ಫಲದ ನಿರ್‍ಣಯವು ಏನು ಆದರೂ ಕ್ಷುಬ್ಧನಾಗನವನು
ನೇರಾದ ರೀತಿ ರುಜು ಅವನ ನೀತಿ, ಸಿದ್ಧಿಸದೆ ಇದ್ದರೂನು
ತನ್ನ ಯೋಗ್ಯತೆಗೆ ತಕ್ಕ ರೀತಿಯಲಿ ಕರ್‍ಮಕುಶಲನಾಗಿ
ಸತ್ಯವನ್ನೆ ಸಾರುವನು ಜಗಕೆ ನಿರ್‍ಭೀತ ಧೀರನಾಗಿ.
ಫಲವೆಂದೆ ಬರಲಿ ಯುಗಯುಗವು ತಾಳಿ ಎದೆಗೆಡದೆ ಇರುವನಾತ
ಗೊಣಗುಡದೆ ಅವನು ಅವಘಡವ ಸಹಿಸಿ ಎದುರಿಸುವ ವೀರಜಾತ
ಸಡಲಿಸನು ಅವನು ಹವಣಿಕೆಯ ಹಿಡಿತ ಶತಕಾನುಶತಕವಾಗಿ
ಸಿದ್ಧಿಸಲಿ ಬಿಡಲಿ ಸಮತೆಯನು ಕಳೆದುಕೊಳನಾತ ಸಾಮ್ಯಯೋಗಿ.
ಅಪಜಯವು ಬರಲಿ ಕೊನೆ ವಿಜಯವಿಹುದು ಎನುತೆನುತ ಯುದ್ದವೆಸಗಿ
ಮೊಗದಲ್ಲಿ ನಗೆಯು, ಎದೆ ಸೊಗದ ಬಗೆಯು, ಸ್ಥಿತಿ ಬರಲಿ ಎಂತೊ ಮಸಗಿ
ಪರಗುಣದ ರಸಿಕ ಸಹಕಾರಿಯವನು ಸತ್ಕೃತ್ಯವೆಲ್ಲಕೂನು
ಸಂಯಮದಿ ಬದ್ಧ ಪ್ರಾಮಾಣ್ಯಸಿದ್ಧ ಹೀಗಿರಲು ಬೇಕು ಮಗುವು.
ಅವನಲ್ಲಿ ದಿವ್ಯಜ್ಯೋತಿಗಳ ಉದಯ ತೋರುವದು ಬರುವ ಯುಗವು.
*****