“ಅನು, ಅನು” ಹೊರಗಿನಿಂದಲೇ ಕೂಗುತ್ತ ಒಳಬಂದ ಸದಾನಂದ ಏದುಸಿರು ಬಿಡುತ್ತ ಅನುವನ್ನು ಹುಡುಕಿಕೊಂಡು ಹಿತ್ತಿಲಿನವರೆಗೂ ಬಂದ. ಬಟ್ಟೆ ತೆಗೆಯುತ್ತಿದ್ದವಳನ್ನು ಕಂಡವನೇ “ಅನು ಕೇಳಿದ್ಯಾ, ಚಂದ್ರು ಅಮ್ಮನ್ನ ನಾಲಿಗೇನಾ ಯಾರೋ ಕತ್ತ...
ಒಬ್ಬ ಹೆಂಡತಿಯನ್ನು ಕರೆದುಕೊಂಡು ಸ್ಪೆಷಲಿಷ್ಟ್ ಬಳಿಗೆ ಹೋದ. “ಅವಳು ಬಾಯಿಗೆ ಬಂದಂತೆ ಬೈಯುತ್ತಿರುತ್ತಾಳೆ. ನನಗೆ ಅವಳು ಏನು ಬೈಯುತ್ತಿದ್ದಾಳೆ ಎನ್ನುವುದು ಕೇಳಿಸುವುದೇ ಇಲ್ಲ. ಈಗ ಯಾರಿಗೆ ಚಿಕಿತ್ಸೆ ಅಗತ್ಯ ಎಂಬುದನ್ನು ನೀವು ತಿಳಿದು ಹೇ...
ನಲ್ಲೆ ನಮ್ಮ ಪ್ರೀತಿಗೇಕೆ ಇಂಥ ಪಾಡು ಈ ನೆಲೆ? ಆಯಿತೇಕೆ ಬಾಳು ಹೀಗೆ ಗಾಳಿಗೆದ್ದ ತರಗೆಲೆ? ನೀ ಉತ್ತರ ನಾ ದಕ್ಷಿಣ ಸೇರಲಾರದಂತರ, ತಾಳಿ ಹೇಗೆ ಬಾಳಿಯೇವು ವಿರಹವನು ನಿರಂತರ? ಇಲ್ಲಿ ಒಲುಮೆಗೆಲ್ಲಿ ಬೆಲೆ ಕಲೆಯಗೊಡದ ಜಗವಿದು, ಕನಸೊಂದೇ ದಾರಿ ನಮಗೆ ಮ...
ಕೆಂಪು ಸಮುದ್ರದ ಕನ್ಯೆ ಸೂರ್ಯನಿಗೆ ಪ್ರಾರ್ಥಿಸಿಕೊಂಡಾಗ ಕನಸಿನ ಮುತ್ತುಗಳು ಮಾಲೆಯಾಗಿ ಜೇನು ಹೊಳೆಯಾಗಿ ಕಾಮನ ಬಿಲ್ಲಾಗಿ ಬೆಳದಿಂಗಳಾಗಿ ಬಿಸಿಯುಸಿರಿನಲಿ ಕೆನ್ನೆ ಕಚ್ಚಿದ ಕೆಂಪು ಕೆನ್ನೆ ಅರಳಿಕೊಂಡು ಮತ್ತೇರಿದಾಗ ಕನ್ಯೆಯ ಒಡಲಾಳದಲ್ಲಿ ಮುಂಜಾವಿನ...
ಬ್ಯಾಂಕುಗಳಲ್ಲಿ ಅಥವಾ ದೊಡ್ಡ ವ್ಯಾಪಾರಿ ಕಂಪನಿಗಳಲ್ಲಿ ಲಕ್ಷ ಲಕ್ಷ ಕೋಟಿ ಹಣವನ್ನು ಅತಿಬೇಗನೆ ಎಣಿಸಬೇಕಾಗುತ್ತದೆ. ಮನುಷ್ಯನ ಎಣಿಸುವಿಕೆಯ ವೇಗದಲ್ಲಿ ಸ್ವಲ್ಪ ನೆನಪು ಹುಸಿಯಾದರೂ ಎಣಿಕೆ ತಪ್ಪಾಗಿ ಮುಂದೆ ಅನೇಕ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದ...
