ಹೈಮವತಿಯೇ ತಾಯಿ- ಬಗೆ ಬಗೆಯ ರೂಪದಲಿ ಭೂಮಿಯೊಳು ತಾ ಬಂದು- ನಲಿಯುವಳು ದೇಹದಲಿ ಅವಳ ಕಿಡಿ ನಮ್ಮೊಳಗೆ ನಲಿಯುತಿದೆ ಒಳಗೊಳಗೆ. ಅವಳೆಮಗ ಹೆತ್ತಬ್ಬೆ- ಆದರೊಂದೇ ಚಿಂತೆ ನರರೆಂಬ ಸೋದರರು- ಪ್ರೇಮ ತೊರೆದವರಂತೆ ಬಲಿಯೀವರೆಮ್ಮನ್ನು ಕೇಳುವವರಾರಿನ್ನು. ಪರ...

ಹಸಿರು ಬಳ್ಳಿ ಛಪ್ಪರ ಕಂಡಾಗ ನೆನಪಗುತ್ತಾಳೆ ನನಗೆ ಅಮ್ಮ ಅವಳೇ ಕಟ್ಟಿದ್ದ ಛಪ್ಪರದ ಮೇಲೆ ಹಾಗಲ, ಹೀರೇ, ಪಡುವಲ ಬಳ್ಳಿ ಕುಂಬಳಕಾಯಿ ಚಳ್ಳವರೆಯ ಹಸಿರು ಮನೆಮುಂದೆ ದಟ್ಟ ಹಸಿರು ಹಂದರ ನೆರಳಿತ್ತು ಮನೆಯ ಹಿಂದೆ ಮುಂದೆ ಬರೀ ಹಸಿರೇ ಹಸಿರಿತ್ತು. ಅಮ್ಮನ...

ನಮ್ಮ ಕೇರಿಯ ಚಂದ ನೋಡಿ ಅದರ ಚೆಲುವ ಪರಿಯ ನೋಡಿ ಮುಂದೊಂದು ಹೆಜ್ಜಾಲ ಅದರ ತುಂಬ ಹಕ್ಕಿಗಳು ಕೆಳಗೊಬ್ಬ ಋಷಿಮುನಿ ಅಥವ ಅಂಥ ವೇಷ ಪಕ್ಕದಲ್ಲೆ ಬಾವಿಕಟ್ಟೆ ನೀರು ಸೇದೋ ನೀರೆಯರು ರಟ್ಟೆ ನೋಡಿ ಮೀನಖಂಡ ನೋಡಿ ಬಳುಕುವವರ ಸೊಂಟ ನೋಡಿ ಬಾವಿಯಾಳಕೆ ಇಣುಕಿದ...

ಸಾಮಾನ್ಯವಾಗಿ ಮೊಬೈಲ್ ಫೋನ್‌ಗಳನ್ನು, ಗುರುತಿನ ಚೀಟಿಗಳನ್ನು ಕೊರಳಲ್ಲಿ ಹಾಕಿಕೊಂಡು ತಿರುಗಾಡುವವರನ್ನು ನೋಡಿದ್ದೇವೆ. ಈ ರೀತಿ ಕಂಪ್ಯೂಟರ್‌ಗಳನ್ನೇ ಕೊರಳಲ್ಲಿ ನೇತು ಹಾಕಿಕೊಂಡು ತಿರುಗಾಡುವುದನ್ನು ಕಂಡಿಲ್ಲ. ಹಾಗೇನಾದರೂ ಇದ್ದರೆ ಸೂಕ್ಷ್ಮ ಯಂತ್...

