
ಆ ಮನೆ ಬೇಕೊ ಈ ಮನೆ ಸಾಕೊ ಎರಡೂ ಮನೆಗಳು ಮನುಷ್ಯನಿಗೆ ಬೇಕೊ ಭೂತ ಬೇಕೊ ಭವಿಷ್ಯ ಸಾಕೊ ವರ್‍ತಮಾನಕ್ಕೆ ಎರಡೂ ಬೇಕೊ ಹಳೆಯಲೆ ಬೇಕೊ ಹೊಸ ಎಲೆ ಸಾಕೊ ಮರವೊಂದಕ್ಕೆ ಎರಡೂ ಬೇಕೊ ಮಳೆಯು ಬೇಕೊ ಬಿಸಿಲು ಸಾಕೊ ಧರೆಗಿವೆರಡೂ ಬೇಕೊ ಹಳೆ ಹಾಡು ಬೇಕೊ ಹೊಸ ಹಾಡ...
ಕತ್ತಲದು ಕಗ್ಗತ್ತಲರಿವಾಳನರಿಯದೆಯೆ ಮತಮತಗಳಟ್ಟಣೆಯ ಕಟ್ಟಿ ನಿಲುವಿರುಳು ಸನಿಯನಷ್ಟನೆ ಬೆಳಗಿ ಕೊನೆಗೆ ಶರಣೆಂದೆಯೇ ಎಲ್ಲ ಮತಿ ಮೈಗರೆವ ನಿಲುಗಡೆಯ ಹುರುಳು ಉಳಿವುದೆಣಿಸುತ ಚಿತ್ತ ವಿಜ್ಞಾನದೊಳು ತೊಳಲಿ ಅಳಿವುದೆಣಿಸುತ ಪರದ ಚಿಂತೆಯೊಳು ಬಳಲಿ ವಿರಮಿ...
೧೯೮೯ ರಿಂದಲೂ ನಾನು ಅಲೆಮಾರಿ, ಅರೆ ಅಲೆಮಾರಿ, ಜನಾಂಗವಾದ ದೊಕ್ಕಲು ಮಕ್ಕಳ ಕುರಿತು ಅಧ್ಯಯನ ಮಾಡುತ್ತಲೇ ಇದ್ದೇನೆ. ಅವರ ಹಚ್ಚೆ ಕಲೆಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕ್ಷೇತ್ರ ಕಾರ್ಯದಲ್ಲಿದ್ದೇನೆ… “ಹಚ್ಚೆ ಮೊದಲೋ ಜನ ಮೊದಲೋ..?...
ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ || ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ ಮಸೀದಿಯಲ್ಲಿ ಕ್ರಿಸ್ತನಾ ಕೋಣೆಯ...
ಈಶ್ವರ ಭಟ್ಟರ ಮಗ ಕೇಶವ ಮಾಣಿಯು ತನ್ನ ಕೊಳಕೆ ಗದ್ದೆಯ ಕಟ್ಟಪುಣಿಯಲ್ಲಿ ಕೂತು ಕೊನೆಯ ದಮ್ಮನ್ನು ಬಲವಾಗಿ ಎಳೆದು ಹೊಗೆಯನ್ನು ಚಕ್ರಾಕಾರವಾಗಿ ಬಿಡುತ್ತಾ ತುಂಡನ್ನು ಕೆಸರಿಗೆ ಎಸೆದ. ಅದು ಚೊಂಯ್ ಎಂದು ಸದ್ದು ಹೊರಡಿಸುತ್ತಾ ಕೊನೆಯುಸಿರನ್ನೆಳೆಯುವು...
ಮೂಲ: ಟಿ ಎಸ್ ಎಲಿಯಟ್ ಕರುಳು ಕೊರೆಯುವ ಎಂಥ ಚಳಿಗಾಲ ಆ ಮಾಘ! ಇಡಿ ವರ್ಷದಲ್ಲೇ ಅತಿ ಕೆಟ್ಟ ಕಾಲ ಆಳದಾರಿಗಳಲ್ಲಿ ಇರಿವ ಹವೆಯಲ್ಲಿ ಪ್ರಯಾಣಕ್ಕೆ, ಅದರಲ್ಲೂ ಅಷ್ಟು ದೂರದ್ದಕ್ಕೆ ಎಷ್ಟೂ ಸರಿಯಲ್ಲ ಆ ಮಾಗಿಕಾಲ. ಹೆಜ್ಜೆ ಹುಣ್ಣಾದ ಒಂಟೆ ನೋವಿಂದ ನರಳುತ...
ಹೆಸರುವಾಸಿಯಾದ ರಾಜ ಒಡೆಯರವರು ಶ್ರೀಕಂಠೇಶ್ವರ ಸ್ವಾಮಿಯ ರಥೋತ್ಸವಕ್ಕೆ ನಂಜನಗೂಡಿನಲ್ಲಿ ಬೀಡನ್ನು ಬಿಟ್ಟಿದ್ದರು. ಆ ಸಮಯದಲ್ಲಿ ಇವರ ಜ್ಞಾತಿಯೂ ಗರ್ವಿಷ್ಠನೂ ಆಗಿದ್ದ ಕಾರುಗಹಳ್ಳಿ ಪಾಳೆಯಗಾರ ವೀರಾಜಯ್ಯನೆಂಬಾತನು ರಾಜರೆದುರಿಗೆ ತನ್ನ ಅಟ್ಟಹಾಸವನ್...
















