೧,೮೦೦ ಕಿ.ಮೀ. ಎತ್ತರದಲ್ಲಿ ಸರ್ವಾಂಗ ಸುಂದರವಾದ ಕಲಾಕೃತಿಯಂತೆ ಮನಸ್ಸನ್ನು ಸೆಳಯಬಲ್ಲ ಉಪಗ್ರಹವೊಂದರ ಸಿದ್ಧತೆಯಾಗುತ್ತಿದ್ದು ಇದನ್ನು ಹಾರಿ ಬಿಡಲು ಪ್ರೆಂಚ್ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ ಇದು ೫೦ ಸಾವಿರ ವರ್ಷಗಳ ನಂತರ ಭೂಮಿಗಿಳಿಯುವ ‘ಕಾಲಕೋಶ’ ಇದಾಗಿದೆ. ಮೇಲಕ್ಕೇರಿದಾಗ ಭೂಮಿಗೆ ಮುಖ ಮಾಡಿ ನಿಶ್ಚಲವಾಗಿ ನಿಲ್ಲುವ ಇದು ಪೂರ್ಣಾವಧಿಯ ನಂತರ ನಿಧಾರವಾಗಿ ಉರಿಯುತ್ತ ಉಜ್ವಲ ಬೆಳಕಿನಿಂದ ಕೋರೈಸುತ್ತ ಕೆಳಕ್ಕೆ ಬಿದ್ದೂ ಅದರೊಳಗೆ ಮಿನುಗುವ ‘ಟೈಟಾನಿಯಂ’ ಲೋಹದ ಗೋಲಾಕಾರದ ಕಾಲಕೋಶ ಗೋಚರಿಸುತ್ತದೆ. ಮುಂದೊಂದು ದಿನ ಈ ಭೂಮಿಯ ಮೇಲೆ ವಾಸಿಸುವ ಜನವು ಇದನ್ನು ಒಡೆದು ನೋಡವಂತಾಗುತ್ತದೆ.

ಇ- ಮೇಲ್ ಮೂಲಕ ಪತ್ರವನ್ನು ಕಾಂಪ್ಯಾಕ್ಟ್ ಡಿಸ್ಕಿನಲ್ಲಿ (C.D.) ಮುದ್ರಿಸಿ ಇದರೊಳಗೆ ಇಡಲಾಗುತ್ತದೆ. ಕಿಯೊ (KEO) ಹೆಸರಿನ ಈ ಉಪಗ್ರಹ ಕೇವಲ ಹತ್ತರೊಳಗೆ ಹನ್ನೊಂದನೆ -ನೌಕೆಯಾಗಿರದೇ ಸುಂದರಕಲಾ ಕೃತಿಯಾಗಿ ರೂಪುಗೊಳ್ಳುತ್ತದೆ. ಈ ಕಾಲಕೋಶವನ್ನು ಕಲ್ಪಿಸಿದ ಪ್ರಾನ್ಸ್‌ನ ಖಗೋಳ ವಿಜ್ಞಾನಿ ಜಿನ್‌ಮಾರ್ಕ್ ಫಿಲಪ್ ಸ್ವತಃ ಕಲಾವಿದ ಕಕ್ಷೆಯಲ್ಲಿ ವಜ್ರದ ಹಾಗೆ ಹೊಳೆಯುವ ಈ ಗೋಲಾಕಾರದ ಕಾಲಕೋಶಕ್ಕೆ ಉದ್ದನೆಯ ಎರಡು ರೆಕ್ಕೆಗಳಿರುತ್ತವೆ. ಕನ್ನಡಿ ಬಣ್ಣದ ಪಕ್ಷಿಯಂತೆ ಅದು ನಿಂತಲ್ಲೆ ತನ್ನ ರೆಕ್ಕೆಗಳನ್ನು ೫೦ ಸಾವಿರ ವರ್ಷಗಳವರೆಗೆ ಬಡಿಯುತ್ತ ಇರುತ್ತದೆ. ಮನುಷ್ಯನ ಈಗಿನ ತಾಂತ್ರಿಕ ಸಾಧನೆಗಳ ಪರಾಕಾಷ್ಟತೆಯನ್ನು ಜಗತ್ತಿಗೆ ಇದು ಬಿತ್ತರಿಸುತ್ತದೆ. ನಿಂತಲ್ಲೆ ಉಲ್ಕಾಕಣಗಳ ದಾಳಿಗೆ ತುತ್ತಾಗದಂತೆ ಟಂಗ್‌ಸ್ಟನ್ – ಅಲ್ಯೂಮಿನಿಯಂ ಮತ್ತು ಟೈಟಾನಿಯಂ ಅನೇಕ ಲೋಹದ ಪದರುಗಳನ್ನು ಹೊದಿಸಲಾಗುತ್ತದೆ. ದೇಹ ಮತ್ತು ಕಾಲಕೋಶ ಎರಡೂ ಸೇರಿ ೧೦೦ ಕಿಲೋ. ವಿರುವುದಿಲ್ಲ. ಬಾಹ್ಯಾಕಾಶದಲ್ಲಿ ಮನುಷ್ಯರೇ ಹಾರಿಬಿಟ್ಟ ಅನೇಕ ಲೋಹದ ತುಣುಕುಗಳಿವೆ. ಅವು ಈ ಕೋಶಕ್ಕೆ ಅಪ್ಪಳಿಸಿದ ಹಾಗೇ ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಕಾಲಕೋಶಕ್ಕೆ ಕಲಾತ್ಮಕ ರೆಕ್ಕೆ ಮೂಡುವಲ್ಲಿಯೂ ತಾಂತ್ರಿಕ ನೈಪುಣ್ಯವಿದೆ. ‘ನಿಟನಾಲ್’ ಎಂಬ ಮಿಶ್ರ ಲೋಹಕ್ಕೆ ಒಂದು ವಿಶಿಷ್ಟ ನೆನಪಿನ ಶಕ್ತಿ‌ಇದೆ. ಭೂಮಿಯ ನೆರಳು ಬಿದ್ದಾಗ ಅದರ ರೆಕ್ಕೆ ತಾನಾಗಿಯೇ ಮಡಿಚಿಕೊಳ್ಳುತ್ತದೆ. ಬಿಸಿಲಿದ್ದಾಗ ಬಿಚ್ಚಿಕೊಳ್ಳುತ್ತದೆ. ಈ ನೆನಪಿನ ‘ನಿಟಿನಾಲ್’ ಮಿಶ್ರ ಲೋಹದಿಂದ ಈ ರೆಕ್ಕೆಯನ್ನು ತಯಾರಿಸಲಾಗಿದೆ.

