
ಬನ್ನಿ ಬನ್ನಿ ಮಕ್ಕಳೆ ಒಂದಾಗಿ ಹಾಡುವ ಯುಗ ಯುಗಗಳೆ ನಾವು | ಗತ ವೈಭವ ಕಾಣುವ || ಬನ್ನಿ || ಕಾಶ್ಮೀರವಿದುವೆ ಮುಕುಟ | ಕನ್ಯಾಕುಮಾರಿ ಇದುವೆ ಪದತಲ || ಹಸಿರ ಉಟ್ಟ ಸಿಂಗಾರ | ಹೂವುಗಳದುವೆ ಬಂಗಾರ || ಬನ್ನಿ || ವೀರಕಲಿಗಳ ಕೀರ್ತಿ ಆಭರಣ ಶೃಂಗಾರ ...
ಇನ್ನೊಂದೆ ದಿನವು, ಹೋದೀತದೀಗ ಅರೆಸತ್ತ ಕಾರ್ಯ ಮುಗಿದು. ಹೌದೊಂದೆ ದಿನಕೆ ಅರಳೀತು ಮೊಗ್ಗೆ ಹುಟ್ಟಿತು ಪಕಳೆ ಬಗೆದು. ಇನ್ನಿಷ್ಟೆ ಹಾದಿ ದಾಟಿದರೆ ಬಂತು ಹೊಸ ಜಗದ ಗುರಿಯ ಪೂರ್ತಿ. ತೀಡಿದರೆ ಒಮ್ಮೆ ಮೂಡೀತು ನೋಡು ಭಗವತಿಯ ಪೂರ್ಣ ಮೂರ್ತಿ. ಗುಡ್ಡ ಬ...
ಉದಯಿಸಲಿ ಮತ್ತೊಮ್ಮೆ ಕನ್ನಡದ ಕಣ್ಮಣಿಗಳು| ಉದಯಿಸಲಿ ಮತ್ತೊಮ್ಮೆ ಹಿಂದಿನ ಕನ್ನಡದ ಅದ್ವಿತೀಯ ಅತಿರಥ ಮಾಹಾರಥರು|| ರಾಷ್ಟ್ರಕವಿ ಕುವೆಂಪು ವರಕವಿ ಬೇಂದ್ರೆಯಂತವರು| ಕಡಲ ಭಾರ್ಗವ ಕಾರಂತ, ಪು.ತಿ.ನಾ, ಗೋಕಾಕಂತವರು| ಮತ್ತೆ ಬೆಳೆಸಲು ಕನ್ನಡದ ಆಸ್ತಿ...
ಅಮ್ಮ ಹೇಳುತ್ತಿದ್ದಳು ನನಗೆ ಸುಂದರ ಅಪ್ಸರೆಯ ಕಥೆಗಳನ್ನೇ ನನ್ನ ಅಂಗಳದ ಮಾವಿನಗಿಡವೇ ನನಗೆ ಜಗತ್ತಿನ ಸುಂದರ ವಸ್ತುವಾಗಿತ್ತು ಮರಕೋತಿ ಆಟಕ್ಕೆ ಮೈದಾನವಾಗಿತ್ತು ನಿರಂತರ ನನ್ನ ಭಾರ ಸಹಿಸುತ್ತಿತ್ತು. ಟೊಂಗೆ ಟೊಂಗೆಯಲಿ ತುಂಬಿದ ಗೆಳೆಯ-ಗೆಳತಿಯರ ಕಿ...
ನಿಂತಲ್ಲಿ ನಿಲ್ಲದೆ ಮನಸು ಧಾವಂತ ಮಾಡುತ ಇತ್ತು ಶಾಂತಿಯನರಸಿ ಗುಳೆ ಹೊರಟಿತ್ತು ಅಂತರಾತ್ಮನ ಮನೆ ಎಬ್ಬಿಸಿತ್ತು ಸೂರ್ಯಗೆ ಮೋರೆ ತೋರದೆ ಇತ್ತು ಸೂರ್ಯಕಾಂತಿಯ ನೋಡದೆ ಇತ್ತು ಹಾಡುವ ಹೆಣ್ಣಿನ ಕೇಳದೆ ಇತ್ತು ಆಡುವ ಮಕ್ಕಳ ಸೇರದೆ ಇತ್ತು ಹರಿವ ನದಿ...
ತಂಗಿ… ಷೇರುಪೇಟೆ ಕುಸಿಯುತಿದೆ ಮಾರುಕಟ್ಟೆ ನಡುಗುತಿದೆ… ಕರಡಿಯೊಂದು ಕುಣಿಯುತ್ತಿದೆ ಗೂಳಿಯೊಂದು ತಿವಿಯುತ್ತಿದೆ ಗುಳ್ಳೆಯೊಂದು ಒಡೆಯುತಿದೆ ಕೊಳ್ಳೆಯೊಂದು ಕರಗುತ್ತಿದೆ… ಅಕ್ಕ… ಷೇರುಪೇಟೆಯೇ? ಗೊತ್ತಿಲ್ಲ ಕಣೆ! ಇಲ್ಲ...
ಯಾವ ಜನುಮದ ಪುಣ್ಯವೋ ಎನ್ನ ಮನದುಂಬಿ ಬಾಳ ಸಂಗಾತಿಯಾಗಿ ನೀ ಬಂದಾಗಿನ ಸಂತಸದ ಕ್ಷಣದ ಹಾಡು ಹಾಡಲೇ ನಿನ್ನ ಕಣ್ಣಿನ ಕುಡಿಮಿಂಚು ಕೋಲ್ಮಿಂಚು ಎನ್ನೆದೆಯ ನಾಟಿ ಮೀಟಿ ಪ್ರೀತಿ ಬೀಜವ ಬಿತ್ತಿ ಹೃದಯದಲಿ ಮೊಳಕೆಯೊಡೆದ ಹಾಡು ಹಾಡಲೇ ಮೋಹಕ ನಗೆಯ ಹಾಲು ಹೊಳೆ...
ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ ಕೊಟ್ಟ ಮೋಹಿನಿಯ ಕಂಬನಿಯ ಅದೆಷ್ಟು ಕುಡಿದೆ! ಭರವಸೆಗೆ ಶಂಕೆಯ ಶಂಕೆಗಾಸೆಯ ಬೆರಸಿ, ಗೆದ್ದೆ ಇನ್ನೇನೆಂಬ ಗಳಿಗೆಯಲ್ಲೇ ಬಿದ್ದೆ. ಕೊಳಕು ತಪ್ಪುಗಳಲ್ಲಿ ಬಳಸಿಯೂ ನಾನೆಂಥ ಅದೃಷ್ಟವಂತ ಎನ್ನುವ ಹಿಗ್ಗಿನಲ್ಲಿದ್ದೆ...













