ಹೊತ್ತಿಳಿವು, ಸಂಜೆಬೆಳ್ಳಿ ನನ್ನ ಕರೆದೊಂದು ಕೂಗು! ಇಲ್ಲದಿರಲೇನೇನು ಬಂದರಿನ ನರಳಾಟ, ನಾ ಕಡಲ ಸೇರುವಾಗ; ಹೊರಳಿ ನಿದ್ದೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ ತುಂಬುದೆರೆಯುಬ್ಬು ಹೊನಲು, ಕರೆಯಿಲ್ಲದಾಳದಿಂದೆದ್ದು ಹೊರಬಿದ್ದುದದು ಮರಳಿ ಮನೆಗೆಯ್ದುವಾಗ! ಕಣ್ಣುಬ್ಬು , ಸಂಜೆಗಂಟೆ, ಆ ಬಳಿಕ ಕಗ್ಗತ್ತಲೆ! ಇಲ್ಲದ...

ಸಾಗರ ಹುದುಗಿದೆ ಹನಿಹನಿಯಲ್ಲೂ ಸೂರ್ಯನಿರುವ ಪ್ರತಿ ಕಿರಣದಲೂ, ಒಂದೇ ಸಮ ಇದೆ ಮಾಧುರ್ಯದ ಹದ ಮರವೊಂದರ ಪ್ರತಿ ಹಣ್ಣಿನಲೂ. ಸಾವಿರ ಸಿಪ್ಪೆ, ಸಾವಿರ ಚಿಪ್ಪು ಸಾವಿರ ಬಗೆ ನಡೆನುಡಿ ಅನ್ನ, ಕಾಯದ ಕರಣದ ಸಾವಿರ ಚೇಷ್ಟೆ ಹೊರಗಿನ ತೋರಿಕೆ ಬಹು ಭಿನ್ನ. ಜ...

ಓದುತ್ತಿದ್ದಂತೆ ಮನೋಹರನ ಉಸಿರು ಬಿಗಿಯಾಯಿತು. ನಾಡಿಯಲ್ಲೆಲ್ಲ ನೆತ್ತರು ಧುಮ್ಮಿಕ್ಕೆ ಹರಿಯುತ್ತಿರುವ ಅನುಭವ. ಎಲ್ಲವನ್ನೂ ಮತ್ತೊಮ್ಮೆ ಜೀವಿಸಿದಷ್ಟು ಆಯಾಸ. ಡೆಸ್ಕಿ ನಿಂದ ಸಿಗರೇಟು ಎತ್ತಿಕೊಂಡ. ಸೇದಬಾರದು ಎಂದಿದ್ದರು ಡಾಕ್ಟರರು. ಉದ್ವೇಗಗೊಳ್ಳ...

ಹಬ್ಬ ಬಂತು, ಓ ಹಬ್ಬ! ಕೆಳೆಯರೇ, ತೋರಣ ಕಟ್ಟೋಣ! ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ ತೋರಣ ಕಟ್ಟೋಣ! ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ, ತೋರಣ ಕಟ್ಟೋಣ; ಬೆಳಗಿನ ಜಾವ ಮುಗಿಯುವ ಮುನ್ನ ತೋರಣ ಕಟ್ಟೋಣ! ಚುಕ್ಕಿಯಾಗಸದೆ ಮಾಸುವ ಮುನ್ನ ತೋರಣ ಕಟ್ಟೋಣ; ...

ಕಿಟಿಕಿಯ ಬಳಿ ನಾವು ಬಂದಿವಿ ಚಂದಮಾಮ ಕಿಟಕಿಯ ಬಳಿ ನೀನು ಬಾರೋ ಚಂದಮಾಮ ಸರಳಿಗೆ ಮುಖವಿಟ್ಬು ಮಾತಾಡೋಣ ಚಂದಮಾಮ ನಮ್ ನಮ್ ಸುದ್ದಿಗಳ ಹೇಳ್ಕೊಳ್ಳೋಣ ಚಂದಮಾಮ ಹೊಟ್ಟೆ ತುಂಬ ನಗೋಣ ತಟ್ಟೆ ತುಂಬ ತಿನೋಣ ಇರುಳ ಮಲ್ಲಿಗೆ ಅರಳಿದೆ ನೋಡು ನಿನಗಿಷ್ಟವಾದ ಹಾ...

