ಭೂಕಂಪ


ಪೃಥ್ವಿಯ ಒಡಲೊಳಗಿರುತಿಹುದೇನು ?
ತಳಮಳ ಕಾಯ್ದಿಹ ಲಾವಾರಸವು !

ಭೂಮಿಯು ಗದಗದ ನಡುಗುತಿದೆ !
ಸಾಗರ ಕೊನೆ ಮೊದಲಾಗುತಿದೆ !
ಗಿಡವದು ಬುಡಮೇಲಾಗುತಿದೆ !
ಪಶುಗಳ ಪ್ರಾಣವು ಪೋಗುತಿದೆ !
ಮಾನವಕೋಟಿಯು ಮುಳುಗುತಿದೆ !
ಕಟ್ಟಡ ಕಟ್ಟಡ ಉರುಳುತಿದೆ !
ಪಟ್ಟಣ ಪಟ್ಟಣ ಪೋಗುತಿದೆ !
ಅಂಬರ ನೋಟವ ನೋಡುತಿದೆ !

ಏನಿದು ಭೀಕರ !
ದೃಶ್ಯ ಭಯಂಕರ !!

ಉಳಿಸುವರಾರು? ಬೆಳಿಸುವರಾರು?
ದೇವನ ಮನವನು ಗೆಲ್ಲುವರಾರು ?


ಹಿಂದೂದೇಶದೊಳಡಗಿಹುದೇನು ?
ತಾಪದ ಪಾಪದ ಪರಮನ್ಯಾಯ !
ನಾಡಿಗೆ ನಾಡಿದು ನಡುಗುತಿದೆ !
ರಾಜ್ಯದ ಬಿಗಿತನ ಬಿಚ್ಚುತಿದೆ !
ಸ್ವಾತಂತ್ರವು ಸಲೆ ಸಾಗುತಿದೆ !
ರಾಟಿಯ ಕೋಟಿಯು ಮುಳುಗುತಿದೆ !
ಬಡವರ ಒಡಲುರಿ ಹೆಚ್ಚುತಿದೆ !
ವಿಧವೆಯ ಶಾಪವು ತಟ್ಟುತಿದೆ !
ಜೀವನ ಕಟ್ಟಡವುರುಳುತಿದೆ !
ಭಾರತ ಕಣ್ಣಿಲಿ ಕಾಣುತಿದೆ !

ಎಲ್ಲಿಯನ್ಯಾಯ !
ಪರಮನ್ಯಾಯ !!

ಹೇಳುವರಾರು ? ಕೇಳುವರಾರು ?
ಸಮಾಜಗೋರಿಯ ಕಟ್ಟುವರಾರು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾಸಾ ಗೆಳೆಯರು
Next post ವಚನ ವಿಚಾರ – ಹೀಗೆ ಸಂತೋಷ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…