ನೀನೆ ಕವಿತೆಯ ಉಸಿರಾಗು

ನನ್ನ ಕವಿತೆಗಳ ಕದ್ದು ಓದುವುದು ಅದರ ವಿಷಯವನೆತ್ತಿ ತೂಗುವುದು ನನ್ನವಳ ಚಟ... ‘ಓದಿದೆನು ನಿನ್ನ ಗೀತೆಗಳ ನಲ್ಲ’ ಎಂದು ಮೋಹಕವಾಗಿ ಹಿಂಡುವಳು ನನ್ನ ಗಲ್ಲ ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ ಭಾವರಸದೊಳಗೆ ಮಿಂದು...

ಗೀತಾ ರಹಸ್ಯ

ಶ್ರೀ ಕೃಷ್ಣೌವಾಚಃ ಲೊಚ ಲೊಚ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನೆಂದರೆ: ಕೇಳಯ್ಯ ಇಲ್ಲಿ ಭಾವಯ್ಯ ಯದಾ ಯದಾಹಿ ಧರ್ಮಸ್ಯ ಧರ್ಮಗ್ಲಾನಿ ಕೆಂಪು ನಿಶಾನಿ ಶನಿ ಶನೀ ಹುಟ್ಟಿ ಬಂದೇನಯ್ಯ ಕುಟುಂಬದ ಎಂಟನೇಯವ ಕೂರ್ಮಾವತಾರಿ ಚಪಾತಿ...

ಬಿಡು

ಹರಿಯುತಿರುವ ನದಿ ಹರಿಯುತಿರಲಿ ಬಿಡು ತಡೆಯನೆಂದೂ ಒಡ್ಡದಿರು ಬದುಕನೆಂದೂ ಕದಡದಿರು ಗಡಿಯನೆಂದೂ ನೀಡದಿರು ಆಶಯವನು ಬಿಡದಿರು ನಿರೀಕ್ಷೆಯನು ಸುಡದಿರು ಮೋಡ ಚಲಿಸುತ್ತದೆ ಬಿಸಿಲು ಬಾಡುತ್ತದೆ. ವರ್ಷಗಳು ಉರುಳುತ್ತವೆ ಅಂಗಾಂಗಗಳು ಕುಸಿಯುತ್ತವೆ. ಉಸಿರು ನಿಲ್ಲುತ್ತದೆ. ನಿಲ್ಲಲಿ...

ಕನಕ-ಕೃಷ್ಣ

ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ... ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ... ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು ಗೆಳೆತನ...

ಗಾಜಿನ ಮನೆಯವರು

ಮತ್ತೇರಿಸುವ ಗಾನದ ನಶೆ ಏರಿಸುವ ಪಾನದ ಕನಸಿನ ಲೋಕದಲ್ಲಿ ಉನ್ಮತ್ತರಾಗಿ ನರ್ತಿಸುತ್ತಿದ್ದಾರೆ ಗಾಜಿನ ಮನೆಯವರು. ನರ್ತಿಸದೆ ಇನ್ನೇನು ಮಾಡಿಯಾರು ? ಕಪ್ಪ ಕೊಡದೆ ಬಾಚಿ ಗಳಿಸಿದ್ದಾರೆ ಕಪ್ಪು ಹಣದ ಒಡೆಯರು. ತಿಂದು ಕುಡಿದು ಚೆಲ್ಲುತ್ತಿದ್ದಾರೆ...

ನಿನ್ನ ಧಿಕ್ಕರಿಸಿದ ತರ್ಕ

ನಿನ್ನ ಧಿಕ್ಕರಿಸಿದ ತರ್ಕಕ್ಕೆ ಮೊನ್ನೆ ಕಾಲು ಮುರಿಯಿತು ಬಗ್ಗಿ ಕೈ ಮುಗಿದು ಹೇಳಿತು "ನಾ ತುಳಿಯದ ನೆಲವಿದೆ, ಕುಡಿಯದ ಗಾಳಿ ನೀರು, ಅರಿಯದ ನೆಲೆ ಇವೆ. ಅವಕ್ಕೆ ಬಗೆ ಬಗೆ ಬೆಲೆ, ಬೇರು. ಅಲ್ಲೆಲ್ಲ...

ಶಂತನು ಮರಳಿ ಬಂದಾಗ

ನಾನು ಇನ್ನೊಮ್ಮೆ ಮರಳಿ ಬರುವಾಗ ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ ಸತ್ಯವತಿಯಾಗಿ ಸತಿಯಾಗಿ ನೀನು ಖಂಡಿತ ನನಗೆ ಸಿಕ್ಕುತ್ತಿ ಹಳೆ ಪರಿಚಯ ಉಕ್ಕಿ ಬಂದು ಮನದಲ್ಲಿ ಬಿಕ್ಕುತ್ತಿ ಆಗ ನಿನ್ನ ವದನತುಂಬ ವಿರಹದ ನೋವಿನ...

ಹೆಣ್ಣು ಜೀವ

ಸೋನೆ ಮಳೆಯ ಸಂಜೆ... ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ ಸ್ವೆಟರ್ ಏರಿಸಿ ಹಾಳೂರು.. ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು ದೀಪ ಧಾರಿಣಿಯಾದೆ, ಗಾಳಿ...

ಕಾದಿಹೆನು ನಿನಗಾಗಿ…..

ನನ್ನೊಳಗಿದ್ದು ಹೋದೆಯೆಲ್ಲಿಗೆ ಹೊಳೆಯಲೇ ಇಲ್ಲ ತಿಳಿಯಲೇ ಇಲ್ಲ. ಒಂದಿನಿತು ಸೂಚನೆ ಕೊಡದೆಯೆ ಹೋದುದರ ಮರ್ಮವೇನು. ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ ದಿಟ್ಟಿ ಮಿಟುಕದೆ, ಮೋಡಗಳಾಚೆಗೊಮ್ಮೆ ನೋಡಿದ್ದೆ ಬಂತು ನಿನ್ನ ಸುಳಿವು ಸಿಗಲಿಲ್ಲ ಮಳೆ ಹನಿಗಳನ್ನು ನಿಲ್ಲಿಸಿ ‘ನೀವು...