
ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ ಹೀಗೇ ಉಳಿವೆ ನಾನು, ನೀನು ಬದಲಾದರೂ; ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ – ಮುಖ ನನಗೆ, ಹೃದಯ ಅನ್ಯರಿಗಾಗಿ ಇದ್ದರೂ. ದ್ವೇಷ ನಿನ್ನೀ ಕಣ್ಣಿನಲಿ ಎಂದೂ ಬಾಳದಿದೆ, ಒಳಗೆ ಬದಲಾದರೂ ತಿಳಿಯದದು ಕ...
ಬಂದೆಯಾ, ಮೋಹವೆಲ್ಲವನುಳಿದು? ಇಲ್ಲದಿರೆ ನಿಲ್ಲು ಈ ಗೆರೆದಾಂಟಿ, ಬಾರದಿರು ಬಾರದಿರು! ಉತ್ತುಂಗ ಶಿಖರಕ್ಕೆ ಹುಲುಬಿಂಬಿ ನೆಗೆದಂತೆ ನಿನ್ನ ಗತಿಯಾದೀತು ಎಚ್ಚರಿಕೆ ಎಚ್ಚರಿಕೆ ಮದಮೋಹಗಳನೆಲ್ಲ ಹೆಣಮಾಡಿ ಸುಟ್ಟೊಗೆದು ರಸವರ್ಜ್ಯ ನೀನಾಗಿ, ಎದೆಯತಾಣವನೊ...
ಇದ್ದದ್ದನ್ನಿದ್ಹಾಂಗ ಬಾಯಿಬಿಟ್ಟು ಹೇಳಿದರ | ಎದ್ದು ಬಂದು ಎದಿಗೀ ಒದೀತಾರಂತ || ಪ || ಛಲೋತ್ನಾಂಗ ಓದ್ರೀ ಅಂದ್ರ ಕಾಪಿ ಮಾಡೋದು ತಪ್ಪೂ ಅಂದ್ರ | ಹೊರಗ ಬಾ ನೋಡ್ಕೊತೀನಿ ಅಂತಾರಂತ ಎದ್ದು ಬಂದು ಎದಿಗೀ ಒದೀತಾರಂತ || ೧ || ತೂಕಡಿಸ ಬಾಡ್ರೀ ಅಂದ್ರ...
ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ ಹಸಿ ಜೋಳದ ತೆನೆಯಲಿ ಹಾಲು ಚಿಮ್ಮುತ್ತಿದೆ. ಮ...
ದುಡಿಯೋಣ ನಾವು ಒಂದಾಗಿ ದುಡಿಯೋಣ ಬೆವರ ಸುರಿಸಿ ದುಡಿಯೋಣ ಮನಕೆ ಸಂತಸ ತುಂಬೋಣ ||ದು|| ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಗೆಜ್ಜೆ ನಾದ ಉಣ್ಣ ಬಡಿಸಿ || ಸದ್ದು ಗದ್ದಲ ಇಲ್ಲದಂತೆ | ಹೊನ್ನ ಮಳೆಯ ಸುರಿಸೋಣ ||ದು|| ಒಂದೇ ಜಾತಿ ಒಂದೇ ಮತವೆಂಬ | ಪಚ್ಚೆ ...
ಯಾರಣ್ಣ ನೀ ಬಿಡುಗಣ್ಣನೇ | ಎದೆಗೆಳೆಯ ! ಕುಳಿತಿಹ ತಣ್ಣನೇ ಮಾನವನ ಕರ್ಮವ ಬಿಮ್ಮನೇ | ಸುಖದುಃಖ ನೋಡುವೆ ಸುಮ್ಮನೇ ಸಂತಾಪ ಜಾಲಕೆ ಅದರದೇ | ಮರಣಕ್ಕೂ ವಿಧಿಗೂ ಬೆದರದೇ ಕುರುಡು ಜಗ ಉರುಳುವುದ ಕಾಯುವೆ | ಸಾಕ್ಷಿ ಕಣ್ಣೂ ನೋಯವೇ ? ಈ ವಕ್ರಚಕ್ರದ ಜೊತ...
ಅಮ್ಮ ನಿನ್ನ ಮಗನಮ್ಮಾ ಏನು ತುಂಟನಿವನಮ್ಮ| ನೀನೇ ಬುದ್ಧಿ ಕಲಿಸಮ್ಮ ಯಾರ ಮಾತ ಕೇಳನಮ್ಮ ನಿನ್ನ ಹೊರತು ಇನ್ನಾರಿಗೂ ಸ್ವಲ್ಪವೂ ಹೆದರನಮ್ಮ|| ಆಟದಲ್ಲಿ ಅವನೇ ಎಂದೂ ಗೆಲ್ಲಲೇಬೇಕಂತಲ್ಲಮ್ಮ! ಸೋತವರು ಅವನೇಳಿದಂತೆಯೇ ಕೇಳಬೇಕಂತಮ್ಮಮ್ಮ| ಮಾತಿನಲ್ಲೇ ಮನ...
ಮರವೊಂದು ಬಿದ್ದಿದೆ ಬಿರುಗಾಳಿಗೆ ಅದು ದೊಪ್ಪೆಂದು ಬಿದ್ದಿತೊ ಸದ್ದಿಲ್ಲದೆ ಬಿದ್ದಿತೊ ಕೇಳಿದವರು ಇಲ್ಲ ಮುಂಜಾನೆಯೆದ್ದರೆ ಮರ ಬಿದ್ದಿದೆ ಉದ್ದಕೆ ಬುಡ ಮಗುಚಿ ಬಿದ್ದಿದೆ ಇನ್ನೆಂದು ಏಳದಂತೆ ಬಿದ್ದಿದೆ ಎಷ್ಟು ವರ್ಷದ ಮರ ಎಷ್ಟು ಯುಗ ಕಂಡ ಮರ ಮರವೆ ...
ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ ವಿಷಕೆ ವಶವಾಗಿ ರೋಷಕ್ಕೆ ಈಡಾಗಿ ಎ...
‘ಈ ಕಾರು ಯಾರದ್ದು?’ ಕೇಳಿದ ತಿಮ್ಮ ಯಜಮಾನ್ರನ್ನ ಮಗ ಒಯ್ದಾಗ ಅದು ಮಗಂದು ಮಗಳು ಒಯ್ದಾಗ ಅದು ಮಗಳದ್ದು ಅರ್ಧಾಂಗಿ ಕ್ಲಬ್ಬಿಗೆ ಒಯ್ದಾಗ ಅದು ಅರ್ಧಾಂಗೀದು ಎಂದ ಯಾವಾಗ ನಿಮ್ದಾಗುತ್ತೆ ಯಜಮಾನ್ರೇ? ಪುನಃ ಕೇಳಿದ ತಿಮ್ಮ ಅದನ್ನು ಗ್ಯಾರೇಜಿಗೆ ಒಯ್ದಾಗ...













