
ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ....
ಯಾರೋ ಬಂದು ಬಾಗಿಲು ತಟ್ಟಿದಾಗ ತನ್ನಷ್ಟಕ್ಕೆ ಮುದಗೊಂಡು ಬಾಗಿಲು ತೆರೆಯಿತು. ಆಗ ನನಗನ್ನಿಸಿತು ಕದ ಬಾಗಿಲಲ್ಲಿಲ್ಲ ಅದನ್ನು ತಟ್ಟುವ ಕೈಗಳ ಹದದಲ್ಲಿದೆ. *****...
ಒಂದು ಪರಿಪೂರ್ಣ ರೊಟ್ಟಿಗಾಗಿ ಎಷ್ಟೊಂದು ಹಸಿವಿನ ಘಳಿಗೆಗಳು ಸಾಯಬೇಕು. ಶುಭ್ರ ಬೆಳಗಿಗಾಗಿ ನಾವೂ ಹಟ ಹಿಡಿದು ಕಾಯಬೇಕು....
ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವ...













