ಒಮ್ಮೆ ಪ್ರೀತಿಯಲಿ

ಒಮ್ಮೆ ಪ್ರೀತಿಯಲಿ
ಸೋತರೇನು,
ಮೋಸ ಹೋದನೆಂದೇಕೆ
ಕೊರಗುವೆ ನೀನು|
ನವಚೈತನ್ಯವ ತಂದುಕೊ
ಸೋತು ಸೊರಗಿ ನೀ ಮಂಕಾಗದಿರು|
ಹೊಸ ಜೀವನವ ನೋಡು
ಹಳೆಯದನ್ನೆಲ್ಲಾ ಮರೆತುಬಿಡು||

ಏಕೆ? ಪ್ರೇಮ
ಫಲಿಸಲಿಲ್ಲವೆಂದು ಯೋಚಿಸು|
ನಿನ್ನ ಪ್ರೀತಿಸುವವರ
ನೀ ಪ್ರೀತಿಸೆ ಸ್ವಾಗತಿಸು|
ಪ್ರೇಮ ಕುರುಡು ಸತ್ಯ, ಆದರೆ
ಕುರುಡು ಪ್ರೇಮ ಸತ್ಯವಲ್ಲ||

ಪ್ರೀತಿ ಎಂದರೆ ಬರೀ
ಹದಿಹರೆಯದಲಿ ಬಂದು
ಹೋಗುವ ಹೆಣ್ಣು ಗಂಡಿನ
ಆಕರ್ಷಣೆಯೊಂದೇ ಪ್ರೀತಿಯಲ್ಲ|
ಸ್ನೇಹಿತರ ಪ್ರೀತಿಸು
ನೆರೆಹೊರೆಯವರ ಪ್ರೀತಿಸು
ಮನುಕುಲ, ಪ್ರಾಣಿಸಂಕುಲವ ಪ್ರೀತಿಸು
ಪ್ರಕೃತಿ ಮಾತೆಯ ಪ್ರೀತಿಸು||

ತಿರಸ್ಕಕರಿಸಿದನು ಬಿಟ್ಟು ಬಿಡು
ಪುರಸ್ಕರಿಸುವುದನು ನೋಡು|
ಅಕ್ಕ ತಂಗಿಯರ ಪ್ರೀತಿಸು
ಒಳ್ಳೆಯ ಪುಸ್ತಕ,
ಒಳ್ಳೆಯ ಸಂಗೀತವನು ಪ್ರೀತಿಸು|
ಒಳ್ಳೆಯದನ್ನೆಲ್ಲಾ ಪ್ರೀತಿಸು
ಒಳ್ಳೆಯದೇ ಬೆಳೆಯುವುದು
ಒಳ್ಳೆಯದೇ ಉಳಿಯುವುದು
ಉಳಿಯುವುದನೇ ನೀ ಪ್ರೀತಿಸು
ಉಳಿಯುವುದನೇ ನೀ ಗಳಿಸು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂರು ನೆರಳುಗಳು
Next post ಅತೃಪ್ತಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…