ಪ್ರತಿಯೊಂದು ರಸ್ತೆಯ ಎದೆಗೂಡು ಒಂದೊಂದು ನೋವಿನ ಮಡು ರಸ್ತೆ ತನ್ನ ನೋವು ಹೇಳುವುದಿಲ್ಲ ಬಿಡಿ ನಾವು ಕೇಳುವುದೂ ಇಲ್ಲ! ರಸ್ತೆಗಳ ಗರ್ಭದೊಳಗೆ ಅದೆಷ್ಟೊಂದು ಗುಟ್ಟುಗಳಿವೆಯಲ್ಲಾ ವಿಪರ್ಯಾಸವೆಂದರೆ ರಸ್ತೆಗಳು ಮಾತನಾಡುವುದಿಲ್ಲ ಮಾತನಾಡಬಾರದಲ...
ನನ್ನ ದೇಶದ ಮಂಚದ ಮೇಲಿನ ಅಂದವಾದ ದುಪ್ಪಟಿ ತೆಗೆದು ನೋಡಿದರೆ ಅಸ್ತವ್ಯಸ್ತವಾಗಿ ಎಲ್ಲೆಂದರಲ್ಲಿ ಹರಿದ ನುಲಿಗಳೇ *****...
ಗಂಡಹೆಂಡಿರು ಮಾತಾಡಿಕೊಂಡು ಒಂದು ಹಿಂಡುವ ಎಮ್ಮೆಯನ್ನು ಕೊಂಡುತಂದರು. ಹಾಲಿಗೆ ಹೆಪ್ಪು ಹಾಕಿ, ಬೆಣ್ಣೆ ತುಪ್ಪ ಮಾಡಿ ಮಾರಿಕೊಂಡರೆ ಕೈಯಲ್ಲಿ ಹಣವೂ ಆಗುವದೆಂದು ಗಂಡನು ಹೆಂಡತಿಗೆ ಸೂಚನೆಮಾಡಿದನು. ಅದಕೈ ಹೆಂಡತಿ ಸೈ ಎಂದಳು. ಕೆಂಡದ ಮೇಲಿಟ್ಟು ಹಾಲು...
“ಕರಿಯ ಬೆಕ್ಕು ಆಡ್ಡ ಬಂದರೆ ಶಕುನ ಒಳ್ಳಯದೆ ಪಂಡಿತರೇ ?” ಶಾಮಣ್ಣ ಕೇಳಿದ. ಪಂಡಿತರು: “ಇದಕ್ಕೆ ಉತ್ತರ ಬಹಳ ಸುಲಭ. ನೀನು ಮನುಷ್ಯನೋ ಇಲ್ಲವೆ ಇಲಿಯೋ ಎಂಬುದನ್ನು ಅವಲಂಬಿಸಿದೆ!” ***...
ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ? ಮೂಕನೋವನು ಸಹಿಸಿ ನಗೆನಟಿಸಿ ಮಾಡಿಕೋ ಕಲ್ಲೆದೆ ಎಂಥ ಬೆಂಕಿಯೆ ಪ್ರೀತಿ ನುಂಗಿ ತಾಳುವ ನೀತಿ ಚುಚ್ಚುನುಡಿ ಇರಿನೋಟ ಮೂದಲೆ, ಕರುಣೆಯೇ ಇರದೇನೊ ಕರಿಯುವುದೆ ಗುರಿಯೇನೊ ಕಾಯುತಿದೆ ಉರಿ ಎಣ್ಣೆ ಬಾಣಲ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






