ಶುಷ್ಕವಾದ ಭೂಮಿ ಚಿಗುರುವ ಗಿಡ
ಮಳೆಗಾಗಿ ಕಾಯುತಿವೆ
ಮುಂದಿನ ದಿನಗಳು ಹೀಗೆ ಇವೆಯೆಂದು
ಮನದ ದುಗುಡ ನಿರೀಕ್ಷೆಯಲ್ಲಿದೆ
ಚುಕ್ಕಿಗಳಿಗೆ ಹೊರ ಕಾಣುವ ಹಂಬಲ
ಬಳ್ಳಿಗೆ ಮರವೇರುವ ಬಯಕೆ
ಸಕಲ ಜೀವಿಗಳಾಶ್ರಯ ಈ ಧರೆ
ಈಗಲೇ ಎಳೇ ಜೀವಕೆ ಭಾರ
ನೂರಾರು ಆಸೆಗಳ ಮನದ ಈ ಮುಗ್ಧ ಬಾಲೆ
ಹೊತ್ತಿದ್ದ ಪುಟ್ಟ ಹಸುಳೆ
ನಿರ್‍ವಿಕಾರ ಮನದಿ ಈ ಜಗವ ಕಾಣುತಲಿತ್ತು
ಮುಂದಿನ ಭ್ರಮಾ ಜೀವನದ
ನೂರಾರು ಕನಸುಗಳ ಹೊತ್ತ ಈ ಹಸುಳೆ
ಬೇರಾರು ಆಗಿರದೆ ಆಕೆಯನುಜನಾಗಿದ್ದ
*****