ಸ್ವಂತದುದ್ಯೋಗ, ಮಡದಿ, ಮನೆ, ಮಕ್ಕಳೆನ್ನುತಲೊಂದು ಸುಖದ ಕೋಟೆಯ ಬಲಿವವಸರದೊಳೊಂದಷ್ಟು ಸಾವಯವ ಮೊಹರಿನನ್ನವನು ಕೊಂಡೊಡೇನಕ್ಕು? ಸಾವಯವವೆಂದೊಡದು ಬರಿ ಯಕ್ಷಿಣಿಯ ಹಣ್ಣಕ್ಕು ಸುಮ್ಮನಷ್ಟು ಹೊತ್ತಿನೊಳೊಂದಷ್ಟು ಭ್ರಾಮಕದ ಮಜವಿಕ್ಕು – ವಿಜ್ಞಾನ...

ನಾನು ಸುಂದರ ಗಗನ ದೇವತೆ ಮುಗಿಲ ತುಂಬಾ ಹಾರಿದೆ ಜ್ಞಾನ ಯೋಗದ ರಕ್ಕೆ ಬೀಸುತ ಸೂಕ್ಷ್ಮ ಲೋಕವ ಸೇರಿದೆ ಹಕ್ಕಿಯಾಗಿ ರೆಕ್ಕೆ ಬೀಸಿದೆ ಮೇಲು ಮಂದಿರ ತಲುಪಿದೆ ಶಿಖರ ಮಂದಿರ ಮುಕುರ ಮಂದಿರ ಸಕಲ ಸುಂದರವಾಗಿದೆ ಜಡದ ದೇಹದ ಜಡದ ಕೊಡಗಳ ಜಂಗು ಜಾಡನು ದಾಟಿದ...

ಹೃದಯ ತುಂಬಿ ಬರೆದೆ ನಾನು ಹೊಸದು ಹೊಸದು ಕವಿತೆಯ ನವರಾಗದಿ ನುಡಿಸು ನೀನು ಬಾಳ ಭಾವ ಗೀತೆಯ. ಕಣ್ಣಿನಲ್ಲಿ ಕನಸು ತುಂಬಿ ಕಾವ್ಯ ಧಾರೆಯಾಗಲಿ ಮಾತಿನಲ್ಲಿ ಮಧುವು ತುಂಬಿ ಸರಸ ಸೂರೆಯಾಗಲಿ ಮನಸ್ಸು ಮನಸ್ಸು ಸೇರಿ ಬೆರೆತು ಮಧುರ ಗಾನವಾಗಲಿ ನಿನ್ನೆ ನಾಳ...

ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆವೆನಯ್ಯಾ ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ ಹಡಿಕೆಗೆ ಮೆಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ [ಕಾಂಚನ-ಚಿನ್ನ, ಹಡಿಕೆ-ಎಲುಬು, ಸೊಣಗ-ನಾಯಿ] ಬಸವಣ್ಣನ ವಚನ. ದುಡ್ಡು ಎಂಬ ನಾ...

-ದ್ರೋಣನು ಅರಸುಮಕ್ಕಳಿಗೆ ವಿವಿಧ ವಿದ್ಯೆಗಳನ್ನು ಕಲಿಸಿ, ಅವರಲ್ಲಿ ಅರ್ಜುನನನ್ನು ಅಗ್ರಗಣ್ಯನನ್ನಾಗಿಸಿದನು. ತಾನು ರಾಜಕುಮಾರರಿಗೆ ಕಲಿಸಿದ ವಿದ್ಯೆಗಳನ್ನು ಅವರಿಂದ ಪ್ರದರ್ಶಿಸಿ ಕುರುಕುಲ ಹಿರಿಯರ ಮತ್ತು ಜನತೆಯ ಮೆಚ್ಚುಗೆ ಗಳಿಸುವ ಸಲುವಾಗಿ ಭೀಷ...

