ಎಲ್ಲಿ ನೋಡಿದರು ಬಾಂಬು ಸ್ಫೋಟಗಳು ರಕ್ತ ಮಾಂಸ ನೆಣವು ಮುರಿದು ಬಿದ್ದ ಮನೆ ಮುರಿದ ಕಾಲು ಕೈ ಬಣವೆಗಳಲಿ ಹೆಣವು ಹೂವು ಹಿಡಿದ ಕೈ ಬೆಣ್ಣೆ ಬಾಯಿಯಲಿ ಒಳಗೆ ಎಂಥ ಕ್ರೂರ ನಾಗರಿಕತೆ ಹುಸಿ ವೇಷದೊಳಗೆ ರಕ್ಕಸರ ರಾಜ್ಯಭಾರ ಯಾವೊ ತೆವಲುಗಳು ಯಾವೊ ತೀಟೆಗಳು...
ವಿಧಾನ ಸೌಧದ ಮೊದಲಂತಸ್ತಿನ ಮೊದಲ ದರ್ಜೆ ಗುಮಾಸ್ತನನ್ನು ವಿಚಾರಿಸಿದೆ ನನ್ನ ಅರ್ಜಿಯ ಬಗ್ಗೆ; ತಣ್ಣಗೆ ಅವ ಅಂದ- ನೀವು ಸರ್ಕಾರಕ್ಕೆ ಕೊಟ್ಟಿರಿ ಅದು ಸರ್ಕಾರದ ಕೆಲಸ ಅರ್ಥಾತ್ ದೇವರ ಕೆಲಸ; ಅಂದ ಮೇಲೆ ನನ್ನಲ್ಲೇನು ನಿಮಗೆ ಕೆಲಸ? *****...
`ನಿಮ್ಮ ಮುಖ ವಕ್ರವಾಗಿದ್ದರೆ ಕನ್ನಡಿಯನ್ನು ದೂಷಿಸಬೇಡಿ’- ಇದು ರಷ್ಯಾದ ನಾಣ್ಣುಡಿ. ಸಂವಿಧಾನ ಪರಾಮರ್ಶೆ ಕುರಿತ ಪರ ವಿರೋಧಗಳ ವ್ಯಾಪಕ ಚರ್ಚೆಯಾಗುತ್ತಿದೆ. ಚರ್ಚೆಗೆ ಅನೇಕ ಮುಖಗಳಿರುತ್ತವೆ. ಪರಾಮರ್ಶೆ, ಆತ್ಮಾವಲೋಕನ ಎನ್ನುವುದು ಪ್ರಾಮಾಣಿಕತೆಯ ...
ನನ್ನವರಿಗೆ ದಿನವಿಡೀ ಬೇಕು ‘ಕನ್ನಡ’ಕ ನನಗೆ ಬೇಡ ‘ಕ’ ಬೇಕು ಬರಿ ‘ಕನ್ನಡ’! *****...
ನಮಿಸುವೆನು ನಮಿಸುವೆನು ನಮಿಸುವೆನು ತಾಯೆ ನಿನ್ನ ಪ್ರೀತಿಗೆ ಬಾಗಿ ಕೈಮುಗಿದೆ ಕಾಯೆ ಜನಮನದಲಿ ಗಿರಿವನದಲಿ ಉಸಿರಾಗಿ ಹಸಿರಾಗಿ ಹರಿಯುತಿಹ ಮಾಯೆ ಬಲ್ಲೆ ನಾ ನಿನ್ನ ದನಿ ಕಲರವದಲಿ ಮೈಬಣ್ಣ ಉದಯಾಸ್ತ ಮುಗಿಲುಗಳಲಿ ನಡಿಗೆಯಿದೆ ಹರಿಯುತಿಹ ತೊರೆಗಳಲ್ಲಿ ...
ಒಂದು ಸುಡುಬಿಸಿಲು ಮಧ್ಯಾಹ್ನ ನನ್ನ ನೆರಳು ನಾನೇ ನೋಡುತ್ತ ನಿಂತಿದ್ದೆ ಅಂದು ಸಂತೆಯ ದಿನ ಒಬ್ಬರ ಸುಳಿವಿಲ್ಲ ನಿದ್ದೆ ಬಂದಂತಾಗಿ ಆಕಳಿಸಿದೆ ನಾಯಿಯೊಂದು ಬಂದು ಕಾಲೆತ್ತಿ ಉಚ್ಚೆ ಒಯ್ದು ಹೋಯಿತು ನನ್ನ ನೆರಳು ಸ್ವಲ್ಫ09 ಸರಿದಂತೆನಿಸಿತು ನಿರ್ದಯಿ ...
ಮುಗಿಲು ಸುರಿಸುವುದು ನೀರು – ಅದ ಮೇಲೆ ಸಲಿಸುವದು ಬೇರು ಮುಗಿಲಿಗು ಬೇರಿಗು ಕೆಲಸವ ಹಚ್ಚಿ ಮರವ ಬೆಳೆಸುವುದು ಯಾರು? ಅರಳಿ ಬೀಗುವುದು ಹೂವು ದುಂಬಿಗೆ ಕೆರಳಿಸಿ ಕಾವು, ಹೂವಿನ ಹೊಕ್ಕಳ ದುಂಬಿಯು ಕಚ್ಚಿ ಹಣ್ಣು ತರಿಸುವುದು ಯಾರು? ಕವಿಯು ಹೊ...
ಕತ್ತಲಲಿ ಕಳೆದು ಹೋಗಿರುವೆಯಾ? ಬೆಳಕಿಗಾಗಿ ಕಾಯಬೇಡ ಬೆಳಕಾಗಿ ಬಾ ನೋಡ! *****...
ಹೊದ್ದುಕೊಂಡ ಹರಿದ ಕಂಬಳಿಯನ್ನೇ ಮೈಗೆ ಸುತ್ತಿ ಕೊಂಡು ವಾಚರ್ ಮಾದ ಎದ್ದು ಬಾಗಿಲು ತೆರೆದು ಹೊರಗೆ ಬಂದ. ಏನೋ ನೆನಪಾಗಿ ಪಕ್ಕದ ಕೋಣೆಯ ಕಡೆ ಇಣುಕಿ ನೋಡಿದ. ಪಾರೆಸ್ಟರ್ ಕಂಬಳಿ ಹೊದ್ದುಕೊಂಡು ಗೊರಕೆ ಹೊಡೆಯುತ್ತಿದ್ದುದನ್ನು ನೋಡಿ ಸಮಾಧಾನ ಪಟ್ಟುಕೊ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