ಗುಬ್ಬೀ ಗುಬ್ಬೀ ತರವಲ್ಲ ಮನೆ ಇದು ನನ್ನದು ನಿನದಲ್ಲ ಕಿಚಿಕಿಚಿ ಎಂಬೆಯ ಬಂದಿಲ್ಲಿ ಬಯಲಿದೆ ಹೊರಗಡೆ ಸಾಯಲ್ಲಿ ಜಂತೆಯ ಸಂದೇ ಮನೆಯಾಯ್ತು ಕಾಪುರವೇನೊ ಘನವಾಯ್ತು ನಿನ್ನೀ ವಲ್ಲಡಿ ಜೋರಾಯ್ತು ಮೂಡಿದ ಭಾವವು ಹಾಳಾಯ್ತು ಹುಶ್, ಎಲೆ ಗುಬ್ಬೀ! ಎಚ್ಚರಿಕೆ...

ಅದೆಶ್ಟು ಬಿರುಸು ಅಶ್ಟೆ ಹುಲುಸು ಘಮ ಘಮ ಹಲಸಿನಂತೆ! ಪುಟ್ಟ ಚಂದ್ರ ಚಕೋರ, ಧರೆಗಿಳಿದು ಬೆರಗು ಮೂಡಿಸಿದನಲ್ಲ? ನವ ಮಾಸ ಕಳೆದ, ನವ ನೀತ ಚೋರ! ಪುಟ್ಟ ಪೋರಾ! ತಂದೆಯ ರೂಪ, ತಾಯಿಯ ಕೋಪ, ಜಗದಾ ಪರಿತಾಪ ಎಲ್ಲವೂ… * ಹಾಲುಗೆನ್ನೆಯ ಹಸುಗೂಸು ಮು...

ಮನೆ ಇಲ್ಲ ಮಠ ಇಲ್ಲ ಮಕ್ಕಳಿಲ್ಲ ಮರಿ ಇಲ್ಲ ನೀನು ಶೋಕಿಯಾಗಿ ಆಕಾಶದಲ್ಲೆಲ್ಲ ಅಲೆದಾಡಿಕೊಂಡು ಇರಬಹುದು ಕೇಳಪ್ಪ ಶಶಿ, ಆದರೆ ಅವಳಿಗೆ ಮಕ್ಕಳು ಮರಿ ಸಂಸಾರದ ಭಾರ ಅದನ್ನು ಸಾಕಿ ಸಲಹೋಕೆ ದುಡಿತಲೇ ಇರ್‍ತಾಳೆ ಪಾಪ ಅಹರ್ನಿಶಿ. *****...

ಈ ಹಾಡಾಹಗಲೇ ದೇಶರಂಗಮಂಚದಲ್ಲಿ ಬಟಾಬಯಲಾಟ ನೋಡಿರಣ್ಣಾ ಬರೀ ರಕ್ಕಸ ಪಾತ್ರಗಳಣ್ಣಾ ತಿರುಗಾ ಮುರುಗಾ ಅಡ್ಡಾತಿಡ್ಡೀ ಕುಣಿತವಣ್ಣಾ ಹಾಡಿಗೂ ಕುಣಿತಕ್ಕೂ ತಾಳಕ್ಕೂ ಸಂಗೀತಕ್ಕೂ ಮುಮ್ಮೇಳ ಹಿಮ್ಮೇಳಕ್ಕೂ ತಾಳಮೇಳವಿಲ್ಲ ಒಂದಾಟವಾಡಲು, ಅನೇಕ ರಸಪ್ರಸಂಗಗಳ ತ...

‘ಕನ್ನಡದಲ್ಲೇ ಮಾತಾಡು’ ಎಂದೆ; ಅವ ಸಿಟ್ಟಿಗೆದ್ದು ‘ಕನ್ನಡಕ್ಕೆ ಕೊಂಬುಂಟೋ?’ ಅಂದ; ಕೊಂಬಿಲ್ಲದಿದ್ದರೇನಂತೆ? ಕಹಳೆ ಉಂಟಲ್ಲ ಅಂದೆ ಅವ ಸುಸ್ತಾದ! *****...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...