ಕವಿ ಸಮಯವಲ್ಲ ಮಟ ಮಟ ಮಧ್ಯಾಹ್ನ ಬೇವಿನ ಮರದ ಬೊಡ್ಡೆಗೆ ಒರಗಿದ ಅವ್ವನ ಎದೆಯು ತುಂಬಿದ ಗಾಳಿ ಸಳಸಳ ಒಳ ಸರಿದು, ಎದೆಯ ಭಾರವ ಇಳಿಸಿ ಕಾಯ ಜೀವದ ನೋವ ತಣಿಸಿತು ಮತ್ತೆ ಗಿಡದಲ್ಲಿಯ ಪುಟ್ಟ ಹಕ್ಕಿ ಹಾಡಿತು. ಕವಿ ಸಮಯವಲ್ಲ ಬಯಲ ತುಂಬ ನಿಶ್ಯಬ್ದ ಎಲೆ ಎಲ...

ಇರುವುವಂದದಾರೂಪ ಕನ್ನಡ ತಾಯ್ ಬೆಳದಿಂಗಳ ದೀಪ ಹೃದಯವಂತಿಕೆ ನಡೆ ನುಡಿಯೊಳಾಡೆ ಹಚ್ಚಿರೈ ಕನ್ನಡದ ದೀಪ || ಕತ್ತಲೆಯ ಓಡಿಸಿ ಇರುಳ ಸಜ್ಜನಿಕೆಯ ಕಳೆಯ ಬಯಸಿ ಭಾಂದವದೊಳಾಡೆ ಸೆಲೆಯಾಗಿ ಬನ್ನಿರೈ || ಬಾನಾಡಿ ಹಕ್ಕಿ ಬೆಳ್‌ಮುಗಿಲ ಇಂಪಾದ ತಂಗಾಳಿ ಅಲೆಯಲಿ...

ಭಕ್ತ ನಿನಗೊಂದು ಕಿವಿಮಾತು ಮಾಡದಿರು ಬಾಳು ವ್ಯಸನದಿ ತೂತು ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ! ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ ಆ ಪರಶಿವನೆ ನಿನ್ನ ಪರಮಾತ್ಮ ಪಾರ್‍ವತಿಯೇ ನಿನ್ನ ಮನಸ್ಸು ಹೌದು ಪ್ರಾಣಗಳೇ ಸಹಚರರು ದೇಹವೆ ಮನೆ ಇಂದ್ರಿಯ ಕ್ರಿ...

ಅದೇದಿನ ರಾತ್ರಿ ಸುಮಾರು ೮ ಗಂಟೆಯ ಸಮುಯದಲ್ಲಿ ವಿಶ್ವ ನಾಥನು ಹಜಾರದಮೇಲಿ ದೀಪದಿದುರಿಗೆ ಕುಳಿತುಕೊಂಡು ರಾಮಾಯಣದ ಪುಸ್ತಕದ ಪುಟಗಳನ್ನು ಮಗುಚಿ ಹಾಕುತ್ತಾ ಮಧ್ಯೆ ಮಧ್ಯೆ ಕಿವಿಕೊಟ್ಟುಕೇಳುತ್ತ ನಿಟ್ಟುಸಿ ರುಬಿಡುತ್ತಿದ್ದನು. ಹಾಗೆಯೇ ಏನನ್ನೋ ಯೋಜಿ...

(ಸಾವಿತ್ರಿ) ಕೊನೆಗಲ್ಲಿ ಬಂತು ಬರಿದೆನುವ ಬಯಲು ಆ ಉದಾಸೀನ ಬಾನು. ಕೋಟಿ ಪ್ರಶ್ನೆ ಏನೇನು ? ಇರಲಿ ಉತ್ತರವು ಬ್ರಹ್ಮ ನಾನು. ವಿಶ್ವ ಹೇಳುತಿದೆ ಮೌನ ಕೇಳುತಿದೆ ಮನನ ಏಕತಾನು. ಜೀವ ಜಿಜ್ಞಾಸೆಗಿಲ್ಲ ಕೊನೆಯು ಪ್ರತಿ ಮೌನ ಕಾಮಧೇನು. ಲವಲವಿಕೆಯೆಲ್ಲ ಎ...

1...3233343536...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...