ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು ಮನಸಾರೆ ನಗುವಿಯೇತಕೆ ಅಣ್ಣ? ನೀ ನಗುವಿಯೆಂಬುದ ಮರೆತು ನಾ ಕವಿತ ಕಟ್ಟಿಲ್ಲ. ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ. ಕವಿಕಂಠೀರವರ ಕೀರ್‍ತಿಯನೆ ಬಯಸಿಲ್ಲ. ನನ್ನ...

ಕತ್ತಲೆಯಲ್ಲಿ ಕತ್ತಲೆ ಆವರಿಸಿದ ರಾತ್ರಿ ನಕ್ಷತ್ರಗಳು ನೆತ್ತಿಯ ಮೇಲೆ ಕುಣಿದಾಡುತ್ತಿವೆ ವಾಸನೆ ಹೊತ್ತ ತಲೆದಿಂಬ ಅವರ ಸುಖನಿದ್ರೆ ಆವರಿಸಿದೆ ಎಣ್ಣೆಯ ಕಮಟು ವಾಸನೆಯಲಿ. ದೂರದಲ್ಲಿ ಎಲ್ಲೋ ನಾಯಿ ಬೆಚ್ಚಿ ಬೊಗಳಿದೆ ಗೂರ್‍ಖಾನ ಸೀಟಿ ಅರೆಮಂಪರಿನಲಿ ಕ...

ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ ಸುವ್ವಿ ಸುವ್ವ ಲಾಲೀ ಹಾಡಿ ತಂಪಾಗಿಸಿ ನನ್ನ ಮನಸನು ಓಲಾಡಿಸು ತಂಗಾಳಿ ನಿನ್ನ ಬಯಸಿ ಬಯಕೆಗಳ ಚಿಗುರಲಿ ಹೊಸ ಗೀತೆಯ ಬರೆದು ವಸಂತನ ಕರೆದು ನನ್ನ ಮನಸನು ತೂಗಿಸು ತಂಗಾಳಿ ಆ ಮರದ ಹೂವು ಈ ಮರದ ಹೂ ಗೊಂಚಲು ನನ್ನ ಮ...

ಪರಮಹಂಸರು ನೀವು ಮಹಾ ಚೇತನರು ಬಾಳೆಲ್ಲ ದೈವತ್ವದಲ್ಲಿ ಕಳೆದವರು ಪದವಿಗಳ ಪಡೆಯದ ವಿದ್ಯಾವಂತರು ಅಮೋಘವನ್ನು ಸಾಧಿಸಿದ ಅಮರಜರು ಕ್ಷುದೀರಾಮ ಚಂದ್ರಮಣಿ ದೈವ ಭಕ್ತರು ಅವರ ಉದರದಿ ಜನಿಸಿದ ನೀವು ಸುತರು ಬಾಲ್ಯವನ್ನು ಕಾಮಾಪುಕುರದಲಿ ಕಳೆದವರು ಅಣ್ಣ ನನ...

ಗೆಳೆಯರೀರ್ವರೂ ಗಂಡಭೇರುಂಡ ಪಕ್ಷಿಗಳಂತೆ ಹಗಲು ರಾತ್ರಿ ಒಟ್ಟಿ ನಲ್ಲಿ ಇದ್ದು ವಿವಿಧ ಪ್ರಸ್ತಾವಗಳನ್ನು ಮಾಡುತ್ತಾ ಸಮಯ ಕಳೆದರು. ಅವರು ರಾಜನ ಕುಲಗುರುವಾದ ಸ್ವಯಂಜ್ಯೋತಿ ಗುರುಗಳ ಮಠಕ್ಕೆ ಹೋಗಿ, ಆ ಸನ್ಯಾಸಿಯನ್ನು ಕಂಡರು. ಅಪರಾಜಿತನು ವೇದವ್ಯಾಸ ...

