ಹಸಿವು ತೀರಿಹೋದರೂ
ಹಸಿ ಆರುವುದಿಲ್ಲ
ರೊಟ್ಟಿ ಹಸಿವಿನೊಡಲಲ್ಲಿ
ಕರಗಿಹೋದರೂ
ರುಚಿ ತೀರುವುದಿಲ್ಲ.
ಹಸಿವು ರೊಟ್ಟಿಗಳ
ಆರದ ತೀರದ
ನಿರಂತರ ಪಯಣಕೆ ಮೂಲ
ಈ ಪರಸ್ಪರ ಸೆಳೆತ.