ಜಡಜಡವನೆಳದಾಡಿ ಮನಮನವ ತಾಗಿಸುತ ಕರ್ಮದೊಡ್ಡಿನೊಳಿಹವ ನೂನೂಗುತಿರುವ ಜೀಯ ನಿಮ್ಮ ಹಸಾದರೆಂಬರುರವಟೆಯೊಳಗೆ ಸಾಗುವರಸರ ವಿಭವದುತ್ಸವದ ತೆರವ ಕಂಡು ಕುಶಲವ ಪಡದ ಕಂಗಳಿವು ಹೊಂಗುವುವು ತುರೀಯೋಪಾಂತ್ಯದೊಳು ವಿವರಿಸುತಲಿರುವ ಯಾತ್ರಿಕರ ಕಾಣುತ್ತ,-ಹಗುರಾದ...

ಧರ್ಮದ ಠೇಕೆದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು. ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು. ಧರ್ಮದ ರಾಜಕೀಯದಲ್ಲಿ ಅಧರ್ಮದ ಕತ್ತಿ ಝಳಪಿಸುವ ಗುಜರಾತನು ಕಣ್ಣಾರೆ ಕಂಡಿದ...

ಬೆಂಗಳೂರೆಂಬ ದೊಡ್ಡ ಪಟ್ಟಣದಲ್ಲಿ ಬಲು ದೊಡ್ಡ ಮಠವಿತ್ತು. ಒಂದು ದಿನ ಒಬ್ಬ ಸನ್ಯಾಸಿ ಮಠದೊಳಕ್ಕೆ ಐದಾರು ಶಿಷ್ಯರೊಂದಿಗೆ ಗೂಳಿ ನುಗ್ಗಿದಂತೆ ನುಗ್ಗಿ ಬಂದ, ಮಠದಲ್ಲಿದ್ದವರೆಲ್ಲ ಗಾಬರಿಯಾದರು. “ಸ್ವಾಮಿಗಳೆ ತಾವು ಯಾರು? ನಿಮಗ್ಯಾರು ಬೇಕಾಗಿ...

ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ...

ಈ ಹೆಣ್ಣು ಕೈಕೊಟ್ಟದ್ದು ಒಬ್ಬನಿಗೆ ಮಾತ್ರ ಆದ್ದರಿಂದಲೇ ಸತ್ತಮೇಲೂ ಇವಳ ಪಾತಿವ್ರತ್ಯ ಪ್ರಸಿದ್ದಿಗೆ ಪಾತ್ರ. – ಅಜ್ಞಾತ ಬದುಕಿದ್ದಾಗ ಸರ್ವಾಧಿಕಾರಿಗೆ ಕಟ್ಟಿದ್ದೇ ದೇವಾಲಯ ಎಲ್ಲೆಲ್ಲೂ ಸತ್ತಾಗ ಅವನ ಗೋರಿ ನಿಲ್ಲಿಸಲು ಸಹ ಇರಲಿಲ್ಲ ಒಂದು ಕ...

“ನೀವು ಹೀಗೆ ಮಾಡ್ಬಾರ್ದಿತ್ತು” ಎಂದರು ಶಾನುಭೋಗರು. “ಈ ಹುಡ್ಗುರಿಗೆಲ್ಲ ಹೆದ್ರಿಕಂಡಿರೋಕ್ಕಾಗ್ತೈತಾ ಯಾವಾಗ್ಲು? ನೀವೊಳ್ಳೆ ಚನ್ನಾಗೇಳ್ತೀರಿ ಬಿಡ್‌ಬಿಡ್ರಿ ಅತ್ತ” – ಸಂಗಪ್ಪ ಕಡ್ಡಿ ತುಂಡಾದಂತೆ ಹೇಳಿದ; “ಬಣ್ಣ ಒರೆಸ್ಕೊಳ್ಳೋಕೆ ಅದೆಷ್ಟು ಕಷ್ಟಬ...

ಇಲ್ಲಿ ನೋಡಿಲ್ಲಿ! ಮುಗಿಲು ಮುನ್ನೀರ ಚುಂಬಿಸಿತಿಲ್ಲಿ; ಮುನ್ನೀರು ಮುಗಿಲ ರಂಬಿಸಿತಿಲ್ಲಿ. ನಂಬಿಸಿತಿಲ್ಲಿ ಬೆಳಗು,- ಕೂಟದ ಗೆರೆ ಬೆಳ್ಳಿಯ ಕಟ್ಟೆಂದು. ಬಿಂಬಿಸಿತಿಲ್ಲಿ ಸಂಜೆ- ಪರಿಧಾನವಿದು ನೀಲಿಮ ರೇಖೆಯೆಂದು! ಚೌಕೆಂದರೆ ಚೌಕು, ದುಂಡೆಂದರೆ ದುಂ...

1...1516171819...107

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....