ಮಾತನಾಡಿಸಬೇಕು

ಹೊರಳುತ್ತಿರುವ ಭೂಮಿಯನ್ನೂ ಉರುಳುತ್ತಿರುವ ಸಾಗರವನ್ನೂ ಮಾತನಾಡಿಸಬೇಕು ಉರಿಯುತ್ತಿರುವ ಬೆಂಕಿಯನ್ನೂ ಮೊರೆಯುತ್ತಿರುವ ಗಾಳಿಯನ್ನೂ ಮಾತನಾಡಿಸಬೇಕು ಮರಳುತ್ತಿರುವ ಹಕ್ಕಿಗಳನ್ನೂ ಅರಳುತ್ತಿರುವ ಹೂವುಗಳನ್ನೂ ಮಾತನಾಡಿಸಬೇಕು ಚಿಗುರುತ್ತಿರುವ ಮರವನ್ನೂ ಕರಗುತ್ತಿರುವ ಮಂಜನ್ನೂ ಮಾತನಾಡಿಸಬೇಕು ಆಕಾಶ-ಕಾಯದೊಳಗೆ ಅವಿನಾಶಿ ಸೂರ್‍ಯ! ದೇವರೆ... ಇವರದ್ದು...

ಕೋಳಿ

ಕೋಳಿ ಅತ್ಯುತ್ತಮ ನಿದರ್ಶನ -ಸತತವಾಗಿ ಮನುಷ್ಯರೊಡನೆ ಬದುಕಿದರೆ ಏನಾಗುತ್ತೆದೆನ್ನುವುದಕ್ಕೆ. ಹಕ್ಕಿಯ ಲಾಘವ, ಗಾಂಭೀರ್ಯ ಕಳೆದುಕೊಂಡಿದೆ ಕೋಳಿ. ಅಭಿರುಚಿ ಹೀನ ದೊಡ್ಡ ಹ್ಯಾಟಿನಂತೆ ಅದರ ಅಂಡಿನ ಮೇಲೆ ಉದ್ದೋ ಉದ್ದ ಪುಕ್ಕ. ಅಪರೂಪಕ್ಕೊಮ್ಮೆ ಭಾವೊನ್ಮತ್ತ ಕ್ಷಣದಲ್ಲಿ,...

ವಿದಾಯ

ನಿನ್ನ ಚುಂಬನದಲ್ಲಿ ಕಣ್ಣೀರ ಹನಿ ಬೆರೆತು ನನ್ನ ತುಟಿಗಳ ಮೇಲೆ ಮಾತು ಮರೆತು ಮುಗಿಯಿತಂದಿನ ಸಂಜೆ ಕತ್ತಲೆಯ ಹೊದ್ದು ಯುಗ ಯುಗದ ಗಾಢ ಮೌನದಲಿ ಬಿದ್ದು ಮತ್ತೆ ಬೆಳಕೊಡೆದು ಹುಡುಕಿದೆನು ಕಾಣಿಸದೆ ನಿನ್ನುಸಿರ ಪರಿಮಳವ...

ಕಾಲು ದಾರಿಯೆ ಸಾಕು…

ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ ನುಡಿಯ ಹಂಗೇಕೆ? ಕಡೆಯ ನುಡಿಯನೂ ಕೊಡವಿ...

ಸಾವು ಬಂದಾಗ

ಸಾವು ಬಂದಾಗ ನಾನು ನಿನ್ನೊಡನೆ ಇರಲಿಲ್ಲ. ಮುನಿಸಿಪಲ್ ಆಸ್ಪತ್ರೆ ನೀನಿದ್ದಕೊನೆಯ ಮನೆ : ಬಿಳಿಯ ಬಣ್ಣದ ರೂಮು, ಮೂಲೆಯಲ್ಲಿ ಜೇಡರಬಲೆ, ಚಕ್ಕೆ ಎದ್ದ ಗೋಡೆಯ ಬಣ್ಣ, ಉಪ್ಪಿನ ಕಾಯಿ ಬಾಟಲು, ನಾಲ್ಕು ತಿಂಗಳು ಹಳೆಯ...

ಮುಗಿಯಲಾರದ ದುಃಖಕೆ

ಕಣ್ಣ ಬೆಳಕೇ ಒಲವಿನ ಉಸಿರೇ ಜೀವದ ಜೀವವೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ ಉಸಿರಿಗೆ ಉಸಿರಾದವಳೇ ಬೆಳಕಿಗೆ ಬೆಳಕಾದವಳೇ ಕಣ್ಣ ಮುಂದಿನ ಬೆಳಕೆ ದಾರಿ ಮುಂದಿನ ಕನಸೇ ನಿನಗಾಗಿ ಬರೆಯುವೆ ಎಂದೆಂದೂ...

ಮೋಂಬತ್ತಿ

ಒಂದು ಗಂಟೆ ಪುಟ್ಟ ಕೋಣೆಯ ಬೆಳಗಿದೆ ಗೋಡೆಯ ಮೇಲೆ ಸುಂದರಿಯ ಪಟವಿತ್ತು ಪರಿಶೀಲಿಸಿದೆ ಹೂದಾನಿಯಲ್ಲಿ ತಾಜಾ ಹೂಗುಚ್ಚವಿತ್ತು ಆಘ್ರಾಣಿಸಿದೆ ಮರುಳೆ... ಬೂದಿಯಾಗಿರು ಎಂದು ಬೆಂಬತ್ತಿದ ಪತಂಗಕ್ಕೆ ತಿಳಿಯ ಹೇಳಿದೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಮುದುಕನ...

ಮುಂಜಾವದಲ್ಲಿ

ಮುಂಜಾವದಲ್ಲಿ ರೈಲಿನ ಕಿಟಕಿಯಿಂದ ನೋಡಿದಾಗ ಮಲಗಿದ್ದ ನಗರಗಳು, ರಕ್ಷಣೆಗೆ ಗಮನಕೊಡದೆ ಬೆನ್ನಡಿಯಾಗಿ ಬಿದ್ದುಕೊಂಡ ದೈತ್ಯ ಪ್ರಾಣಿಗಳು. ವಿಶಾಲ ಸರ್ಕಲ್ಲುಗಳಲ್ಲಿ ನನ್ನ ಆಲೋಚನೆಗಳು ಮತ್ತು ಬೆಳಗಿನ ಗಾಳಿ ಮಾತ್ರ ಸುಳಿದಾಡುತ್ತವೆ : ಕಛೇರಿಯ ಗೋಪುರದಲ್ಲಿ ಮೂರ್ಛೆ...