ವಾಗ್ದೇವಿ – ೨೭

ವಾಗ್ದೇವಿ – ೨೭

ಗೆಳೆಯರೀರ್ವರೂ ಗಂಡಭೇರುಂಡ ಪಕ್ಷಿಗಳಂತೆ ಹಗಲು ರಾತ್ರಿ ಒಟ್ಟಿ ನಲ್ಲಿ ಇದ್ದು ವಿವಿಧ ಪ್ರಸ್ತಾವಗಳನ್ನು ಮಾಡುತ್ತಾ ಸಮಯ ಕಳೆದರು. ಅವರು ರಾಜನ ಕುಲಗುರುವಾದ ಸ್ವಯಂಜ್ಯೋತಿ ಗುರುಗಳ ಮಠಕ್ಕೆ ಹೋಗಿ, ಆ ಸನ್ಯಾಸಿಯನ್ನು ಕಂಡರು. ಅಪರಾಜಿತನು ವೇದವ್ಯಾಸ ಉಪಾ ಧ್ಯನ ಗುರ್ತು ಸನ್ಯಾಸಿಗೆ ಹೇಳಿದನು. ಅವರು ಹಿಂದೆ ಅವನನ್ನು ರಾಜನ ದರ್ಬಾರಿನಲ್ಲಿ ನೋಡಿದ ನೆನಪು ಒಂದು ಸಂತೋಷಪಟ್ಟರು. ತಮ್ಮ ಮಠದ ಮೇಲೆ ಅಭಿಮಾನವಿಟ್ಟು ಇಲ್ಲಿವರೇಗೆ ಒಂದ ಗೀರ್ವಾಣಭಾಷಾಗ್ರಗಣ್ಯಗೆ ಸಾಭಿಮಾನ ಮಾಡಿ, ಬಿಡಾರ ಸಾಹಿತ್ಯಗಳನ್ನು ಒದಗಿಸಿಕೊಟ್ಟು ಚಂದವಾಗಿ, ಪರಾಮರ್ಶಿಸೆಂದು ಮಠದ ಕಾರ್ಯಸ್ಥ ಶಿವರಾಮ ಸೆಟ್ಟಗೆ ಆಜ್ಞಾಸಿಸಿದರು. ಕಾರ್ಯಸ್ಥನು ಗುರುವಿನ ಅಪ್ಪಣೆಯನ್ನು ನಡೆಸಿದನು. ವಿಪ್ರಗೆ ಭೋಜನಾದಿ ಸತ್ಕಾರಗಳು ಅವನ ನಿರೀಕ್ಷಣೆಯನ್ನು ಮಿಗುವ ರೀತಿಯಲ್ಲಿ ಆದವು ಸ್ವಯಂ ಜ್ಯೋತಿ ಪರಮಹಂಸರು ಸಂಸ್ಕೃತದಲ್ಲಿ ಕಡಿಮೆ ಪಾಂಡಿತ್ಯವುಳ್ಳ ವರಲ್ಲ. ವೇದ ವ್ಯಾಸ ಉಪಾಧ್ಯನು ಆವರ ಒಟ್ಟ ನಲ್ಲಿ ಎರಡು ಮೂರು ದಿವಸ ತರ್ಕಮಾಡಿ ನೋಡಿದಾಗ ತನ್ನಷ್ಟು ದೊಡ್ಡ ಸಂಸ್ಕೃತ ಪಂಡಿತವಿಲ್ಲವೆಂಬಂತ ತಾಳಿಕೊಂಡ ಗರ್ವವು ವ್ಯರ್ಥವಾಗಿತೋರಿ ಸನ್ಯಾಸಿಯ ಪ್ರಾಜ್ಞತೆಗೆ ಮೆಚ್ಚಿದನು. ಉಪಾ ಧ್ಯನ ಪಾಂಡಿತ್ಯವು ಸಾಮಾನ್ಯವಾದುದಲ್ಲವೆಂದು ಸ್ವಯಂಜ್ಯೋತಿ ಗುರು ವರ್ಯರು ನಿಶ್ಚೈಸಿ ಒಳ್ಳೇ ವಸ್ತ್ರಾಲಂಕಾರಗಳನ್ನು ಅವನಿಗೆ ಉಚಿತವಾಗಿ ಕೊಟ್ಟು, ಸನ್ಮಾನಿಸಿದರು. “ವಿಶೇಷವೇನಾದರೂ ಅರಿಕೆ ಮಾಡಲಿಕ್ಕಿದೆಯೋ” ಎಂದು ವಿಚಾರಿಸಿದಾಗ ಅಪರಾಜಿತ ಸೆಟ್ಟಿಯು ಪ್ರಣಾಮಮಾಡಿ, ಈ ಬ್ರಾಹ್ಮಣನು ಸನ್ನಿಧಾನದ ಭೇಟಿಗೆ ಬಂದ ಉದ್ದೇಶವನ್ನು ಸಂಪೂರ್ಣವಾಗಿ ವಿವರಿಸಿದನು.

