ಬೇಸಗೆಯಲಿ ಸಂಜೆಯಾಯಿತು; ಕೆಲಸವ ಮುತ್ತಜ್ಜ ತೀರಿಸಿಕೊಂಡ. ಹಟ್ಟಿಯ ಬಾಗಿಲ ಬಳಿಯಲಿ ನೋಡುತ ಹೊಂಬಿಸಿಲಲಿ ಕುಳಿತುಕೊಂಡ. ಅಲ್ಲಿಯೆ ಹಸುರಮೇಲಾಡುತಲಿದ್ದಳು ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು. ಕಂಡಳು ಕೂಗಿಕೊಂಡಣ್ಣನು ಬರುವುದ ಆಡುತ, ಹೊಳೆಯಂಚಿನಿಂದ ...

ಪಿಳ್ಳೇಗೌಡರು ಹೆಸರುವಾಸಿಯಾದ ಕಾಫಿ ಪ್ಲಾಂಟರು. ಅವರ ತೋಟ ಬಾಬಾಬುಡನ್ ಗಿರಿಗಳಲ್ಲೆಲ್ಲಾ ಬಹಳ ದೊಡ್ಡದು. ಯೂರೋಪಿಯನ್ ಪ್ಲಾಂಟರ್‌ಗಳು ಕೂಡ ಅವರಿಗೆ ಗೌರವ ಕೊಡುವರು. ಅವರ ದೇಹ ದೊಡ್ಡದು, ಗಂಟಲು ದೊಡ್ಡದು, ಹೊಟ್ಟೆ ದೊಡ್ಡದು, ಮನಸ್ಸು ದೊಡ್ಡದು; ಎಲ...

ದಿಟ್ಟತನದಿ ನಾನು ಬೇಡುವೆ ದೇವ ಭವಿಯ ಬಾಳಿನಿಂದ ಎನ್ನ ಬೇರ್ಪಡಿಸು ನಿತ್ಯವೂ ಮನಸ್ಸು ಶುದ್ಧವಿರುವ ವೆಂದದಿ ಆಲೋಚನೆಗಳಿಗೆ ಭವ್ಯತೆ ಏರ್ಪಡಿಸು ಹೃದಯಾಂಗಣದಲಿ ಅರಳಲಿ ಸುಮ ಅದುವೆ ಪರಮಾತ್ಮನ ಶುಭ ನಾಮ ಆ ಹೂವಿಗೆ ಕಿಂಚಿತ್ತು ದಕ್ಕೆಯಾಗದಿರಲಿ ಎಲ್ಲೆಲ...

ದೀಪಾವಳಿಯ ದಿನ ಊರೆಲ್ಲಾ ಬೆಳಕಿನ ತೋರಣ ದೀಪಗಳೇ ತುಂಬಿರುವಲ್ಲಿ ಕತ್ತಲೆಗೆಲ್ಲಿಯ ಸ್ಥಾನ? ಬಾನಂಗಳಕ್ಕೆ ಹಾರಿದ ರಾಕೆಟ್ ಉರಿದ ಸುರುಸುರುಬತ್ತಿ ನೆಲದಲ್ಲಿ ತಿರುಗಿದ ಚಕ್ರ ನಡುವೆ ಮಕ್ಕಳ ಕಿಲಕಿಲ ನಗು ಪಟಾಕಿ ಸಿಡಿಸಿದ್ದಾಯಿತು ಬೆಳಕು ಬೆಳಗಿದ್ದಾಯಿ...

ನಿಯಂತ್ರಿಸು ಮನಸ್ಸನ್ನು ನಿಯಂತ್ರಿಸಿದಷ್ಟೂ ಅದರ ಶಕ್ತಿ ವರ್ಧಿಸೋದು ಇದೊಂದು ತತ್ವ ಜಗ್ಗಿದ ಕುದುರೆ ಜಿಗಿಯುವ ಹಾಗೆ ಮುಂದು ಮುಂದಕ್ಕೆ ಆದರೂ ಓಡುವುದು ಕುದುರೆ ನೀನು ಓಡುವುದಿಲ್ಲ ಓಡುವ ಅನುಭವ ಮಾತ್ರ ನಿನಗೆ ಬಯಲು ಬೆಟ್ಟ ಇಳಿಜಾರು ಕಣಿವೆ ಎಲ್ಲ ...

ಹಸಿರಿನೇರುವೆ ಹಗಲ ಬೆಳಕಿನೊಳು ಬೆರೆದಂತೆ ಸಂಜೆಮುಗಿಲಿನ ಮಳಲೊಳೋಲಗಿಸುವಂತೆ ಭೀಷ್ಮ ಜಲಪಾತದೊಳು ಸ್ಥಿರಚಂಚಲೇಂದ್ರಧನು ಎಸೆವ ಪರಿ ಭವದ ಮೇಲಾಡುತಿರುವಂತೆ ಬಣ್ಣ ಬಣ್ಣದಿ ಬೆಳಕ ತಡೆದಿಡುವ ಹೂ ಮರಗ- ಳಲುಗಿನೊಳು ಬಂದು ಸಾರಿದನೆನ್ನುವಂತೆ ಮಲೆಯ ಘನಮೌನ...

ಹೆದರದಿರು ಗೆಳತಿ ಕೂಡದೇ ಮೂಲೆಯಲಿ ನಡೆದಾಡು ಬಾ ಗೆಳತಿ ಲೋಕದ ದುಃಖಗಳು ನಿನ್ನ ಬಾಗಿಲನೇ ತಟ್ಟಲಿಲ್ಲ ಹಲವು ಬಾಗಿಲುಗಳ ತಟ್ಟಿವೆ. ಎದ್ದು ಸುಧಾರಿಸಿಕೋ ಕೆಲ ಸಮಯ ಭರವಸೆ ನಿಭಾಯಿಸಬೇಕಿದೆ ನನ್ನ ಜೊತೆಗೂಡಿ ನಡೆದಾಡು ಬಾ ಗೆಳತಿ ಹೆಜ್ಜೆ ಹಾಕು ಬಾ. ಗು...

ಚೀನಾ ದೇಶ ನಮ್ಮ ಭವ್ಯ ಭಾರತದ ಮೇಲೆ ಮೇಲಿಂದಮೇಲೆ ಕಾಲು ಕೆದರಿ ಜಗಳ ತೆಗೆಯುತ್ತಿದೆ. “ಮಾರಿ ಕಣ್ಣು ಹೋರಿ ಮೇಲೆ” – ಎನ್ನುವಂತೆ ಚೀನಾದ ಕಣ್ಣು ನಮ್ಮ ಭವ್ಯ ಭಾರತದ ಮೇಲೆ. ಚೀನಾ ದೇಶ ತನ್ನ ಮನೆಯನ್ನು ತಾನು ಸರಿಮಾಡಿಕೊಂಡು ಉನ...

ಮೇರಾ ಭಾರತ್ ಮಹಾನ್ ಹೈ ಹೇಳಿ ನಮ್ಮಿದಿರು ಯಾರಿಹರು ಸ ಗುಡಿ ಕಟ್ಟಿದವರನ್ನು ಗುಡಿಯಾಚೆಗಿರಿಸಿದ ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ ಪಾವಿತ್ರ ದ ಚರಿತೆ ಇದು ಅಲ್ಲವೆ ಹೇಳಿ! ಇಂತಹ ಚರಿತೆ ಬೇರೆಲ್ಲಿದೆ ಕೇಳಿ? ತುಳಿದವನ ಜಾತಿಗೆ ಹೆಸರು ಮೇಲ್ಜಾ...

1...678910...106

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....