ದೀಪವಾರಿದೆ ಹಣತೆ ಉಳಿದಿದೆ ನಿನಗೆ ಕೋರುವೆ ಮಂಗಳ ಬೆಟ್ಟ ಹತ್ತಿದೆ ಕಣಿವೆ ದಾಟಿದೆ ಕಂಡೆ ಕಾಣದ ಹೊಸ ಜಗ ಗಾಳಿಯಲ್ಲಿ ನೂರು ರಾಗ ಎದೆಯೊಳೆಲ್ಲಾ ಝಗಮಗ ಅದಕೆ ನಿನಗೆ ವಂದನೆ ಬೇರೆಯಿಲ್ಲ ಚಿಂತನೆ ಬೆಳದಿಂಗಳ ಹಾಲ ಕುಡಿದೆ ಚಂದ್ರನ ಮೇಲೆ ಆಡಿದೆ ತೇಲುತ ಬ...

ಎಲ್ಲ ಕವಿತೆಗಳು ಗಿಲೀಶನ ಮೇಲೆಯೇ ಆದರೆ ಏನು ಚೆನ್ನ ನನ್ನ ಮೇಲೂ ಬರೆ ಎಂದ ಸಿರೀಶ ಅರೆ ನೀನೂ ಅವನೂ ಒಂದೇ ಅಲ್ಲವೇ ಹಾಗಾದರೆ ಬೇರೆ ಬೇರೆಯೇ ಹೌದು ನೀನು ಬೇರೆ ಅಂದರೆ ಬೇರೆ ಇಲ್ಲ ಎಂದರೆ ಇಲ್ಲ ಆದರೆ ಎರೆಯುವುದಿದೆಯಲ್ಲಾ ಆ ನಿನ್ನ ಪ್ರೀತಿ ನಿಷ್ಪಕ್ಷ...

ಇಲ್ಲೇ ಇರು ಆಡಿಕೊಂಡಿರು ಎಲ್ಲಿಯೂ ಹೋಗದಿರು ಹೂಂಗುಟ್ಟಿತು ಮಗು ಮುಖದ ತುಂಬ ನಗು ಹೊರಳುತ್ತಾ ಉರುಳುತ್ತಾ… ಅಂಬೆಗಾಲನು ಇರಿಸಿತು ಲಜ್ಜೆ ಬಟ್ಟೆಯ ತೊಟ್ಟು ತಿಪ್ಪ ಹೆಜ್ಜೆಗಳನಿಟ್ಟಿತು ಬಾಯಿಗೆ ಬೆರಳು ಕಣ್ಣಿಗೆ ಮರಳು ಹೋ… ಎಂದಿತು ಹಾ...

ಮುಂಜಾನೆಯ ಒಂಬತ್ತರ ಸುಮಾರಿಗೆ ಕರೆಗಂಟೆ ಕೇಳಿಸಿತು. ಯಾವುದೋ ಕೇಸ ಪೇಪರನ್ನು ತಿರುವುತ್ತ ಕುಳಿತಿರುವ ಶ್ರೀನಿವಾಸರಾಯ ಬಾಗಿಲ ತೆರೆಯಲು ಬಂದ. ಬರುವಾಗ ಈ ಹೊತ್ತಿನಲ್ಲಿ ಮತ್ತೆ ಯಾರಿರಬಹುದು ಹಾಲಿನವ, ಪೇಪರಿನವ, ಅಗಸರೆಲ್ಲ ಬಂದು ಹೋಗಿದ್ದಾರೆ. ಯಾರ...

ಗೆಳೆಯ ಟೈಲರ್ ಇದ್ದ ಆರೂವರೆ ಅಡಿ ವಿರಗಿ ವಿರಾಹಿ ನಿರಾಶಾವಾದಿ ಕಳೆದಿಹನು ಏಳೂವರೆ ದಶಕ ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ ಅನುಮಾನದಿ ಕಾಣುತ್ತಿದ್ದ ಅವರಿವರನು ಆದರೂ ನಂಬಿ ಇವನ ಬಳಿ ಸುಳಿವ ಗಿರಾಕಿ ಸ್ನೇಹಿತರನೇಕರು ಸಮಯಕೆ ಅಂಗಿ ಹ...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...