“ಲೌಕಿಕ ವಿಚಾರವನ್ನೇ ಬಿಟ್ಟು ನಿರ್ವಾಣವನ್ನು ಹೊಂದಲಪೇಕ್ಷಿತ ನಾದ ಪರಮಹಂಸನೊಬ್ಬನು ಇಂಥಾ ವಾಭಾಟದಲ್ಲಿ ಮಾಡತಕ್ಕದ್ದೇನೂ ಇಲ್ಲವು. ಆದರೆ ಈ ರಾಜ್ಯದಲ್ಲಿ ಒಡ್ಡೋಲಗದ ಕ್ರಮಕ್ಕನುಸರಿಸಿ ಮತ ಸಂಬಂಧವಾದ ವಿವಾದಗಳಲ್ಲ ರಾಜದ್ವಾರದಲ್ಲಿ ಅರಸನು ತನ್ನ ಕುಲಗುರು ವನ್ನು ಮಂತ್ರಾಲೋಚಕನಾಗಿ ತನ್ನ ಅರ್ಧಾಸನದಲ್ಲಿ ಕುಳ್ಳಿರಿಸುವ ಪದ್ಧ ತಿಯು ಪರಂಪರೆಯಾಗಿ ನಡೆದು ಬರುತ್ತದೆ. ಅವನ ಅಭಿಪ್ರಾಯವನ್ನು ಸ್ವೀಕರಿಸುವುದಕ್ಕೆ ಅರಸು ಸರ್ವಧಾ ಬದ್ದನಲ್ಲ. ನೃಪಾಲನು ತನಗೆ ಯುಕ್ತ ವೆಂತ ಕಾಣುವ ವಿಧಿಯನ್ನು ಕೊಡುತ್ತಾನೆ. ಅವನ ಸ್ವಾತಂತ್ರ್ಯಕ್ಕೆ ಯಾವ ನೊಬ್ಬ ಮಂತ್ರಾಲೋಚಕನ ತಡೆಯೂ ಇರುವುದಿಲ್ಲ.” ಹೀಗೆ ಸನ್ಯಾಸಿಯು ಹೇಳಿದುದರಿಂದ ವೇದವಾಸ್ಯನು ಕಂಗೆಟ್ಟನು. ಅಪರಾಜಿತ ಸೆಟ್ಟಿಯು ಪುನಃ ಪ್ರಣಾಮಮಾಡಿ ಶರಣಾಗತನಾದ ಹಾರುವಗೆ ಅಭಯವಾಗಬೇಕೆಂದು ಸೆರಗು ಒಡ್ಡಿ ಬೇಡಿಕೊಂಡನು: “ಜನಧರ್ಮ ಪಾಲಿಸು?” ಎಂದು ಅಪರಾ ಜಿತಗೆ ಆಜ್ಞೆಯಾಯಿತು. ಬಳೆಕ ಅವರು ತನ್ನ ನೌಕರನೊಬ್ಬನನ್ನು ಕಳು ಹಿಸಿ ಅರಮನೆಯ ಭಕ್ಷಿ ಆದಿರಾಜನನ್ನು ಕರೆಸಿ ಅವನ ಕೂಡೆ ಅಂತರಂಗದಲ್ಲಿ ಏನೋ ಮಾತಾಡಿ ವೇದವ್ಯಾಸ ಉಪಾಧ್ಯನನ್ನು ಅವನ ಸಂಗಡ ಕಳು ಹಿಸಿದರು.

