ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ
ಕನ್ನಡದ ಕಣ್ಮಣಿಗಳು|
ಉದಯಿಸಲಿ ಮತ್ತೊಮ್ಮೆ
ಹಿಂದಿನ ಕನ್ನಡದ ಅದ್ವಿತೀಯ
ಅತಿರಥ ಮಾಹಾರಥರು||

ರಾಷ್ಟ್ರಕವಿ ಕುವೆಂಪು
ವರಕವಿ ಬೇಂದ್ರೆಯಂತವರು|
ಕಡಲ ಭಾರ್ಗವ ಕಾರಂತ,
ಪು.ತಿ.ನಾ, ಗೋಕಾಕಂತವರು|
ಮತ್ತೆ ಬೆಳೆಸಲು ಕನ್ನಡದ ಆಸ್ತಿಯನು
ಬರಲೊಮ್ಮೆ ನಮ್ಮಲ್ಲೊಬ್ಬರು ಮಾಸ್ತಿಯಂತವರು|
ಪದ ರತ್ನಗಳ ಬಿಡಿಸಲ್ಲೊಬ್ಬ ರಾಜರತ್ನಂ
ಮಂಕುತಿಮ್ಮನ ಕಗ್ಗದಂತೆ
ಮತ್ತೆ ಬಾರಿಸಲು ಕನ್ನಡ ಡಿಂಡಿಮ||

ಹುಟ್ಟಿಬರಲಿ ಮತ್ತೆ
ಗದುಗಿನ ಕುಮಾರವ್ಯಾಸರಂತವರು|
ಉದಯಿಸಲಿ ಮತ್ತೊಮ್ಮೆ
ರನ್ನ ಪಂಪ ಜನ್ನ ಪೊನ್ನ
ಹುಟ್ಟಿಬರಲಿ ಮತ್ತೆ
ಸರ್ವಜ್ಞ ಬಸವ ಅಲ್ಲಮ ಶರೀಫ
ಅಕ್ಕಮಾಹಾದೇವಿಯಂತವರು|
ಉದಯಿಸಲಿ ಮಗದೊಮ್ಮೆ
ಹರಿಹರ ರಾಘವಾಂಕ ನೃಪತುಂಗರಂತ
ಮಹಾ ಕವಿಗಳು||

ಹುಟ್ಟಿ ಬರಲಿ ಮತ್ತೆ
ಪಂಡಿತ್ ಭೀಮಸೇನ ಜೋಯಿಸ
ಗಂಗುಭಾಯಿ ಹಾನಗಲ್|
ಪುನರಪಿಸಲಿ ಮತ್ತೆ
ಪಂಡಿತ್ ಬಸವರಾಜ ರಾಜಗುರು
ಪಂಚಾಕ್ಷರಿ ಗವಾಯಿಯರು|
ಉದಯಿಸಲಿ ಇನ್ನೊಮ್ಮೆ
ಸಂಗೊಳ್ಳಿ ರಾಯಣ್ಣ
ಸಂಚಿ ಹೊನ್ನಮ್ಮನಂತವರು|
ಉದಯಿಸಲಿ ಇನ್ನೊಮ್ಮೆ
ಬೆಳವಡಿ ಮಲ್ಲಮ್ಮ
ಕಿತ್ತೂರ ರಾಣಿ ಚೆನ್ನಮ್ಮಾಜಿಯಂತವರು
ಹುಟ್ಟಿಬರಲಿ ಮತ್ತೊಮ್ಮೆ ಮಗದೊಮ್ಮೆ
ವರನಟ ಮುತ್ತು ರಾಜಕುಮಾರಂತವರು||

ಉದಯಿಸಲಿ ಇನ್ನೊಮ್ಮೆ
ಕನಕ ಪುರಂದರ ದಾಸವರೇಣ್ಯರು
ಹಾಸ್ಯ ರತ್ನ ರಾಮಕೃಷ್ಣ|
ಉದಯಿಸಲಿ ಇನ್ನೊಮ್ಮೆ
ಸಿ.ವಿ. ರಾಮನ್‌ನಂತವರು|
ಭಾರತರತ್ನ ವಿಶ್ವೇಶ್ವರಯ್ಯನಂತವರು
ಮೊಳಗಿಸಲಿ ಎಲ್ಲೆಡೆ ಕನ್ನಡದ ಕಹಳೆಯನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗುವಿನ ಹಾಡು
Next post ಹುಣ್ಣಿವೆಯ ಹೊತ್ತಿನ ಹುಟ್ಟು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…