Home / Kannada

Browsing Tag: Kannada

ತಲೆಯಲ್ಲಿ ನೆರೆ, ಕೆನ್ನೆ ಹಣೆಯಲ್ಲಿ ಹಳೆಯ ಬರೆ ಮೈ ಸುಕ್ಕು, ಉಸಿರಾಟ ಕೊಳವೆ ತುಕ್ಕು ಕಾಲೆರಡು ಕೋಲು, ಕೈ ಬೀಳು, ದೃಷ್ಟಿಯೆ ಹಾಳು ಹೊಸ ವರ್ಷ ಬಾ ಬಂದು ನಮ್ಮನ್ನಾಳು ಬುದ್ಧಿ, ಶ್ರಮ, ಹಣ ಎಲ್ಲ ಸುರಿದು ದುಡಿದಿದ್ದೇವೆ ಹಗಲು ಇರುಳೆನ್ನದೇ ನಿದ್ದೆ...

ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ....

-೧- ಭೂಮಿ ಮೇಲೆ ಜಂಗಮನ ಹೆಜ್ಜೆ ತುಳಿಸಿಕೊಂಡರೂ ಪಾದಕ್ಕೆ ನೋವಾಯಿತೇ ಎನ್ನುತ್ತಾಳೆ ಅವ್ವ -೨- ದಡದಲ್ಲಿ ನಿಂತು ಮಾತಾಡಿದೆ ಕನಸುಗಳ ಕಳುಹಿಸಿದೆ ಆಕೆ ದೂರದಿಂದಲೇ ಹೂವಾದಳು -೩- ನಿನ್ನ ಶಬ್ದಕ್ಕೆ ಬದುಕು ಕಟ್ಟುವ ಕಸುವು ಇದೆ ಎಂದು ತಿಳಿದಾಗ ನಿಶಬ್...

ಮಲಗಿದಾಗಲೆಲ್ಲಾ ಅವೇ ಕನಸುಗಳು ಮರುಕಳಿಸಿ ಅಂಕು ಡೊಂಕು ಕತ್ತಲೆದಾರಿ ಕಂದರದಲಿ ನನ್ನೊಗಿದು ಬಿಡುತ್ತದೆ ಬೆಚ್ಚಿ ಬಿದ್ದು ಎದ್ದು ಕೂರುತ್ತೇನೆ. ಮುಳುಗಿದನೋ ತೇಲಿದನೋ ಈಜಿದನೋ ಕಿತ್ತು ಕಿತ್ತು ಕಿಬ್ಬೊಟ್ಟೆಯ ನರಗಳೆಲ್ಲಾ ಪರ್ವತದ ಗುಡ್ಡೆ ರಾಶಿ ಕತ್...

ಘೋರಿಯ ಮಹಮದನಿದ್ದ ಘಜನಿಯ ಮಹಮದನಿದ್ದ ಬಾಬರನೂ ಇದ್ದ ಬಾಬರ ಮಾತ್ರ ಬೇರೆಯಾಗಿದ್ದ ಅವನು ಕವಿಯಾಗಿದ್ದ ಕಾಬೂಲಿನ ಎತ್ತರದಲ್ಲಿ ನಿಂತು ಅವನು ದಕ್ಷಿಣದತ್ತ ನೋಡಿದನು ಪರ್ವತಗಳ ಆಚೆ ನದಿಗಳ ಕೆಳಗೆ ಹರಡಿತ್ತು ಉಪಖಂಡ ಕೊನೆಯಿಲ್ಲದಂತೆ-ಆ ಘಳಿಗೆ ಕವಿ-ಯೋಧ...

ನನ್ನ ಕನಸಿನ ಮೊಗ್ಗು ಬಾಡಿ ಹೋಗುವ ಮುನ್ನ ಕಟ್ಟಬೇಕಿದೆ ಮಾಲೆ ಪೋಣಿಸಿಟ್ಟು ಬದುಕ ಹಾಡಿನ ಭ್ರಮರ ಹಾರಿ ಹೋಗುವ ಮುನ್ನ ಬರೆಯಬೇಕಿದೆ ಸಾಲು ಕೂಡಿಸಿಟ್ಟು ಜೀವ ಜ್ಯೋತಿಯ ಎಣ್ಣೆ ತೀರಿಹೋಗುವ ಮುನ್ನ ಹೊಸೆಯಬೇಕಿದೆ ಬತ್ತಿ ಹುರಿಯಗೊಳಿಸಿ ಶಕ್ತ ದೇಹದ ಕಸು...

ನಿನ್ನ ಒಳಗೊಂದು ನದಿಯಿದೆ ನನ್ನ ಕಿವಿ ಹೇಳಿದೆ- ಅದಕ್ಕದರ ಕಲಕಲ ಕೇಳಿಸುತ್ತಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ನಾಲಗೆ ಹೇಳಿದೆ- ನದಿಯ ನೀರು ಸಿಹಿಯಾಗಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ಮೂಗು ಹೇಳಿದೆ- ನದಿಯೊಳಗೆ ಸುಗಂಧವಿದೆ. ನಿನ್ನ ಒಳಗೊ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...