ಅಪರಾಜಿತನು ಅವರಿಬ್ಬರ ಹಿಂದೆಯೇ ಹೋದನು. ಆದಿರಾಜನು ಆ ಬ್ರಾಹ್ಮಣನನ್ನೂ ಅವನ ಸಂಗಡಿಗನನ್ನೂ ಮನೆಗೆ ಕರಕೊಂಡು ಹೋಗಿ ದಿವಾನ ಕಚೇರಿಯ ಒಬ್ಬ ಕಾರ್ಕೂನನನ್ನು ಕರತರಿಸಿ ಅವನ ಕೂಡೆ ಸ್ನೇಹ ಭಾವದಿಂದ ಸಂಭಾಷಣೆಮಾಡಿ ವೇದವ್ಯಾಸ ಉಪಾಧ್ಯನ ಛಲನಡೆಯಲಿಕ್ಕೆ ಉಪಾಯ ನಡೆಸಬೇಕೆಂದು ಅಪೇಕ್ಷಿಸಿದನು. ಅರಸನ ಒಡ್ಡೋಲಗದಲ್ಲಿ ಪೇಚಾಡುವ ಕಾಲವು ಇನ್ನೂ ಒದಗಲಿಲ್ಲ ಆಯಾ ಊರಿನವರು ಒಗ್ಗ ಟ್ಟಾಗಿ ಮತ ವಿರುದ್ಧವಾದ ಕಾರ್ಯವನ್ನು ನಡೆಸಕೂಡದೆಂದು ಕಟ್ಟು ಮಾಡಲಿಕ್ಕೆ ಸ್ವತಂತ್ರಿಕರಾಗಿರುತ್ತಾರೆ. ಅವರ ಕಟ್ಟು ಮುರಿಯುವುದು ಅನ್ಯ ರಿಗೆ ಅಸಾಧ್ಯ. ಒಂದುವೇಳೆ ಅಂಥಾ ಕಟ್ಟಿನಿಂದ ತಡೆಯಲ್ಲಟ್ಟವನು ದ್ರವ್ಯ ಬಲದಿಂದ ಕಲಹ ಹೊಡೆದಾಟ ಮುಂತಾದ ಉಪದ್ರವ ಕೊಡಲಿಕ್ಕೆ ನೋಡುವುದಾದರೆ ಸ್ಥಳಿಕ ಕಾರ್ಬಾರಿ ಕೊತ್ವಾಲರು ತಮ್ಮ ಅಧಿಕಾರವನ್ನು ನಡೆಸದೆ ಇರಲಿಕ್ಕಿಲ್ಲ. “ಜಗಲಿ ಹಾರದ ಬಡ್ಡಿ ಗಗನ ಹಾರ್ಯಾಳೆ” ಎಂಬಂತೆ ಇಷ್ಟು ಸಣ್ಣ ವ್ಯವಸ್ಥೆ ಮಾಡಲಿಕ್ಕೆ ಬುದ್ಧಿ ಚಾತುರ್ಯವಿಲ್ಲದವನು ರಾಜನ ಒಡ್ಡೋ ಲಗಕ್ಕೆ ಬಂದು, ಏನು ಮಾಡುವ ಹಾಗಿದೆ? ಕಾರ್ಕೂನನ ಈ ಪ್ರತಿವಾಕ್ಯ ವನ್ನು ಅಪರಾಜಿತ ಸೆಟ್ಟಿಯು ವೇದವ್ಯಾಸ ಉಪಾಧ್ಯಗೆ ವಿವರಿಸಿ ಹೇಳಿ ತನ್ನ ಸಂಗಡ ಬಂದರೆ ಮುಂದಿನ ಉಪಾಯ ಸುಲಭವಾಗಿದೆಯೆಂದು ಅವ ನಿಗೆ ಧೈರ್ಯ ಕೊಟ್ಟನು. ಆದಿರಾಜಗೆ ಅವರಿಬ್ಬರೂ ನಮಸ್ಕಾರ ಮಾಡಿ, ಅಲ್ಲಿಂದ ಹೊರಟು ಕ್ಷಿಪ್ರ ಕುಮುದಪುರಕ್ಕೆ ಬಂದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಳಿನ ಮಗು
Next post ಭಗವಾನ ಶ್ರೀ ರಾಮಕೃಷ್ಣರಿಗೆ

ಸಣ್ಣ ಕತೆ

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…