ದಿನಾಲು ಉರಿಯುವ ಸೂರ್‍ಯನ
ಒಂದು ಕಿಡಿಯ ತೆಗೆದು, ಪ್ರಣತಿ
ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ,
ದೀಪ ಹಚ್ಚುವ ಕಾಲ ಮತ್ತು ನಾನು
ಖಾಸಾ ಗೆಳೆಯರು.
ಎದೆಯಿಂದ ಎದೆಯ ಆಳಕೆ
ಇಳಿದ ಇಷ್ಟದ ಕಷ್ಟದ ಕ್ಷಣಗಳ,
ಸರಿಸಿ ದಕ್ಕುವ ಬೆಳಕಿನ ಕೋಲುಗಳು.
ಆ ದಿನದ ಮೂರ್ತ ಕ್ಷಣಗಳ ಚಪ್ಪರಿಸಿದೆವು,
ಖಾಸಾ ಗೆಳೆಯರು.
ಹಾಗಂತ ಹಸಿದ ಹೊಟ್ಟೆಯ ತಳಮಳ
ಅವಮಾನಗಳ ಕಾಟ ತಪ್ಪಿಸಿಕೊಂಡು,02
ಒಲ್ಲದ ಮನಸ್ಸನು ಬೆಳಕಿಗೆ ಒಡ್ಡಿ
ಬೆಚ್ಚಗೆ ಮೈ ಕಾಯಿಸಿಕೊಂಡೆವು ನಾವು,
ಖಾಸಾ ಗೆಳೆಯರು.
ಒತ್ತಡ ಪ್ರೀತಿ ಅಂತಃಕರಣಗಳ
ಅಡುಗೆಯನ್ನು ಧೈರ್ಯದಿಂದ ಮಾಡಿ,
ಉಣಬಡಿಸಿದ ಅವ ಗೆಲುವಿನ ಪಯಣ.
ಒಂದಾಗಿಸಿ ಹಳ್ಳಕೊಳ್ಳ ದಾಟಿ ಬಂದೆವು
ಫಲಿತಾಂಶ ಜಗತ್ತೇ ನೋಡಿತು,
ನಾವು ಖಾಸಾ ಗೆಳೆಯರು.
*****


















