಒಂದು ವಿಧ ನಾನರಿತಿರುವುದೆ ಒಂದು ವಿಧ! ಬಟ್ಟೆಯ ಹಾವನು ಬಿಟ್ಟಿಹೆಯಾ? ತಿಳಿದೆನು ಬಿಡು ಬಿಡು ಗಾರುಡಿಯಾ! ಬರಿದೇ ಅಲೆಗಳ ತರಿಸಿಹೆಯಾ? ಪರಿಶುದ್ಧನೆ ಒಳಗಡಗಿಹೆಯಾ! ಎಲ್ಲಿಯು ನೀನೇ ತುಂಬಿಹೆಯಾ? ಸಾಹಸಿಗಲ್ಲದೆ ಕಾಂಬುವೆಯಾ! ಮೂಡಿ...

ಹರಿವ ನದಿಯು ನೀನು ಸುರಿವ ಮಳೆಯು ನೀನು ನೆಲದಿ ಬಿದ್ದ ಬೀಜ ಮೊಳೆಸಿ ಫಲದಿ ಬಂದೆ ನೀನು ಹೂವು ಹಣ್ಣ ಮೈಯೊಳು ಹೊತ್ತ ಬಳ್ಳಿ ನೀನು ತಾರೆಗಳಿಗೆ ತೀರವಾಗಿ ನಿಂತ ಬಾನು ನೀನು ಭಾರ ತಾಳಿ ನಗುವೆ ನೋವ ಹೂಳಿ ನಲಿವೆ ಲೋಕವನೇ ಸಾಕಲು ನಿನ್ನ ಬಾಳ ಸುಡುವೆ ಮರ...

ನೋಡಿ ಅಲ್ಲಿದ್ದಾರಲ್ಲಾ ಅವರ ಹೆಸರು ಟಿ.ಪಿ. ಅಶೋಕ ಅವರೇ ಕಣ್ರೀ ಕನ್ನಡ ಸಾಹಿತ್ಯದ ಸುಪ್ರಸಿದ್ಧ ವಿಮರ್ಶಕ ಮೇಲಿನ ಕೂದಲು ಉದುರಿ ಬಾಲ್ಡ್ ಆಗಿರೋದ್ರ ಬಗ್ಗೆ ಬೇಕಾಗಿಲ್ಲ ಶೋಕ ಥಳಾಥಳಾ ಹೊಳೆಯೋದರ ಒಳಗೆ, ಒಳಗಿದೆ ನೋಡಿ ಪ್ಯೂರ್‌ಗೋಲ್ಡ್, ಒಳ್ಳೇ ಹದನಾ...

ಮಹಾ ಭೀಕರ ಕರಾಳ ಬಾಯಿ ಯಾವುದೋ ಬಗೆಯಲ್ಲಿ ಕಬಳಿಸಬಹುದು ಈ ಬಣ್ಣ ಬಣ್ಣದ ಮಾಯದ ಬದುಕನ್ನು ಅಸಂಖ್ಯ ಧ್ವನಿಗಳು ಪ್ರಾಣಗಳೊಡನೆ ಭೂಮಿಯೊಳಗೆ ಅಡಗುತ್ತವೆ ಭೀಕರ ಬಾಯಿಯ ಸ್ವಾಟೆಯೊಳಗಿಂದ ಉಳಿದು ಜಾರಿದ ಜೊಲ್ಲಿನಂತೆ ಕೆಲವು ಆಕ್ರಂದನ ಧ್ವನಿಗಳು ಉಳಿಯುತ್ತ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...