ಕರುಣಾಳು ಸಂತತವು ಕಾಯ್ವಬೀಳಿಸನೆಮ್ಮ
ಏಕೆ ಹೆದರಿಕೆ ಒಂದು ತಪ್ಪಿಗಾಗಿ
ಹೆದರದಿರು ದಟ್ಟಡಿಯ, ಹಾಕುತ್ತ ಹೋಗೋಣ
ದೇವನಿರುವಾ ದಿವ್ಯ ತಾಣಕಾಗಿ
ಹಲವು ಹಂಬಲಗಳನ್ನು ಹೊರಹಾಕಿ ಎದೆಗೂಡ
ಹಸನಾಗಿ ಇಟ್ಟು ಸೊಗ ಉಣ್ಣೋಣುಬಾ
ಒಂದೊಂದೆ ಮೆಟ್ಟಲವ ಮೇಲೇರಿ ಗುರಿಯನ್ನು
ಮುಟ್ಟೋಣ ಅಮೃತವನ್ನು ಕುಡಿಯೋಣಬಾ
ಜಾರಿ ವಿಶ್ವಾ ಮಿತ್ರ ತಪಗೈದು ಬ್ರಹ್ಮರ್‍ಷಿ
ತಾನಾಗಿ ಖ್ಯಾತಿಯನು ಪಡೆದನಲ್ಲ
ನಾನುಮಾಡಿದ ಕರ್‍ಮ ಬಲವಂತವಾಗುವದೇ?
ನಾನಾಗಿಮಾಡುವದೆ?… ನೀನೆ ಎಲ್ಲ
ಎಂಬಮಾತನು ನಂಬಿ ಎಲ್ಲವನು ದಿವ್ಯನಿಗೆ
ನೈವೇದ್ಯ ಮಾಡೋಣ ಬಾರೆತಾಯಿ
ಸಾಧನೆಯ ಮಾರ್‍ಗದಲಿ ಜೊತೆಯಾಗಿ ಕೈ ಹಿಡಿದು
ಸಾಗೋಣ ಬಾ, ತಾಯಿ ಕಾಯೆ ಮಾಯಿ
*****



















