
ಯಾವ ಜನುಮದ ಪುಣ್ಯವೋ ಎನ್ನ ಮನದುಂಬಿ ಬಾಳ ಸಂಗಾತಿಯಾಗಿ ನೀ ಬಂದಾಗಿನ ಸಂತಸದ ಕ್ಷಣದ ಹಾಡು ಹಾಡಲೇ ನಿನ್ನ ಕಣ್ಣಿನ ಕುಡಿಮಿಂಚು ಕೋಲ್ಮಿಂಚು ಎನ್ನೆದೆಯ ನಾಟಿ ಮೀಟಿ ಪ್ರೀತಿ ಬೀಜವ ಬಿತ್ತಿ ಹೃದಯದಲಿ ಮೊಳಕೆಯೊಡೆದ ಹಾಡು ಹಾಡಲೇ ಮೋಹಕ ನಗೆಯ ಹಾಲು ಹೊಳೆ...
ಅಜ್ಜ ಆಲಕ್ಕೆ ಜೋಕಾಲಿ ಕಟ್ಟಿದ್ದ ಮೊಮ್ಮಗ ಅಮೆರಿಕಾಕ್ಕೆ ಹಾರಿದ್ದ! *****...
೧೩ ವಸಂತಗಳು ಕನ್ನಡ ನಲ್ಬರಹದ ಸೇವೆ ಮಾಡಲು ಕಾರಣರಾದ ನಮ್ಮೆಲ್ಲ ಬರಹಗಾರರಿಗೆ, ಓದುಗರಿಗೆ ಹಾಗೂ ಸದಸ್ಯರಿಗೆ ನನ್ನಿ....
ಕಲಿಯಲಿಲ್ಲ ನಾವು ಕೃಷ್ಣ, ಕ್ರೈಸ್ತ, ಪೈಗಂಬರ, ಬುದ್ಧ, ಮಹಾವೀರ, ಸಂತರೆಲ್ ಬೋಧಿಸಿರುವ ಶಾಂತಿ ಮಂತ್ರ, ಕಲಿಯಲಿಲ್ಲ ನಾವು ಗೀತೆ ಬೈಬಲ್ ಕುರಾನಿನಿಂದ ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ, ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ! ಮಾರಿಕೊಂಡೆವು ...
ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ ಕೊಟ್ಟ ಮೋಹಿನಿಯ ಕಂಬನಿಯ ಅದೆಷ್ಟು ಕುಡಿದೆ! ಭರವಸೆಗೆ ಶಂಕೆಯ ಶಂಕೆಗಾಸೆಯ ಬೆರಸಿ, ಗೆದ್ದೆ ಇನ್ನೇನೆಂಬ ಗಳಿಗೆಯಲ್ಲೇ ಬಿದ್ದೆ. ಕೊಳಕು ತಪ್ಪುಗಳಲ್ಲಿ ಬಳಸಿಯೂ ನಾನೆಂಥ ಅದೃಷ್ಟವಂತ ಎನ್ನುವ ಹಿಗ್ಗಿನಲ್ಲಿದ್ದೆ...
ರಂಗನಾಥಪುರದ ಗಂಗೇಗೌಡರು ರಂಗನಾಥಪುರದ ಹತ್ತಿರ ಬಸ್ಸು ನಿಂತಿತು. ರಂಗಣ್ಣ ಕೆಳಕ್ಕೆ ಇಳಿದನು, ಗುಮಾಸ್ತೆ ಶಂಕರಪ್ಪನೂ, ಹೆಡ್‌ಮೇಷ್ಟ್ರು ತಿಮ್ಮಣ್ಣ ಭಟ್ಟನೂ, ಇತರ ಮೇಷ್ಟ್ರುಗಳೂ ಕೈ ಮುಗಿದರು. ಬೀಡಾರವನ್ನು ಮುಸಾಫರಖಾನೆ ಯಲ್ಲಿ ಏರ್ಪಾಟು ಮಾಡಿದ್ದು...
ಮೋಡದೊಳಗೆ ದೇವದೇವಯಾನಿಯರ ಮೆಲ್ಲನುಸಿರೋ ಝಲ್ಲೆನ್ನುವ ಮಾತೋ ಸುತ್ತಾಟ ಜಗ್ಗಾಟ ಕೊಸರಾಟ ದಿಕ್ಕು ದಿಕ್ಕಿನೆದೆಯಾಳದೊಳಗೆ ದಾಹ ಇದು ಮದೋನ್ಮತ್ತ ದೇವಸ್ಪರ್ಷ. ಸಳಸಳನೆ ಮಳೆಬೀಜ ಸುರಿಸಿ ಬೆವರೊಡೆಯುವ ಘಳಿಗೆ ನಾಭಿಯುಸಿರು ನಾಸಿಕದೆಡೆಗೆ ಸೆಳೆತ ಜೀವಕುಡ...
ಅವಳು ಮನದ ಗುಡಿಯಲ್ಲಿ ಕುಳಿತು ಮತ್ತೆ ಹಾಡಿದಳು. ಹಾಡು ಅರಿಯದ ನಾನು ವಾಸ್ತವದ ಗೂಡು ಸೇರಿಕೊಂಡು ಕನಸು ನುಂಗಿಕೊಂಡೆ. *****...
ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ನೀಯತ್ತೇ ನಮ್ಮ ಕಾಯ್ದೆ ಕಡಗೀಲು. *****...
ಚೆನ್ನಾಗಿದೆ ಅವರಿಗೆ ವಿಲ್ ಪವರ್ ಮಕ್ಕಳಿಲ್ಲದ ಮಾವ ಬರೆದಿರುವರು ಎಲ್ಲ ಆಸ್ತಿ *****...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...















