ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ ದಾಯವೇರಿದೊಡದನು ಮೌಲ್ಯ ವರ್‍ಧನೆಯೆನುವರಲಾ? ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ ನಯದೊಳುಣುವರನೋಲೈಸಿದೊಡದು ಮೌಲ್ಯವರ್‍ಧನೆಯೇಂ? – ವಿಜ್ಞಾನೇ...

ಹೋಡೀಬ್ಯಾಡ ಗಂಡಪ್ಪಾ ದೇವರಿಗೊಂದ ದತ್ತಾದೇನಿ || ೧ || ಮೂಲ್ದಗೊಡೀ ಹೆಣ್ಣಾನೀ ಮೂಗ್ತೀಯಾ ವಲ್ಗಿಟ್ಟೀನೀ || ೨ || ಕಳ್ದಗಿಳ್ದದ ಹೋದೀತಂತ್ಯಾ ವಲೆ ಬೂದ್ಯಾಗಿಟ್ತಿದ್ದೇ || ೩ || ಹೌದನನ್ನಾ ಹೆಣ್ಣಾ ಹೊಯ್ಮಾಲಿ ಹೆಣ್ಣಾ || ೪ || ಹೊಡಿಬ್ಯಾಡಾ ಗಂಡಪ...

ಬರೆದವರು: Thomas Hardy / Tess of the d’Urbervilles ಕನ್ನಂಬಾಡಿಯು ಇನ್ನೂ ಕೃಷ್ಣರಾಜಸಾಗರವಾಗಿರಲಿಲ್ಲ. ಆದರೂ ಅಲ್ಲಿ ಆ ವೇಳಿಗೆ ಆದ ಕಟ್ಟೆಯ ಹರಹಿನ ಹಿಂದೆ ನಿಂತ ನೀರೇ ನೋಡು ವವರಿಗೆ ಆಶ್ಚರ್ಯವಾಗುವುದು. ಅಲ್ಲದೆ ಕಾವೇರಿಯ ತಿಳಿನೀ...

ಮನವೇ ಓಡದೆ ನಿ ನಿಲ್ಲು ಒಂದು ಕ್ಷಣ ಮುಂದಡಿಬೇಡ ನನ್ನನ್ನೆ ನಿ ಅನುಸರಿಸಬೇಕು ಹೀಗೆ ದಾರಿ ತಪ್ಪಿ ಓಡಬೇಡ ಹೌದು ನೀನೊಮ್ಮೆ ಆಲೋಚಿಸು ಎಷ್ಟು ಜನ್ಮ ನನ್ನೊಂದಿಗೆ ಕಳೆದೆ ಜನ್ಮ ಜನ್ಮದಲ್ಲೂ ನೀ ಮಾತ್ರ ನಿನ್ನ ಪಟ್ಟು ಬಿಡದೆ ಸಾಧಿಸಿದೆ ಎಷ್ಟೊತ್ತಿನ ವರ...

ಅಹಂ ಬ್ರಹ್ಮ ಈ ಬ್ರಹ್ಮನಿಗೆಂಥ ಹಸಿವು ಇದು ಹಿಂಗಿಸಲಾರದ ಹಸಿವು ಅನ್ನದ ಹಸಿವೀ ಬ್ರಹ್ಮನಿಗೆ ಅನ್ನ ದೊರೆತೊಡೆ ನೀರಿನ ಹಸಿವು ನೀರು ದೊರೆತೊಡೆ ಕಾಮದ ಹಸಿವು ಕಾಮ ದೊರೆತೊಡೆ ಪ್ರೇಮದ ಹಸಿವು ಅಹಂ ಬ್ರಹ್ಮ ಜ್ಞಾನದ ಹಸಿವೀ ಬ್ರಹ್ಮನಿಗೆ ಜ್ಞಾನ ದೊರೆತೊ...

(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ) ಮಡಿಮಡಿಹಾರುವ ಗುಡಿಯಲ್ಲಿ ತೋಪಿನ ಗುಡಿಯಲ್ಲಿ ಮುಟ್ಟಿಕೊಂಡು ಮೈಲಿಗೆಯಾದ ಹುಡಿಯಲ್ಲಿ ಮೂಲೆಯ ಹುಡಿಯಲ್ಲಿ. ನಿಡುನೀಟು ಸರದಾರ ನಸುಕಿನೊಳಗೆ ಸಂಜೆಯ ನಸುಕಿನೊಳಗೆ ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ ಬಂಗ...

ದರ್‍ಗಾದ ಎರಡು ಘನ ಗಂಭೀರ ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ ಬದುಕನು ಸಾರಿ ಸಾರಿ ಹೇಳುತ್ತಿದ್ದವು. ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ ಅಮ್ಮಿ ಕಟ್ಟು...

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವಂತೇ “ಮೂರು ವರ್‍ಷದ ಬುದ್ಧಿ ನೂರು ವರ್‍ಷ” ಎನ್ನುವಂತೇ… ಸಲ್ಮಾನ್ ಖಾನ್ ಅವರ “ಬಜರಂಗಿ ಬಾಯಿಜಾನ್” ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸಿರುವ ಪುಟಾಣಿ ಸೂಪರ...

ಬಿಡುಗಡೆಯೆ! ದೇವರಿನಣಂ ಕಿರಿಯ ದೇವತೆಯೆ? ಭಾರತಕ್ಕೆ ಬಾರ, ನರನೆರಡನೆಯ ತಾಯೆ! ಋದ್ಧಿ ಬುದ್ಧಿಗಳಕ್ಕನೆಂದು ಸಂಭಾವಿತೆಯೆ, ನೀನೆಲ್ಲಿ ಶಾಂತಿಯಲ್ಲಿದೆ ನಿನ್ನ ಛಾಯೆ! ಯೂರೋಪದಾವ ಗುಣಕೊಲಿದಲ್ಲಿ ನೀ ನಿಂತು ಮಿಕ್ಕಿಳೆಯನವರ ತುಳಿಗಾಲ್ಗೆ ಬಾಗಿಸಿದೆ? ಆ...

1...456789

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...