ಫಲದ ನಿರ್‍ಣಯವು ಏನು ಆದರೂ ಕ್ಷುಬ್ಧನಾಗನವನು ನೇರಾದ ರೀತಿ ರುಜು ಅವನ ನೀತಿ, ಸಿದ್ಧಿಸದೆ ಇದ್ದರೂನು ತನ್ನ ಯೋಗ್ಯತೆಗೆ ತಕ್ಕ ರೀತಿಯಲಿ ಕರ್‍ಮಕುಶಲನಾಗಿ ಸತ್ಯವನ್ನೆ ಸಾರುವನು ಜಗಕೆ ನಿರ್‍ಭೀತ ಧೀರನಾಗಿ. ಫಲವೆಂದೆ ಬರಲಿ ಯುಗಯುಗವು ತಾಳಿ ಎದೆಗೆಡದ...

ಎಲ್ಲಿದೆಲ್ಲಿದೆ ತಣಿವು ? ಏತರಲ್ಲಿದೆ ತಣಿವು ? ಎಲ್ಲಿಯೆಲ್ಲಿಯು ಕಾಣಲೊಲ್ಲದಾ ತಣಿವು! ಕುಸುರುಕುಸುರಿನ ಚಿನ್ನ -ರನ್ನ ದೊಡವೆಗಳಿಟ್ಟು ಹೊಸ ಮಿರುಗಿನಾ ಸೀರೆ ಬಣ್ಣಗುಪ್ಪಸ ತೊಟ್ಟು ಸಾಕುಸಾಕಿನ್ನೆಂಬ ತಣಿವ ಪಡೆಯುವರು, ಆ ಕೆಳದಿಯರು ನಕ್ಕು ನಲಿದಾಡ...

ಒಮ್ಮೆ ಪ್ರೀತಿಯಲಿ ಸೋತರೇನು, ಮೋಸ ಹೋದನೆಂದೇಕೆ ಕೊರಗುವೆ ನೀನು| ನವಚೈತನ್ಯವ ತಂದುಕೊ ಸೋತು ಸೊರಗಿ ನೀ ಮಂಕಾಗದಿರು| ಹೊಸ ಜೀವನವ ನೋಡು ಹಳೆಯದನ್ನೆಲ್ಲಾ ಮರೆತುಬಿಡು|| ಏಕೆ? ಪ್ರೇಮ ಫಲಿಸಲಿಲ್ಲವೆಂದು ಯೋಚಿಸು| ನಿನ್ನ ಪ್ರೀತಿಸುವವರ ನೀ ಪ್ರೀತಿಸೆ...

ನಕ್ಕವರೆಲ್ಲ ನನ್ನವರೆಂದು ಮಳೆಗರೆಯಿತು ಮನಸು ಸುತ್ತ ಮುತ್ತಿದ ಕಂಡ ಕಂಡವರಿಗೆ ಹದವಾಯಿತು ಕನಸು ಕಳಕಳ ಎನ್ನುವ ಕನಸಿಗೆ ಅವರು ಅಮಲಿನ ಹಾಸಿಗೆ ಹಾಸಿದರು ನರಳಿತು ಕನಸು ಸುಖ ಸಂತಸದಲಿ ಮರೆತು ಹೋಯಿತು ಮಳೆ ಮನಸು ಬಸಿರಿನ ಕನಸಿಗೆ ಹುಟ್ಟಿದ ಮಕ್ಕಳು ನ...

ಸ್ವಾತಂತ್ರ್ಯಪೂರ್ವದಲ್ಲಿ ಬದುಕಿನಲ್ಲಿ ತುಂಬಿದ್ದ ಆದರ್ಶ ಭರವಸೆ ಕನಸುಗಳು ಅಂದಿನ ಕಾವ್ಯಮಾರ್ಗವಾದ ನವೋದಯ ಕಾವ್ಯದಲ್ಲಿ ಪ್ರತಿಬಿಂಬಿಸಿದವು. ಆದರೆ ಸ್ವಾತಂತ್ರ್ಯಾನಂತರ ಬದುಕಿನಲ್ಲಿ ಕಂಡುಬಂದ ಹುಸಿತನ, ಭೀಭತ್ಸತೆ, ಭ್ರಷ್ಟತೆ ಇವು ನವ್ಯಕಾವ್ಯದಲ್...

1...910111213...16

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....