ಹುಚ್ಚಾಸ್ಪತ್ರೆಯೊಂದರಲ್ಲಿ ರಾಜಕಾರಣಿಯ ಅಮೋಘ ಭಾಷಣ ಏರ್ಪಟ್ಟಿತ್ತು. ತಮ್ಮ ಆಡಳಿತ ಪಕ್ಷ ಸಾಧನೆಮಾಡಿದ ವಿಷಯವನ್ನು ವಿವರಿಸುತ್ತಿದ್ದ. ನಮ್ಮ ಸರ್ಕಾರ ಫ್ಲೈ ಓವರ್‌ಗಳನ್ನು ಎಲ್ಲಾ ಸ್ಥಳಗಳಲ್ಲೂ ಕಟ್ಟಿಸುತ್ತಿದೆ. ಮರಗಿಡಗಳನ್ನು ಬೆಳೆಸಲು ಕ್ರಮ ಕೈಗೊಂಡಿದೆ ಇತ್ಯಾದಿ ಹೇಳುತ್ತಿದ್ದಾಗ ಒಬ್ಬ ಹುಚ್ಚ ‘ನಾನ್‍ಸೆನ್ಸ್’ , ಎಲ್ಲಾ ಬೊಗಳೆ ಎಂದು ಕೂಗಾಡಲು ಆರಂಭಿಸಿದ. ಸಭೆಯಲ್ಲಿ ಗಲಾಟೆ ಹೆಚ್ಚಾಯಿತು. ಭಾಷಣ ನಿಂತಿತು. ಆಗ ಹುಚ್ಚಾಸ್ಪತ್ರೆಯ ಮುಖ್ಯ ವೈದ್ಯ ಮಧ್ಯೆ ಪ್ರವೇಶಿಸಿ “ಯಾರೂ ಆತಂಕಗೊಳ್ಳುವುದು ಬೇಡ; ಏಕೆಂದರೆ ಈತ ಇಷ್ಟು ‘ಸೆನ್ಸಿಬಲ್’ ಆಗಿ ಇವೆತ್ತೇ ಮಾತನಾಡುತ್ತಿರುವದು” ಎಂದರು. ಸಭೆಯಲ್ಲಿ ನಗೆಯ ಗುಲ್ಲೋ ಗುಲ್ಲು!
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)