Home / Poem

Browsing Tag: Poem

ಹೊಲೆ ಮನೆ ಹೊಲೆಯಾಗುವ ಮನೆ ಸತ್ತವರ ಮನೆ ಸಾವಿನ ಮನೆ ನನಗೆ ಡಿಕಾಕ್ಷನ್ ಮಾತ್ರ ಸಾಕು ಎಂದರು ಇವರು ಏನೊ ತಲೆನೋವು ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು ಎಳೆಯುತ್ತಿದೆ ನರ ಸುಮ್ಮನೇ ಇರುವುದು ಇಲ್ಲಿ ಸುಮ್ಮನಿರುವುದೆ ನಮ್ಮ ಕೆಲಸ ಮತ್ತು ನಿರ...

ಕೇಶವೇ ವಸ್ತ್ರವೆಂದು ಅದನ್ನೆ ಮೈ ತುಂಬಾ ಹೊದ್ದು ಉಟ್ಟಿದ್ದೆಲ್ಲವ ಬಿಸುಟು ಹೊರಟೇಬಿಟ್ಟೆಯಲ್ಲೆ ಅಕ್ಕ ಮರೆಯಲು ಮನದಾಳದ ದುಃಖ ನಿನಗಾಗಿ ಅಲ್ಲಿದ್ದ ಚೆನ್ನ ಹುಡುಕಿ ಹೊರಟೆ ಅವನನ್ನೆ ಲೋಕದಿದಿರು ನೀ ಆದೆ ಭಿನ್ನೆ ಅಂಜಲಿಲ್ಲ, ಅಳುಕಲಿಲ್ಲ ನೀ ದಿಟ್ಟೆ...

ಒಂದಿಷ್ಟು, ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ ನನ್ನದೇ ಕಲ್ಪನೆ ಬೆರೆಸಿ ಸುಂದರ ಮನೆಯಾಗುತ್ತೇನೆ ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ! ಒಂದಿಷ್ಟೇ ಇಷ್ಟು ಹಸಿ...

ಪ್ರೇಮ ವಿವಾಹವಾಗಿಯೇ ತೀರುತ್ತೇನೆಂದು ಮನೆ ಮಂದಿ ಮುಂದೆ ಗುಡುಗಿ ಹಠ ಹೊತ್ತು ಪಂಥ ಕಟ್ಟಿದ್ದ ಎಂ.ಎಸ್.ಸಿ., ಮ್ಯಾಥಮ್ಯಾಟಿಕ್ಸ್ ಹುಡುಗಿ ಕಡೆಗೂ ಗೆದ್ದೇಬಿಟ್ಟಳು ನೋಡಿ ಒಬ್ಬನ ಜತೆ ಪ್ರೇಮ, ಇನ್ನೊಬ್ಬನೊಡನೆ ವಿವಾಹ ಪ್ರೇಮ+ವಿವಾಹ, ಪ್ರೇಮವಿವಾಹವಾಗ...

ಗಚ್ಚು ಮಾಳಿಗೆ ಮೇಲೆ, ಕಲ್ಲು ಹಾಸಿಗೆ ಕೆಳಗೆಲ್ಲ ಎಡಬಲಕು ಇಹುದು ರಂಜಿಸುವ ರಂಗು ಮಿರುಗುವ ಗೋಡೆ ಸದ್ದಿಲ್ಲ ! ಕಂಡು ಕಂಡಿಲ್ಲ !! ಬಂದು ಬಂದಿಲ್ಲ !!! ಯಾವೆಡೆಯಿಂದಿಳಿಯುವಿರಿ ನೀವು? ನಿಮ್ಮ ನಾ ನೋಡೆ ಮಿಣಿಕೊಮ್ಮೆ, ಇಣಿಕೊಮ್ಮೆ ಮಿಂಚುವಿರಿ ಕಣವೇ...

ನಾವೇ ಅದರೊಳಗೆ ಹೋಗುತಲಿದ್ದರೂ ರಾಕ್ಷಸಾಕಾರದ ಕರಿಮೋಡಗಳ ಗುಂಪು ಗುಂಪೇ ನಮ್ಮೆಡೆಗೆ ಬರುವಂತಿದೆ ಗಬಕ್ಕನೆ ಅವು ನಮ್ಮನ್ನು ನುಂಗಿ ನೀರು ಕುಡಿಯುತ್ತವೆಯೋ- ನಮ್ಮ ವಿಮಾನವೇ ಆ ರಾಕ್ಷಸರನ್ನು ಚಚ್ಚಿ ಕೊಲ್ಲುತ್ತದೆಯೋ- ಏನೋ ಜಿದ್ದಾಜಿದ್ದಿ ಸ್ಪರ್ಧೆ. ...

ಏರಿ ಏರಿ ಮೇಲೇರುತ ನಭದಲಿ ಹಕ್ಕಿ ಜವ್ವನದ ಅಮಲಿನಲಿ ಬೀಗುತಿಹುದು ಸೊಕ್ಕಿ | ಶೈಶವ ಬಾಲ್ಯದ ಗೂಡನೆ ಮರೆತು, ಮೋಡದಲೆಯ ನೂಪುರದಲಿ ಕುಳಿತು, ಮುಪ್ಪನು ಕಂಡು ಜಗಿದು ಜರಿದು, ನಸು ನಗುತಿದೆ ಗರಿಗೆದರಿ | ರೆಕ್ಕೆ ಪುಕ್ಕ ಕೊಕ್ಕಿನಲುನ್ಮಾದವು, ನೆತ್ತರ ...

ಈ ಮಧ್ಯಾಹ್ನ ಅವಳು ದಾಟಿ ಹೋದಳು ಹಾಗೆಯೇ ಇದ್ದವು ಅರೆತೆರೆದ ಕಣ್ಣುಗಳು ಕನಸುಗಳು ಅದು ಅಪರೂಪದ ದೃಶ್ಯವೆಂದು ಅನಿಸಿಕೊಂಡಾಗಲೇ ಬೆರೆಯುತ್ತಿತ್ತು ಬೆವರ ಹನಿಗಳು ಗಾಳಿಯಲಿ, ಅವಳು ಮೆತ್ತಗೆ ನಡೆಯುತ್ತಿದ್ದಳು. ಗಾಳಿಯಲಿ ತೇಲಿದ ಪರಾಗ ಸೆರಗಿನಗುಂಟ ಹರ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...