ಭಗವಾನ ಶ್ರೀ ರಾಮಕೃಷ್ಣರಿಗೆ

ಪರಮಹಂಸರು ನೀವು ಮಹಾ ಚೇತನರು
ಬಾಳೆಲ್ಲ ದೈವತ್ವದಲ್ಲಿ ಕಳೆದವರು
ಪದವಿಗಳ ಪಡೆಯದ ವಿದ್ಯಾವಂತರು
ಅಮೋಘವನ್ನು ಸಾಧಿಸಿದ ಅಮರಜರು

ಕ್ಷುದೀರಾಮ ಚಂದ್ರಮಣಿ ದೈವ ಭಕ್ತರು
ಅವರ ಉದರದಿ ಜನಿಸಿದ ನೀವು ಸುತರು
ಬಾಲ್ಯವನ್ನು ಕಾಮಾಪುಕುರದಲಿ ಕಳೆದವರು
ಅಣ್ಣ ನನ್ನ ಹಿಂಬಾಲಿಸಿ ಕಲ್ಕತ್ತೆಗೆ ತೆರಳಿದವರು

ಲೌಕಿಕ ವಿದ್ಯೆಗಳ ಉಪೇಕ್ಷಿಸಿ ನಡೆದವರು
ಅಧ್ಯಾತ್ಮ ಭಕ್ತಿಗೆ ತಡಕಾಡಿದ ಮಹಾನರು
ರಾಣಿ ರಾಸಮಣಿ ಕಟ್ಟಿಸಿದ ಮಂದಿರದಲ್ಲಿ
ಕಾಳಿಕಾ ಮಾತೆಯ ಪೂಜೆಗೆ ನಿಂತವರು

ವಿಧ ವಿಧವಾಗಿ ದೇವಿಗೆ ಪೂಜಿಸಿದವರು
ದ್ವೈತ ಅದ್ವೈತ ವಿಶಿಷ್ಟಾ ದ್ವೈತದಿ ಪ್ರೀತಿಸಿದರು
ಸ್ವಾಮಿ ಸಖ ಸಖಿ ಪ್ರಯತಮನಂತೆ ದೈವಕಂಡವರು
ನಾಲ್ಕು ಯೋಗಗಳೆಲ್ಲ ಸಾಧಿಸಿಕೊಂಡವರು

ಹಿಂದು ಮಹ್ಮದಿ ಕ್ರೈಸ್ತರಂತೆ ಆರಾಧಿಸಿದವರು
ಶಿಷ್ಯ ಕೋಟಿಯನ್ನೆ ನಿರ್ಮಾಣ ಮಾಡಿದವರು
ನರೇಂದ್ರನಿಗೆ ತನ್ನದೆಲ್ಲವೂ ಧಾರೆ ಎರೆದವರು
ಗೃಹಸ್ಥರಾಗಿ ಮಡದಿಯನ್ನು ಪೂಜೆ ಮಾಡಿದವರು

ವೇದ ಉಪನಿಷತ್ತದ ಅಮೃತವ ಧಾರೆಯೆರೆದವರು
ಹಿಂದು ಧರ್ಮದ ಧ್ವಜ ವಿಶ್ವಕ್ಕೆ ಪದರ್ಶಿಸಿದವರು
ಕೇವಲ ದೇವ ಸಂತ ಜ್ಞಾನಗಳಲ್ಲರವರು
ಸಾಕ್ಷಾತ್ ಮಾಣಿಕ್ಯ ವಿಠಲನಾದವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೭
Next post ಸುವ್ವಿ ಸುವ್ವ ಲಾಲೀ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…