ಟೈಟಾನಿಯಂ ಕೈಟ್ರೆಟ್ ರಸಾಯನ ಲೇಪನ ಪರಮಾಣು ತಜ್ಞರು ವೇಗವರ್ಧಕಗಳಲ್ಲಿ ಇಟ್ಟು ಪರೀಕ್ಷೆ ಮಾಡಿ ಸಿಡಿಯಲ್ಲಿನ ಮಾಹಿತಿಗಳನ್ನು ಇರಿಸಿದ್ದಾರೆ. ೫೦ ವರ್ಷಗಳವರೆಗಿನ ಅವಧಿಯಲ್ಲಿ ಬಾಷ್ಯಾಕಾಶದ ಅಪಾಯಕಾರಿ ವಿಶ್ವಕಿರಣಗಳಿಗೆ ಮೈ ಒಡ್ಡಿದರೂ ಏನೂ ಆಗಲಾರದು. ಇಡೀ ಭೂಮಿಯ ಜನರ ಜಾತಿ, ಕುಲ, ಗೋತ್ರ, ಬಣ್ಣ ಮೈಕಟ್ಟು, ಮುಖಲಕ್ಷಣ ರಕ್ತಗುಣದ ಸ್ಯಾಂಪಲ್‌ಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಿ ಒಂದು ಗಾಜಿನ ಫಲಕಗಳಲ್ಲಿ ಇಡಲಾಗಿದೆ. ಕೃತಕ ವಜ್ರದಲ್ಲಿ ೪ ಚಿನ್ನದ ಮಾತ್ರೆಗಳನ್ನು, ಇಂದಿನ ಮಣ್ಣು ಒಂದು ಹನಿ ಸಮುದ್ರದ ನೀರು, ಗಾಳಿ ಮತ್ತು ರಕ್ತದ ಒಂದು ಹನಿಗಳನ್ನು ಸಹ ಭದ್ರ ಪಡಿಸಿ ಇದರೊಳಗಿಡಲಾಗಿದೆ. ಮನುಷ್ಯರ DNA ಸರಪಳಿಯನ್ನು ಆ ವಜ್ರದ ಮೇಲೆ ಕೊರೆಯಲಾಗುತ್ತದೆ.

ಇಷ್ಟಲ್ಲದೇ ಕಾಂಪಾಕ್ಟ್ ಡಿಸ್ಕ್‌ಗಳನ್ನು ಸಹ ಸೇರಿಸಿ ಇಡಲಾಗಿದೆ. ೨೧ ನೇ ಶತಮಾನದ ಆರಂಭದಲ್ಲಿ ನಾವು ಹೇಗಿದ್ದೇವೆ ಎಂದು ಕೋಟ್ಯಾಂತರ ಜನರು ಸ್ವಾವಲೋಕನ ಮಾಡಿಕೊಂಡು ಸಂದೇಶ ರವಾನಿಸತೊಡಗಿದ್ದಾರೆ. ಇಂಥಹ ಕಾಲಜ್ಞಾನವೊಂದು ದಿ|| ಪ್ರಧಾನಿ ಇಂದಿರಾಗಾಂಧೀಯವರ ಕಾಲದಲ್ಲಿ ಭೂಗರ್ಭದಲ್ಲಿ ಒಂದು ಕಾಲಕೋಳದಲ್ಲಿ ಹೂಳಲಾಗಿದೆ.
*****